varthabharthi

ಭಾರತ ವಾಯುಪಡೆಗೆ ಮತ್ತಷ್ಟು ಬಲ...

ಬಹು ಕೋಟಿ ಡಾಲರ್ ಹೆಲಿಕಾಪ್ಟರ್ ಒಪ್ಪಂದ ನಡೆದು ಮೂರೂವರೆ ವರ್ಷಗಳ ಬಳಿಕ ಅಮೆರಿಕದ ವಿಮಾನ ನಿರ್ಮಾಣ ಸಂಸ್ಥೆಯಾಗಿರುವ ಬೋಯಿಂಗ್ ತನ್ನ ಮೊದಲ ಅಪಾಚೆ ಗಾರ್ಡಿಯನ್ ದಾಳಿ ಹೆಲಿಕಾಪ್ಟರ್‌ಗಳನ್ನು ಭಾರತೀಯ ವಾಯು ಪಡೆಗೆ ಔಪಚಾರಿಕವಾಗಿ ಹಸ್ತಾಂತರಿಸಿದೆ. ವಾಯುಪಡೆಯ ಕಾಪ್ಟರ್‌ಗಳ ಗುಂಪಿನ ಆಧುನಿಕೀಕರಣದಲ್ಲಿ ಎಚ್-6ಇ (1) ಅಪಾಚೆ ಹೆಲಿಕಾಪ್ಟರ್ ಪ್ರಮುಖ ಹೆಜ್ಜೆಯಾಗಲಿದೆ ಎಂದು ಐಎಎಫ್‌ನ ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಭಾರತೀಯ ವಾಯು ಪಡೆಯ ಅಗತ್ಯಕ್ಕೆ ಸೂಕ್ತವೆನಿಸುವಂತೆ ಇದನ್ನು ಪರಿವರ್ತಿಸಲಾಗಿದೆ ಹಾಗೂ ಇದು ಪರ್ವತ ಪ್ರದೇಶದಲ್ಲಿ ಗಮನಾರ್ಹ ಸಾಮರ್ಥ್ಯ ಹೊಂದಿರುತ್ತದೆ ಎಂದು ಅವರು ಹೇಳಿದ್ದಾರೆ.

Comments (Click here to Expand)