varthabharthi

ಪಿಂಕ್ ಸಾರಥಿ...

ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ ನಿರ್ಭಯ ಯೋಜನೆಯಡಿ ರೂಪಿಸಿರುವ ನೂತನ ‘ಪಿಂಕ್ ಸಾರಥಿ’ ವಾಹನಗಳಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಸಿರು ನಿಶಾನೆ ತೋರಿಸಿದರು. ಗುರುವಾರ ವಿಧಾನಸೌಧದ ವೈಭವೋಪೇತ ಮೆಟ್ಟಿಲುಗಳ ಮೇಲೆ ಏರ್ಪಡಿಸಿದ್ದ ಸಮಾರಂಭದಲ್ಲಿ ನೂತನ ವಾಹನಗಳಿಗೆ ಚಾಲನೆ ನೀಡಿದ ಸಿಎಂ ಕುಮಾರಸ್ವಾಮಿ, ನಿರ್ಭಯ ಯೋಜನೆ ಯಡಿ 4.30ಕೋಟಿ ರೂ.ವೆಚ್ಚದಲ್ಲಿ 25 ವಾಹನಗಳು ನಗರದಲ್ಲಿ ಕಾರ್ಯ ನಿರ್ವಹಿಸಲಿದ್ದು, ಸಂಕಷ್ಟಕ್ಕೆ ಸಿಲುಕುವ ಮಹಿಳೆಯರ ನೆರವಿಗೆ ಧಾವಿಸಲಿವೆ ಎಂದರು.

Comments (Click here to Expand)