varthabharthi

ಮೋದಿಗೆ ‘ರೂಲ್ ಆಫ್ ನಿಷಾನ್ ಇಝ್ಝುದ್ದೀನ್’ ಗೌರವ

ದಾನ ವಿದೇಶಿ ನಾಗರಿಕರಿಗೆ ನೀಡುವ ಮಾಲ್ದೀವ್ಸ್‌ನ ಅತ್ಯುನ್ನತ ಗೌರವ ‘ರೂಲ್ ಆಫ್ ನಿಷಾನ್ ಇಝ್ಝುದ್ದೀನ್’ ಅನ್ನು ಮಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಗೆ ಮಾಲ್ದೀವ್ಸ್‌ನ ಅಧ್ಯಕ್ಷ ಇಬ್ರಾಹೀಂ ಮುಹಮ್ಮದ್ ಸಾಲಿಹ್ ಪ್ರದಾನ ಮಾಡಿದರು. ರಿಪಬ್ಲಿಕ್ ಸ್ಕ್ವೇರ್‌ಗೆ ಆಗಮಿಸಿದಾಗ ಪ್ರಧಾನಿ ಮೋದಿ ಅವರಿಗೆ ಗೌರವ ರಕ್ಷೆಯೊಂದಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು. ಈ ಗೌರವವನ್ನು ಅತ್ಯುನ್ನತ ಸೇವೆ ಸಲ್ಲಿಸುವ ವಿದೇಶಿ ಗಣ್ಯರಿಗೆ ಮಾಲ್ದೀವ್ಸ್ ಸರಕಾರ ನೀಡುತ್ತದೆ. ಭಾರತದ ಪ್ರಧಾನಿಗೆ ಮಾಲ್ದೀವ್ಸ್ ಅಧ್ಯಕ್ಷ ಪ್ರತಿಷ್ಠಿತ ಪುರಸ್ಕಾರ ಪ್ರದಾನ ಮಾಡಿ ಗೌರವಿಸಿದರು ಎಂದು ಮಾಲ್ದೀವ್ಸ್‌ನ ವಿದೇಶ ಸಚಿವಾಲಯ ಟ್ವೀಟ್ ಮಾಡಿದೆ.

Comments (Click here to Expand)