varthabharthi

ಕುಸಿದ ಆವರಣ ಗೋಡೆ: 15 ಸಾವು...

ವಸತಿ ಸಮುಚ್ಚಯ ಸಂಕೀರ್ಣದ ಆವರಣ ಗೋಡೆ ಕುಸಿದು ಕಾರ್ಮಿಕರ ತಾತ್ಕಾಲಿಕ ಶೆಡ್‌ಗಳ ಮೇಲೆ ಬಿದ್ದ ಪರಿಣಾಮ 15 ಮಂದಿ ಸಾವನ್ನಪ್ಪಿ ಮೂವರು ಗಾಯಗೊಂಡ ಘಟನೆ ಪುಣೆಯಲ್ಲಿ ಶನಿವಾರ ಮುಂಜಾನೆ ನಡೆದಿದೆ. ಮೃತರ ಪೈಕಿ ನಾಲ್ವರು ಮಕ್ಕಳು ಮತ್ತು ಓರ್ವ ಮಹಿಳೆ ಸೇರಿದ್ದಾರೆ. ಪುಣೆಯಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ವ್ಯಾಪಕ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ತೀವ್ರ ಮಳೆಯ ಪರಿಣಾಮವಾಗಿ ವಸತಿ ಸಮುಚ್ಚಯದ ಗೋಡೆ ಶಿಥಿಲಗೊಂಡು ಕುಸಿದಿದೆ ಜೊತೆಗೆ ಪಕ್ಕದಲ್ಲೇ ನಿಲ್ಲಿಸಲಾಗಿದ್ದ ಕಾರುಗಳೂ ಜಾರಿ ಕಾರ್ಮಿಕರ ಶೆಡ್ ಮೇಲೆ ಬಿದ್ದಿವೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.

Comments (Click here to Expand)