varthabharthi

ಇಂಜಿನಿಯರ್ ಮೇಲೆ ಕೆಸರು ಸುರಿದ ಕಾಂಗ್ರೆಸ್ ಶಾಸಕ

ಕಾಂಗ್ರೆಸ್ ಶಾಸಕ ನಿತೇಶ್ ರಾಣೆ ಮತ್ತವರ ಸಂಗಡಿಗರು ಮುಂಬೈ ಬಳಿಯ ಹೆದ್ದಾರಿಯಲ್ಲಿ ಸರಕಾರಿ ಅಧಿಕಾರಿಯ ಮೇಲೆ ಬಕೆಟ್‌ನಲ್ಲಿ ಕೆಸರು ತುಂಬಿ ಸುರಿದ ಘಟನೆ ನಡೆದಿದೆ. ಘಟನೆಯ ವೀಡಿಯೊ ದೃಶ್ಯಾವಳಿ ವೈರಲ್ ಆದ ಬಳಿಕ ಶಾಸಕ ರಾಣೆ ಹಾಗೂ ಬೆಂಬಲಿಗರನ್ನು ಪೊಲೀಸರು ಬಂಧಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ನಾರಾಯಣ ರಾಣೆಯ ಪುತ್ರ ನಿತೇಶ್ ರಾಣೆ ಮುಂಬೈ-ಗೋವಾ ಹೆದ್ದಾರಿಯಲ್ಲಿ ನಡೆಯುತ್ತಿರುವ ರಸ್ತೆ ದುರಸ್ತಿ ಕಾಮಗಾರಿಯ ವೀಕ್ಷಣೆಗೆ ದಿಢೀರ್ ಭೇಟಿ ನೀಡಿದ್ದರು. ಆಗ ರಸ್ತೆಯ ದು:ಸ್ಥಿತಿಯನ್ನು ಕಂಡು ತಾಳ್ಮೆ ಕಳೆದುಕೊಂಡ ಶಾಸಕ ರಾಣೆ, ಇಂಜಿನಿಯರ್ ಪ್ರಕಾಶ್ ಶೆಡೇಕರ್ ಎಂಬವರನ್ನು ತರಾಟೆಗೆತ್ತಿಕೊಂಡಿದ್ದಾರೆ.

Comments (Click here to Expand)