varthabharthi

ಐಎನ್‌ಎಸ್ ಖಾಂಡೇರಿ ಜಲಾಂತರ್ಗಾಮಿ ನೌಕಾಪಡೆಗೆ ನಿಯೋಜನೆ

ಶತ್ರುಗಳ ನಿರ್ದೇಶಿತ ಸ್ಥಾವರಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವುಳ್ಳ ಅತ್ಯಾಧುನಿಕ ಸ್ಕಾರ್ಪಿಯನ್ ಶ್ರೇಣಿಯ ಐಎನ್‌ಎಸ್ ಖಾಂಡೇರಿ ಜಲಾಂತರ್ಗಾಮಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಶನಿವಾರ ಭಾರತೀಯ ಸೇನಾಪಡೆಗೆ ನಿಯೋಜಿಸಿದರು. ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಮ್‌ಬೀರ್ ಸಿಂಗ್, ನೌಕಾಸೇನೆಯ ಹಿರಿಯ ಅಧಿಕಾರಿಗಳು ಹಾಗೂ ಇತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ಪಿ-17 ಶಿವಾಲಿಕ್ ವರ್ಗದ ಲಘು ಯುದ್ಧನೌಕೆ ನೀಲಗಿರಿ ಹಾಗೂ ವಿಮಾನವಾಹಕ ಡ್ರೈಡಾಕ್(ಒಣ ಹಡಗುಕಟ್ಟೆ) ಅನ್ನೂ ನೌಕಾಪಡೆಗೆ ನಿಯೋಜಿಸಲಾಗಿದೆ.

Comments (Click here to Expand)