varthabharthi

ಹಬ್ಬದ ರಂಗೇರಿದ ಮಾರುಕಟ್ಟೆಗಳು

ನಾಡಹಬ್ಬ ದಸರಾಗೆ ಖರೀದಿಯ ಭರಾಟೆ ಜೋರಾಗಿದ್ದು, ಬೆಂಗಳೂರಿನ ವಿವಿಧ ಮಾರುಕಟ್ಟೆಗಳಲ್ಲಿ ನಾನಾ ವಸ್ತುಗಳ ಮಾರಾಟ ರಂಗೇರಿದ್ದು, ಬೆಲೆ ಏರಿಕೆಯ ನಡುವೆಯೂ ಗ್ರಾಹಕರು ಖರೀದಿಯಲ್ಲಿ ತೊಡಗಿದ್ದಾರೆ. ನಗರದ ಕೆ.ಆರ್. ಮಾರುಕಟ್ಟೆ, ಮಡಿವಾಳ ಮಾರುಕಟ್ಟೆ, ಯಶವಂತಪುರ, ಗಾಂಧೀಬಜಾರ್, ಮಲ್ಲೇಶ್ವರಂ ಸೇರಿದಂತೆ ನಾನಾ ಮಾರುಕಟ್ಟೆಗಳು ಹೂವು, ಹಣ್ಣು, ಬೂದಕುಂಬಳ, ನಿಂಬೆ ಹಣ್ಣುಗಳಿಂದ ಕಳೆಗಟ್ಟಿವೆ.
ಸೋಮವಾರ ಆಯುಧಪೂಜೆ ಹಾಗೂ ಮಂಗಳವಾರ ವಿಜಯದಶಮಿ ಆಚರಣೆ ಮಾಡಲಾಗುತ್ತದೆ. ಇವೆರಡಕ್ಕೂ ಮುನ್ನ ರವಿವಾರ ಹಾಗೂ ಶನಿವಾರಗಳಿದ್ದು, ಸತತ ನಾಲ್ಕು ದಿನಗಳ ರಜೆಯಿದೆ. ಆದುದರಿಂದ ಅನೇಕರು ಮಾರುಕಟ್ಟೆಗಳಿಗೆ ಆಗಮಿಸಿದ್ದರು.

Comments (Click here to Expand)