varthabharthi

ಬಾಂಧವ್ಯದ ಬಂಡೆ...

ಅನೌಪಚಾರಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ತಮಿಳುನಾಡಿನ ಪ್ರಸಿದ್ಧ ಪಾರಂಪರಿಕ ಪಟ್ಟಣ ಮಹಾಬಲಿಪುರಂಗೆ ಶುಕ್ರವಾರ ಆಗಮಿಸಿದ ಚೀನಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿನ ವಿಶ್ವಪ್ರಸಿದ್ಧ ಬೃಹತ್ ಬಂಡೆಯನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಉಭಯ ನಾಯಕರು ಪರಸ್ಪರ ಕೈಗಳನ್ನು ಮೇಲಕ್ಕೆತ್ತಿ ಚೀನಾ-ಭಾರತ ಬಾಂಧವ್ಯದ ದೃಢತೆಯ ಸಂದೇಶ ಸಾರಿದರು. ಇಳಿಜಾರಿನಲ್ಲಿ ವಿಸ್ಮಯಕಾರಿ ರೀತಿಯಲ್ಲಿ ವಾರೆಯಾಗಿ ನಿಂತಿರುವ ಈ ಬೃಹತ್ ಬಂಡೆಯು ಮಹಾಬಲಿಪುರಂನ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. 6 ಮೀಟರ್ ಎತ್ತರ ಹಾಗೂ 5 ಮೀಟರ್ ಅಗಲವಿದ್ದು, 250 ಟನ್ ತೂಕ ಹೊಂದಿದೆ ಎಂದು ಅಂದಾಜಿಸಲಾಗಿದೆ.

Comments (Click here to Expand)