ಪರೀಕ್ಷೆಯಲ್ಲಿ ನಕಲು ತಪ್ಪಿಸಲು 'ಮಾಸ್ಟರ್ ಪ್ಲಾನ್'!
ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಾಗ ಕಾಪಿ ಮಾಡುತ್ತಾರೆ ಎಂಬ ಕಾರಣಕ್ಕೆ ಅವರ ತಲೆಗೆ ರಟ್ಟಿನ ಬಾಕ್ಸ್ ಹಾಕಿಸಿ, ಕಣ್ಣು ಮಾತ್ರ ಕಾಣಿಸುವಂತೆ ಕಿಂಡಿ ಬಿಟ್ಟು ಪರೀಕ್ಷೆ ಬರೆಸಿದ ಘಟನೆ ಹಾವೇರಿಯ ಭಗತ್ ಪಿಯುಸಿ ಕಾಲೇಜಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಅಕ್ಟೋಬರ್ 17 ರಂದು ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಅರ್ಧವಾರ್ಷಿಕ ಪರೀಕ್ಷೆ ನಡೆಯುತ್ತಿತ್ತು. ವಿದ್ಯಾರ್ಥಿಗಳು ಕಾಪಿ ಮಾಡಬಾರದು ಎಂಬ ಕಾರಣಕ್ಕೆ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳ ತಲೆಗೆ ರಟ್ಟಿನ ಬಾಕ್ಸ್ ಹಾಕಿಸಿತ್ತು. ಅವರೆಲ್ಲರೂ ಉಸಿರಾಡಲೂ ಕಷ್ಟಪಡುತ್ತ ಪರೀಕ್ಷೆ ಬರೆದಿದ್ದಾರೆನ್ನಲಾಗಿದೆ.
Next Story