varthabharthi

ನೌಕಾ ಪಡೆಗೆ ಮೊದಲ ಮಹಿಳಾ ಪೈಲಟ್

ಕೇರಳದ ಕೊಚ್ಚಿಯಲ್ಲಿ ಕಾರ್ಯಾಚರಣೆ ತರಬೇತಿ ಪೂರ್ಣಗೊಳಿಸಿದ ಸಬ್ ಲೆಫ್ಟಿನೆಂಟ್ ಶಿವಾಂಗಿ ಅವರನ್ನು ಭಾರತೀಯ ನೌಕಾ ಪಡೆ ಸೋಮವಾರ ತನ್ನ ಮೊದಲ ಮಹಿಳಾ ಪೈಲಟ್ ಆಗಿ ನೇಮಿಸಿದೆ. ಬಿಹಾರದ ಮುಝಫ್ಫರ್‌ಪುರ ಜಿಲ್ಲೆಯ ಶಿವಾಂಗಿ ನೌಕಾಪಡೆಯ ಡೋರ್ನಿಯರ್ ಕಣ್ಗಾವಲು ವಿಮಾನದ ಹಾರಾಟ ನಡೆಸಲಿದ್ದಾರೆ. ಶಿವಾಂಗಿ ಅವರದ್ದು ಮುಂಚೂಣಿ ಹೋರಾಟದ ಪಾತ್ರ ಎಂದು ಹೇಳಿರುವ ಉಪ ಅಡ್ಮಿರಲ್ ಎ.ಕೆ. ಚಾವ್ಲಾ ಅವರಿಗೆ ‘ಗೋಲ್ಡನ್ ವಿಂಗ್ಸ್’ ನೀಡಿದ್ದಾರೆ. ಈ ಕೋರ್ಸ್‌ನ ಪಠ್ಯಕ್ರಮ ಮಹಿಳೆ ಹಾಗೂ ಪುರುಷರಿಗೆ ಸಂಪೂರ್ಣವಾಗಿ ಒಂದೇ ರೀತಿಯಲ್ಲಿದೆ.

Comments (Click here to Expand)