varthabharthi

‘ಸಂವಿಧಾನವನ್ನು ಗೌರವಿಸಿ...’

ದಿಲ್ಲಿಯ ಜಾಮಾ ಮಸೀದಿಯ ಆವರಣದಲ್ಲಿ ಶುಕ್ರವಾರ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಭೀಮ್ ಆರ್ಮಿ ವರಿಷ್ಠ ಚಂದ್ರಶೇಖರ್ ಆಝಾದ್ ‘ಭಾರತ ಸಂವಿಧಾನ’ದ ಪ್ರತಿಯೊಂದನ್ನು ಪ್ರದರ್ಶಿಸಿದರು. ಜಾಮಾ ಮಸೀದಿ ಪ್ರತಿಭಟನೆಗೆ ಸಂಬಂಧಿಸಿ ಬಂಧಿತರಾಗಿ, ಜಾಮೀನು ಬಿಡುಗಡೆ ಪಡೆದಿರುವ ಭೀಮ್ ಆರ್ಮಿ ವರಿಷ್ಠ ಚಂದ್ರಶೇಖರ್ ಆಝಾದ್‌ಗೆ ದಿಲ್ಲಿ ತೊರೆಯಲು ನ್ಯಾಯಾಲಯ ವಿಧಿಸಿದ ಅಂತಿಮಗಡುವು ಮುಗಿಯುವ ಕೆಲವೇ ತಾಸುಗಳ ಮೊದಲು ಜಾಮಾ ಮಸೀದಿಯ ಆವರಣಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಆನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ‘‘ನಾನು ನಿಮ್ಮನ್ನು ಗೌರವಿಸುತ್ತೇನೆ... ನೀವು ಸಂವಿಧಾನವನ್ನು ಗೌರವಿಸಿ. ನಮ್ಮ ಸಂವಿಧಾನ ಜಗತ್ತಿನಲ್ಲೇ ಅತ್ಯುತ್ತಮವಾದುದು’’ ಎಂದು ಆಝಾದ್, ಪ್ರಧಾನಿ ನರೇಂದ್ರ ಮೋದಿಗೆ ಕರೆ ನೀಡಿದ್ದಾರೆ.

Comments (Click here to Expand)