varthabharthi

‘ಚಾರ್ಲ್ಸ್-448’ಗೆ ಚಾಲನೆ

ಎನ್‌ಎಂಪಿಟಿ ಸಮುದ್ರ ತಟದಲ್ಲಿ ಇಂದು ಭಾರತೀಯ ಕೋಸ್ಟ್ ಗಾರ್ಡ್‌ನ ಇಂಟರ್ ಸೆಪ್ಟರ್ ಬೋಟ್ ಚಾರ್ಲ್ಸ್-448ಗೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್ ಭಾಸ್ಕರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಕರ್ನಾಟಕದ 320 ಕಿ.ಮೀ. ಉದ್ದದ ಕರಾವಳಿ ತೀರದ ಭದ್ರತೆ ಹಾಗೂ ರಕ್ಷಣಾ ಕಾರ್ಯದಲ್ಲಿ ಈ ನೂತನ ಇಂಟರ್ ಸೆಪ್ಟರ್ ನೆರವಾಗಲಿದೆ ಎಂದರು.ಕೆಐಎಡಿಬಿಯಿಂದ ಕೋಸ್ಟ್‌ಗಾರ್ಡ್ ಅಕಾಡಮಿ ನಿರ್ಮಾಣಕ್ಕೆ ಕೆಂಜಾರುವಿನಲ್ಲಿ 160 ಎಕರೆ ಜಾಗ ಒದಗಿಸಲಾಗಿದ್ದು ಪ್ರಕ್ರಿಯೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು. ಕಳೆದ 2019ರಲ್ಲಿ ಕರ್ನಾಟಕವನ್ನು ಬಾಧಿಸಿದ್ದ ಅತಿವೃಷ್ಟಿ, ನೆರೆಯ ಸಂದರ್ಭದಲ್ಲಿ ಕೋಸ್ಟ್ ಗಾರ್ಡ್ 1,000ಕ್ಕೂ ಮಿಕ್ಕಿ ಜೀವ ರಕ್ಷಣೆ ಮಾಡಿದೆ. ಅಲ್ಲದೆ, ಕರಾವಳಿಯಲ್ಲೂ 195 ಜೀವಗಳನ್ನು ರಕ್ಷಿಸಿ ಕರಾವಳಿಯಲ್ಲಿ ಸುರಕ್ಷಿತ ವಾತಾವರಣಕ್ಕೆ ಕಾರಣವಾಗಿದೆ ಎಂದು ಶ್ಲಾಘಿಸಿದರು

Comments (Click here to Expand)