varthabharthi

ಈ ಶಾರ್ಕ್ ಹೊಟ್ಟೆಯಲ್ಲಿ ಏನೇನಿರಬಹುದು ಎಂದು ನೀವು ಊಹಿಸಲು ಸಾಧ್ಯವೇ ?

ಇಂಟರ್ನೆಟ್ ನಲ್ಲಿ ವೈರಲ್ ಆಗಿರುವ ಈ ವೀಡಿಯೋದಲ್ಲಿ ಒಂದು ಸತ್ತ ಶಾರ್ಕ್ ಅನ್ನು ವ್ಯಕ್ತಿಯೊಬ್ಬ ಕತ್ತರಿಸುವ ದೃಶ್ಯವಿದೆ. ಆಗ ಆ ಶಾರ್ಕ್ ನ ಹೊಟ್ಟೆಯಿಂದ ಸುಮಾರು 30 ಮರಿ ಶಾರ್ಕ್ ಗಳು  ಹೊರಬಂದಿವೆ. ಅವುಗಳನ್ನು ನೀರಿಗೆ ಬಿಡಲಾಗಿದೆ.  ಈಗಾಗಲೇ ಈ ವೀಡಿಯೊವನ್ನು ಯೂಟೂಬ್ ನಲ್ಲಿ  600,000 ಹೆಚ್ಚು ಮಂದಿ ವೀಕ್ಷಿಸಿದ್ದಾರೆ. 

ಈ ಮರಿ ಶಾರ್ಕ್ ಗಳು ಹಲ್ಲುಗಳೊಂದಿಗೆ ಹುಟ್ಟಿ ತಕ್ಷಣ ತಾಯಿಯಿಂದ ದೂರ ಹೋಗಿ  ತಮ್ಮಷ್ಟಕ್ಕೆ ತಾವೇ ಬೆಳೆಯುತ್ತವೆ . ಇಲ್ಲದಿದ್ದರೆ ಶಾರ್ಕ್ ಗಳೇ ತಮ್ಮ ಮರಿಗಳನ್ನು ತಿಂದು ಹಾಕುತ್ತವೆ ಎಂದು ಹೇಳಲಾಗುತ್ತದೆ. ಶಾರ್ಕ್ ಗಳಿಗೆ ಹೊಟ್ಟೆ ತುಂಬಿದ್ದರೂ ತಮಗೆ ಇಷ್ಟವಾಗಿದ್ದನ್ನು ನುಂಗಿ ಬಿಡುವ ಅಭ್ಯಾಸವಿದೆ. 

Comments (Click here to Expand)