varthabharthi

ಮಂಗಳೂರು: ಪಾರ್ಕಿಂಗ್ ಅತಿಕ್ರಮಣದ ವಿರುದ್ಧ ಮೇಯರ್ ಕಾರ್ಯಾಚರಣೆ

ನಗರದಲ್ಲಿ ಸುಗಮ ಸಂಚಾರ ವ್ಯವಸ್ಥೆಗೆ ಪೂರಕ ಕಾರ್ಯಾಚರಣೆಯನ್ನು ಮನಪಾ ಮೇಯರ್ ಕೈಗೊಂಡರು. ನಗರದ ರಾವ್ ಆ್ಯಂಡ್ ರಾವ್ ರಸ್ತೆಯ ಮಿಷನ್ ಸ್ಟ್ರೀಟ್‌ನಲ್ಲಿ ಪಾರ್ಕಿಂಗ್ ಅತಿಕ್ರಮಣ ತೆರವು ಕಾರ್ಯಾಚರಣೆ ಇಂದು ಬೆಳಗ್ಗೆ ನಡೆಯಿತು. ಈ ವೇಳೆ ರಸ್ತೆ ಬದಿಯ 20 ಸೆಂಟ್ಸ್ ಜಾಗವನ್ನು ಅತಿಕ್ರಮಿಸಿ ನಿರ್ಮಿಸಿದ್ದೆನ್ನಲಾದ ಕಟ್ಟಡವನ್ನು ಜೇಸಿಬಿ ಬಳಸಿ ತೆರವುಗೊಳಿಸಲಾಯಿತು. ಅನಧಿಕೃತ ಪಾರ್ಕಿಂಗ್, ಗೂಡಂಡಿಗಳನ್ನು ಈ ವೇಳೆ ತೆರವುಗೊಳಿಸುವ ಮೂಲಕ ರಸ್ತೆ ಬದಿ ಫುಟ್‌ಪಾತ್ ಅನ್ನು ಅತಿಕ್ರಮಣಮುಕ್ತಗೊಳಿಸಲಾಯಿತು.

Comments (Click here to Expand)