ವೈದ್ಯಕೀಯ ವಿಜ್ಞಾನದಲ್ಲಿ ಐವಿಎಫ್ ಪಾತ್ರ ಪ್ರಮುಖ: ಡಾ.ಎಂ.ಶಾಂತರಾಂ ಶೆಟ್ಟಿ
ಕೊಣಾಜೆ: ವೈದ್ಯಕೀಯ ವಿಜ್ಞಾನದಲ್ಲಿ ಐವಿಎಫ್ ಪ್ರಮುಖ ಪಾತ್ರವಿದ್ದು, ಮಗುವಿಗೆ ಜನನ, ಹೆತ್ತವರಿಗೆ ಖುಷಿ ನೀಡುವ ಕಾರ್ಯ ಐವಿಎಫ್ ನಿಂದ ಸಾಧ್ಯವಾಗಿದೆ. 40-45% ಯಶಸ್ಸನ್ನು ನಿಟ್ಟೆ ಸಂಸ್ಥೆಯ ಐವಿಎಫ್ ಸೆಂಟರ್ ಕಳೆದ 10 ವರ್ಷಗಳಲ್ಲಿ ಸಾಧಿಸಿರುವುದು ಶ್ಲಾಘನೀಯ ಎಂದರು.
ನಿಟ್ಟೆ ವಿಶ್ವವಿದ್ಯಾಲಯ( ಪರಿಗಣಿತ) ವಿ.ವಿ.ಯದ ಸಹ ಕುಲಾಧಿಪತಿ ಡಾ.ಎಂ.ಶಾಂತರಾಂ ಶೆಟ್ಟಿ ಅಭಿಪ್ರಾಯಪಟ್ಟರು.
ನಿಟ್ಟೆ ವಿಶ್ವವಿದ್ಯಾಲಯ( ಪರಿಗಣಿತ) ದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಪ್ರಸೂತಿ ಮತ್ತು ಸ್ತ್ರೀರೋಗಶಾಸ್ತ್ರ ವಿಭಾಗದ ಫರ್ಟಿಲಿಟಿ ಮತ್ತು ರಿಪ್ರಾಡಕ್ಟಿವ್ ಮೆಡಿಸಿನ್ ಸೆಂಟರ್ ನ 'ಕ್ಷೇಮಾ ಐವಿಎಫ್ ಲ್ಯಾಬ್' ಗೆ ಯಶಸ್ವಿ ಹತ್ತು ವರ್ಷಗಳ ಪೂರೈಸಿದ ಹಿನ್ನೆಲೆಯಲ್ಲಿ ಇಆರ್ ಟಿ ಹಾಗೂ ಐವಿಎಫ್ ನ ನೂತನ ಸೆಂಟರಿನ ಉದ್ಘಾಟನೆ ಹಾಗೂ 10 ನೇ ವಾರ್ಷಿ ಕೋತ್ಸವ ಸಮಾರಂಭಕ್ಕೆ ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಆವಿಷ್ಕಾರ್ ಸಭಾಂಗಣದಲ್ಲಿ ಚಾಲನೆ ನೀಡಿ ಮಾತನಾಡಿದರು.
ವೈದ್ಯಕೀಯ ಸೇವೆಯನ್ನು ಪರಿಣಾಮಕಾರಿಯಾಗಿಸಲು ನಿಟ್ಟೆ ಪರಿಗಣಿತ ವಿ.ವಿ ಹೊಸ ಸೆಂಟರ್ ಗಳನ್ನು ಆರಂಭಿಸುತ್ತಲೇ ಬಂದಿದ್ದು, ಈ ಬಾರಿ ಎಂಎಸ್ಸಿ ಎಂಬ್ರಿಯಾಲಜಿ ಪ್ರಸಕ್ತ ವರ್ಷದಿಂದ ಆರಂಭಗೊಳ್ಳಲಿದೆ. ಇಡೀ ಮಂಗಳೂರಿನಲ್ಲಿ ನಿಟ್ಟೆ ವಿ.ವಿಯಲ್ಲಿ 10 ವರ್ಷಗಳ ಹಿಂದೆ ಆರಂಭಗೊಂಡ ಐವಿಎಫ್ ಸೆಂಟರ್ ಪ್ರಥಮದ್ದಾಗಿದೆ ಎಂದರು.
ನೂತನ ಸೆಂಟರ್ ಉದ್ಘಾಟಿಸಿದ ಖ್ಯಾತ ಐವಿಎಫ್ ತಜ್ಞ ಹಾಗೂ ಬ್ರಿಟಿಷ್ ಫರ್ಟಿಲಿಟಿ ಸೊಸೈಟಿಯ ಅಧ್ಯಕ್ಷರಾದ ಪ್ರೊ.ಅಲಿಸನ್ ಮುರ್ಡೋಕ್ ಶುಭಹಾರೈಸಿದರು. ನಿಟ್ಟೆ ವಿವಿ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು.
ಯುಎಸ್ ಆರ್ , ಸಿಆರ್ ಆರ್ ಉಪಾಧ್ಯಕ್ಷ ಡಾ.ಸತೀಶ್ ಕುಮಾರ್ ಭಂಡಾರಿ ಮುಖ್ಯ ಅತಿಥಿಯಾಗಿದ್ದರು. ಕ್ಷೇಮಾ ಐವಿಎಫ್ ಲ್ಯಾಬ್ ನ ಮುಖ್ಯಸ್ಥ ಪ್ರಸನ್ನ ಕುಮಾರ್ ಸ್ವಾಗತಿಸಿದರು. ಮಯೂರಿ ಚಾಟರ್ಜಿ, ಪ್ರತೀಕ್ಷಾ ನಿರೂಪಿಸಿದರು. ದಕ್ಷಿಣ ಮೂರ್ತಿ ಸ್ವಾಮಿನಾಥನ್ ವಂದಿಸಿದರು.