varthabharthi


ಕಾಡಂಕಲ್ಲ್ ಮನೆ

-ಅಜ್ಜಿಯ ಮದುವೆ ಮಾತು!--

ವಾರ್ತಾ ಭಾರತಿ : 10 Sep, 2016

ಅಲ್ಲೊಂದು ಮುಳಿ ಹುಲ್ಲಿನ ಮನೆ. ಮನೆಯಲ್ಲಿ ನಾನು, ತಂದೆ, ತಾಯಿ, ತಂಗಿ ಒಟ್ಟು ನಾಲ್ವರು. ನಮ್ಮದು ತುಂಬಾ ಬಡ ಕುಟುಂಬ. ಮನೆ ಪಕ್ಕ ತಂದೆಗೆ ಒಂದು ಕಟ್ಟಿಗೆ ಮಾರುವ ಡಿಪೋ ಇತ್ತು. ಟ್ಟಿಗೆ ಡಿಪೋ ಎಂದರೆ ಒಡೆದ ಕಟ್ಟಿಗೆಯಲ್ಲ. ಸುಮಾರು ಮೂರು ಅಡಿಗಳಷ್ಟು ಉದ್ದದ ಸಪೂರದ 20-25ರಷ್ಟು ನೇರವಾದ ಕೊಂಬೆಗಳನ್ನು ಒಟ್ಟಿಗೆ ಸೇರಿಸಿ ಮರದ ತೊಗಲಿನಿಂದ ಗಂಟು ಕಟ್ಟಿ ಮಾರುವುದು. ಇದಕ್ಕೆ ‘ಸೂಡಿ’ ಎಂದು ಹೆಸರು. ಒಂದು ಸೂಡಿಗೆ ಇಷ್ಟೂಂತ ಬೆಲೆ. ತಂದೆಯ ವ್ಯಾಪಾರವೇ ನಮಗೆ ಜೀವನಾಧಾರ. ನಾನು ಶಾಲೆ ಓದಿಲ್ಲ. ಮದ್ರಸದಲ್ಲಿ ಓದಿದ್ದೇನೆ. ತಾಯಿ ಬೀಡಿ ಕಟ್ಟುತ್ತಿದ್ದರು. ನಾನು ಸಹಾಯ ಮಾಡುತ್ತಿದ್ದೆ. ಸಂಜೆ ಕಂಪೆನಿಗೆ ಬೀಡಿ ತೆಗೆದುಕೊಂಡು ಹೋಗಿ ಎಲೆ-ಸೊಪ್ಪು, ನೂಲು ತರುತ್ತಾ ಇದ್ದೆ. ತಂದೆ ಎಲ್ಲಿಗಾದರೂ ಹೋದರೆ ತಾಯಿ ಡಿಪೋವನ್ನು ನೋಡಿಕೊಳ್ಳುತ್ತಿದ್ದರು. ನಾನು ದೊಡ್ಡವಳಾಗುತ್ತಿದ್ದಂತೆಯೇ ತಾಯಿ ನನ್ನನ್ನು ಮನೆಯ ಹೊರಗೆ ಎಲ್ಲಿಗೂ ಹೋಗಲು ಬಿಡುತ್ತಿರಲಿಲ್ಲ. ಯಾಕೆಂದರೆ ನಾನು ಅಷ್ಟೊಂದು ಸುಂದರಿಯಾಗಿದ್ದೆ. ಮೊಣಕಾಲಿನ ವರೆಗಿರುವ ನನ್ನ ತಲೆಗೂದಲು ನನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಅದೆಷ್ಟೋ ಹೆಣ್ಣು ಮಕ್ಕಳು, ಹೆಂಗಸರು ನನ್ನ ತಲೆಗೂದಲನ್ನು ನೋಡಿ ಅಸೂಯೆ ಪಟ್ಟುಕೊಳ್ಳುತ್ತಿದ್ದುದನ್ನು ನಾನು ನೋಡಿದ್ದೇನೆ. ತ್ತರ ದಷ್ಟ ಪುಷ್ಟವಾಗಿ ಬಿಳಿ ಬಿಳಿಯಾಗಿದ್ದ ನನ್ನನ್ನು ನೋಡಲು ಅದೆಷ್ಟೋ ಪೋಲಿ ಹುಡುಗರು ನನ್ನ ಮನೆಯ ಬಳಿ ಸುಳಿಯುತ್ತಿರುವುದನ್ನೂ ನಾನು ಗಮನಿಸಿದ್ದೆ. ತಾಯಿಗೆ ಆದಷ್ಟು ಬೇಗ ನನ್ನ ಮದುವೆ ಮಾಡಿ ಮುಗಿಸಬೇಕು ಎಂದು ಕಾತರ. ಅದಕ್ಕಾಗಿ ಅವರು ತಂದೆಯನ್ನು ಯಾವಾಗಲೂ ಪೀಡಿಸುತ್ತಿದ್ದರು. ತಂದೆಗೆ ನನ್ನ ರೂಪ, ಗುಣದ ಬಗ್ಗೆ ಹೆಮ್ಮೆ. ೀನು ನೋಡ್ತಾ ಇರು. ನನ್ನ ಈ ಸುಂದರಿ, ರಾಜಕುಮಾರಿಯನ್ನು ಯಾರಾದರೂ ರಾಜಕುಮಾರ ಹುಡುಕಿಕೊಂಡು ಬಂದು, ಕೇಳಿ ಒತ್ತಾಯ ಮಾಡಿ ಮದುವೆಯಾಗುತ್ತಾನೆ. ಕಾಲಿಪೋಲಿಗಳಿಗೆ ನಾನು ನನ್ನ ಮಗಳನ್ನು ಕೊಡುವುದಿಲ್ಲ. ಆತ ದೊಡ್ಡ ಶ್ರೀಮಂತನಾಗಿರಬೇಕು. ದೊಡ್ಡ ಜಮೀನ್ದಾರನಾಗಿರಬೇಕು. ಮಾತ್ರವಲ್ಲ ಅವಳಿಗೆ ತಕ್ಕ ವರನಾಗಿರಬೇಕು. ನನ್ನ ಮಗಳನ್ನು ನೀನು ಏನೂಂತ ಎಣಿಸಿದ್ದಿ. ಇಡೀ ಊರಿಗೆ ಊರೇ ಅವಳ ರೂಪ, ಗುಣದ ಬಗೆಗೆ ಮಾತನಾಡುತ್ತಿದೆ ಗೊತ್ತಾ ನಿನಗೆ.’’ ತಂದೆ ಹೆಮ್ಮೆಯಿಂದ ತಾಯಿಗೆ ಎದುರು ಹೇಳುತ್ತಿದ್ದರು. ಅವರಿಗೆ ನನ್ನ ಸೌಂದರ್ಯದ ಬಗ್ಗೆ ಅಷ್ಟು ಹೆಮ್ಮೆ, ವಿಶ್ವಾಸ. ಅಷ್ಟೊಂದು ಭರವಸೆಯಿತ್ತು. ುನೆಯಲ್ಲಿ ಒಂದು ಒಟ್ಟೆ ಮುಕ್ಕಾಲು ಇಲ್ಲ. ಮಂಜೆಟ್ಟಿ ತೂಕದ ಚಿನ್ನ ಇಲ್ಲ. ಕಾಯ್ತಿ ಇರಿ, ರಾಜಕುಮಾರ ಬರ್ತಾನೆ. ಹೀಗೆ ಕಾಯುತ್ತಾ ಇದ್ದರೆ ಅವಳು ಮುದುಕಿಯಾಗುತ್ತಾಳೆ ಅಷ್ಟೇ. ನಿಮಗಿದೆಲ್ಲ ಅರ್ಥ ಆಗುವುದಿಲ್ಲ. ಬೆಳೆದ ಹೆಣ್ಣು ಮಕ್ಕಳು ಎಂದರೆ ಸೆರಗಿನಲ್ಲಿ ಕಟ್ಟಿಕೊಂಡ ಕೆಂಡ ಅದು. ಎಷ್ಟು ದಿನಾಂತ ಕಟ್ಟಿಕೊಳ್ಳಲಿಕ್ಕಾಗ್ತದೆ.’’ ಅಮ್ಮ ಒಮ್ಮಾಮ್ಮೆ ಅಪ್ಪನ ಜೊತೆ ಜಗಳಕ್ಕೇ ನಿಲ್ಲುತ್ತಿದ್ದರು. ಒಮ್ಮಿಮ್ಮೆ ಮುಸಿ ಮುಸಿ ಅಳುತ್ತಾ ಮೌನವಾಗಿ ಬಿಡುತ್ತಿದ್ದರು. ದಿನ-ತಿಂಗಳು-ವರ್ಷಗಳು ಕಳೆದಂತೆ ಅಮ್ಮನ ಮಾತುಗಳು ನಿಜವಾಗ ತೊಡಗಿದವು. ಈ ರಾಜ ಕುಮಾರಿಯನ್ನು ವರಿಸಲು ಯಾವ ರಾಜಕುಮಾರನೂ ಹುಡುಕಿಕೊಂಡು ಬರಲಿಲ್ಲ. ಆಗ ಈಗಿನ ಹಾಗಲ್ಲ, ಹೆಣ್ಣು ಮಕ್ಕಳಿಗೆ 14-15 ವರ್ಷ ತುಂಬುವಾಗಲೇ ಮದುವೆ ಮಾಡಿ ಬಿಡುತ್ತಿದ್ದರು. ನನಗೆ 16 ತುಂಬಿದಾಗ ತಂದೆಯ ನಂಬಿಕೆ, ಭರವಸೆಗಳೆಲ್ಲ ಕುಸಿಯತೊಡಗಿದವು. ಅವರೇ ಗಂಡು ಹುಡುಕ ತೊಡಗಿದರು. ಊರೂರು ಸುತ್ತ ತೊಡಗಿದರು. ಬಂಧುಗಳು, ಗೆಳೆಯರು, ಬ್ರೋಕರ್‌ಗಳು - ಹೀಗೆ ಸಿಕ್ಕ ಸಿಕ್ಕವರಲ್ಲಿ ನನ್ನ ಮಗಳಿಗೊಂದು ಗಂಡು ಹುಡುಕಿ ಕೊಡಿ ಎಂದು ಅಂಗಲಾಚ ತೊಡಗಿದರು. ಎಲ್ಲರೂ ಕೇಳುವುದು ಒಂದೇ ‘‘ಎಷ್ಟು ವರದಕ್ಷಿಣೆ ಕೊಡ್ತೀರಿ - ಎಷ್ಟು ಚಿನ್ನ ಹಾಕ್ತೀರಿ’’ ಎಂದು. ಎಲ್ಲಿಂದ ಕೊಡುವುದು. ಅಪ್ಪ-ಅಮ್ಮ ನನ್ನ ಮದುವೆಯ ಆಸೆೆಯನ್ನೇ ಬಿಟ್ಟು ಬಿಟ್ಟರು. ಅವರೀಗ ನನ್ನನ್ನು ಒಬ್ಬ ವಿಧುರನಿಗೋ, ಮುದುಕನಿಗೋ ಕೊಡಲೂ ಸಿದ್ಧರಿದ್ದರು. ಆದರೆ ಅಂತಹ ಗಂಡುಗಳೂ ನಮ್ಮ ಮನೆಯ ಬಳಿ ಸುಳಿಯ ಲಿಲ್ಲ. ಅಮ್ಮನಿಗೆ ಹುಚ್ಚು ಹಿಡಿದು ಬಿಟ್ಟಿತ್ತು. ಅವರೀಗ ಎಲ್ಲದಕ್ಕೂ ಸಿಡುಕತೊಡಗಿದ್ದರು. ದೊಂದು ದಿನ

ನಾನು ಮನೆಯ ಒಳಗೆ ಕಿಟಿಕಿಯ ಬಳಿ ಕುಳಿತು ಬೀಡಿ ಸುರುಟುತ್ತಿದ್ದೆ. ಕತ್ತರಿಗೆ ಸಾಣೆ ಹಿಡಿಯುವ ಬುಡಾನ್ ಸಾಬ್ ಬಂದವರೇ ತನ್ನ ಬೆನ್ನ ಮೇಲಿರುವ ಸಾಣೆ ಯಂತ್ರವನ್ನು ಅಂಗಳದಲ್ಲಿ ನಿಲ್ಲಿಸಿ ಬೆವರೊರೆಸುತ್ತಾ ಜಗಲಿಯಲ್ಲಿ ಕುಳಿತರು. ಅವರು ನವ್ಮೂರಿಗೆ ಬಂದರೆ ನಮ್ಮ ಮನೆಗೆ ಬಂದು ಬೆಲ್ಲ-ನೀರು ಕುಡಿದು ತಂದೆಯನ್ನು ಮಾತನಾಡಿಸದೆ ಹೋಗುತ್ತಿರಲಿಲ್ಲ. ಒಮ್ಮಿಮ್ಮೆ ಮಧ್ಯಾಹ್ನ ಬಂದರೆ ತಂದೆಯ ಒತ್ತಾಯಕ್ಕೆ ಊಟ ಮಾಡಿ ಹೋಗುತ್ತಿದ್ದುದೂ ಉಂಟು. ತಂದೆಗೂ ಅವರಿಗೂ ಅಷ್ಟೊಂದು ಆತ್ಮೀಯತೆ. ನಮ್ಮ ಬೀಡಿ ಎಲೆ ಕತ್ತರಿಸುವ ಕತ್ತರಿಗೆ ಸಾಣೆ ಹಿಡಿದರೆ ಅವರು ದುಡ್ಡು ತೆಗೆದುಕೊಳ್ಳುತ್ತಿರಲಿಲ್ಲ. ಅವರೊಡನೆಯೂ ತಂದೆ ‘‘ನೀವು ಊರೂರು ತಿರುಗುವವರು. ನನ್ನ ಮಗಳಿಗೊಂದು ಗಂಡಿದ್ದರೆ ನೋಡಿ’’ ಎಂದು ಅದೆಷ್ಟೋ ಸಲ ಹೇಳಿದ್ದನ್ನು ನಾನು ಕೇಳಿದ್ದೆ. ಬುಡಾನ್ ಸಾಬ್‌ರನ್ನು ಕಂಡವರೇ ತಂದೆ ಡಿಪೋದಿಂದ ಬಂದು ಅವರ ಪಕ್ಕ ಕುಳಿತರು. ಅದೂ - ಇದೂ ವಿಚಾರಿಸುತ್ತಾ ‘‘ನನ್ನ ಮಗಳಿಗೆ ಎಲ್ಲಿಯಾದರೂ ಒಂದು ಗಂಡು ನೋಡಿದಿರಾ ಸಾಹೇಬರೆ’’ ಎಂದು ಮಾತಿಗೆ ಶುರು ಹಚ್ಚಿದರು. ಅವರೀಗ ಯಾರು ಸಿಕ್ಕರೂ, ಯಾರ ಜೊತೆ ಮಾತನಾಡಿದರೂ ಕೊನೆಗೆ ಬಂದು ಮುಟ್ಟುವುದು ಈ ವಿಷಯಕ್ಕೇ.ಬ್ಬ ಹುಡುಗ ಇದ್ದಾನೆ. ನಾನು ಅದಕ್ಕಾಗಿಯೇ ಇಂದು ಈ ಕಡೆ ಬಂದಿದ್ದು. ದೊಡ್ಡ ಶ್ರೀಮಂತರು. ಹೊಲ, ಗದ್ದೆ, ತೆಂಗು, ಕಂಗಿನ ತೋಟಗಳೆಲ್ಲ ಇವೆ. ದೊಡ್ಡ ಮನೆ. ನೀವು ಒಂದು ಮುಕ್ಕಾಲು ವರದಕ್ಷಿಣೆ ಕೊಡಬೇಕಾಗಿಲ್ಲ. ಮದುವೆಯ ಸಂಪೂರ್ಣ ಖರ್ಚು ಅವರೇ ನೋಡಿಕೊಳ್ಳ ಬಹುದು. ನೀವು ಒಪ್ಪಿದರೆ ಆ ಮನೆಯಲ್ಲಿ ನಿಮ್ಮ ಮಗಳು ರಾಣಿಯಂತಿರಬಹುದು. ಅಷ್ಟು ಮಾತ್ರ ವಲ್ಲ, ಈ ಸಂಬಂಧ ಆದರೆ ನಿಮ್ಮ ಸ್ಥಿತಿಯೂ ಸುಧಾರಿಸಬಹುದು.’’ ಯ ಬಳಿ ಕುಳಿತಿದ್ದ ನನ್ನ ಕಿವಿ ನೆಟ್ಟಗಾಯಿತು. ನಾನು ಬೀಡಿ ಸುರುಟುವುದನ್ನು ಮರೆತು ಅವರ ಮಾತಿನತ್ತ ಗಮನ ಹರಿಸಿದೆ. ನು ಹೇಳುತ್ತಿದ್ದೀರಿ ಸಾಹೇಬರೇ’’ ತಂದೆ ಆಶ್ಚರ್ಯದಿಂದ ಒಮ್ಮೆಲೆ ಸೆಟೆದು ಕುಳಿತರು.ೌದು, ಆದರೆ ಹುಡುಗನಲ್ಲಿ ಒಂದು ಸಣ್ಣ ಐಬು ಇದೆ. ಹುಡುಗನ ಒಂದು ಕಾಲು ಸಂಪೂರ್ಣ ಬಲ ಇಲ್ಲ. ಇನ್ನೊಂದು ಕಾಲು ಊರುತ್ತಾನೆ. ಕಂಕುಳಲ್ಲಿ ಕೋಲು ಇಟ್ಟುಕೊಂಡು, ಸ್ವಲ್ಪಸ್ವಲ್ಪನಡೆಯುತ್ತಾನೆ. ನೋಡಲು ಸುಂದರವಾಗಿದ್ದಾನೆ. ದುಡಿಯಲಿಕ್ಕೆ ಆಗುವುದಿಲ್ಲ. ಆದರೂ ಜೀವನಕ್ಕೆ ಏನೂ ತೊಂದರೆ ಇಲ್ಲ. ಮೂರು ತಲೆಮಾರು ಕೂತು ತಿಂದರೂ ತೀರ ದಷ್ಟು ಆಸ್ತಿ ಇದೆ. ತಂದೆ, ತಾಯಿ ಇಲ್ಲ. ಅಣ್ಣ, ತಮ್ಮ ಇಬ್ಬರೇ ಮನೆಯಲ್ಲಿರುವುದು. ಅಣ್ಣನಿಗೆ ಮದುವೆಯಾಗಿದೆ. ಅವರ ಹೆಂಡತಿಗೆ ಆರೋಗ್ಯ ಸರಿಯಿಲ್ಲ. ಏನೋ ದೊಡ್ಡ ರೋಗವಂತೆ. ಮದ್ದು ಮಾಡ್ತಾ ಇದ್ದಾರೆ. ಈ ತಮ್ಮನನ್ನು ಅಣ್ಣನೇ ನೋಡಿಕೊಳ್ಳುತ್ತಿರುವುದು. ಅಣ್ಣ ಬಹಳ ಒಳ್ಳೆಯ ಜನ. ತಮ್ಮನ ಮೇಲೆ ಅವರಿಗೆ ಬಹಳ ಪ್ರೀತಿ. ಮತ್ತೊಬ್ಬ ಅಕ್ಕ ಇದ್ದಾಳೆ. ಅವರು ಯಾವಾಗಲಾದರೊಮ್ಮೆ ಬಂದು ಹೋಗ್ತಾ ಇರ್ತಾರೆ. ಇದಿಷ್ಟು ಅವರ ವಿಷಯ.’’

""¯


ಬುಡಾನ್ ಸಾಬ್ ಬಡ ಬಡಾಂತ ಒಂದೇ ಉಸಿರಿಗೆ ಎಲ್ಲ ಹೇಳಿ ಮುಗಿಸಿದರು. ಸಿರು ಬಿಗಿದುಕೊಂಡು ಕೇಳುತ್ತಾ ಕುಳಿತಿದ್ದ ಅಪ್ಪಸೂಜಿ ಚುಚ್ಚಿದ ಬೆಲೂನಿನಂತೆ ಒಮ್ಮೆಲೆ ಕುಸಿದು ಕುಳಿತರು. ನನ್ನ ಹೃದಯ ಬಡಿದುಕೊಳ್ಳಲಾರಂಭಿಸಿತ್ತು. ನಾನು ಅಪ್ಪನ ಬಾಯಿಯಿಂದ ಬರುವ ಮಾತಿಗಾಗಿ ಕಾಯುತ್ತಾ ಕುಳಿತೆ. ಅಪ್ಪತಲೆ ಕೆಳಗೆ ಹಾಕಿ ಉಸಿರಾಡಲು ಹೆಣಗಾಡುವವರಂತೆ ಮೌನವಾಗಿ ಕುಳಿತಿದ್ದರು. ೀವೇನೂ ಅವಸರ ಮಾಡಬೇಡಿ. ನಿಧಾನವಾಗಿ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ. ನಿಮಗೆ ಆಗಬಹುದೂಂತಾದರೆ ನಾವಿಬ್ಬರು ಒಮ್ಮೆ ಹೋಗಿ ಹುಡುಗನನ್ನು, ಮನೆಯನ್ನು ನೋಡಿ ಬರುವ. ಆಮೇಲೆ ನಾನು ಮಾತಾಡ್ತೇನೆ.’’ಪ್ಪಈಗಲೂ ಮಾತನಾಡಲಿಲ್ಲ. ನಾನು ಚಾತಕ ಪಕ್ಷಿಯಂತೆ ಅಪ್ಪನ ಬಾಯಿ ನೋಡಿ ಕುಳಿತಿದ್ದೆ. ಬುಡಾನ್ ಸಾಬ್ ಎದ್ದು ನಿಂತವರೇ ಸಾಣೆಯಂತ್ರ ವನ್ನು ಹೆಗಲಿಗೇರಿಸಿಕೊಂಡು ‘‘ನಾನು ಬರುವ ವಾರ ಬರುತ್ತೇನೆ. ಯೋಚನೆ ಮಾಡಿ ಹೇಳಿ’’ ಎಂದವರೇ ಹೊರಟು ಬಿಟ್ಟರು. ಹಾಗೆಯೇ ಸ್ವಲ್ಪಹೊತ್ತು ಮೌನವಾಗಿ ಕುಳಿತಿದ್ದ ಅಪ್ಪ, ಮತ್ತೆ ಡಿಪೋದತ್ತ ಕಾಲೆಳೆಯುತ್ತಾ ನಡೆಯ ತೊಡಗಿದರು. ನಂತರ ಒಂದು ವಾರ ನಮ್ಮ ಮನೆ ರಣರಂಗವಾ ಗಿತ್ತು. ತಂದೆ ಹೇಳಿದ್ದಕ್ಕೆ ತಾಯಿ ವಿರೋಸುವುದು, ತಾಯಿ ಹೇಳಿದ್ದನ್ನು ತಂದೆ ವಿರೋಸುವುದು. ಪ್ರತಿ ದಿನ ಇಬ್ಬರಿಗೂ ಜಗಳ. ಇಬ್ಬರಿಗೂ ಊಟ-ತಿಂಡಿ-ನಿದ್ದೆ ಯಾವುದೂ ಬೇಡವಾಗಿತ್ತು. ಇಬ್ಬರಿಗೂ ತಮ್ಮ ಮುದ್ದಿನ ಮಗಳನ್ನು ಒಬ್ಬ ಕುಂಟನಿಗೆ ಕೊಡಲಿಕ್ಕೆ ಸುತರಾಂ ಇಷ್ಟವಿರಲಿಲ್ಲ. ಆದರೆ ಬೇರೆ ದಾರಿಯೇ ಇರಲಿಲ್ಲ. ಈ ಬಗ್ಗೆ ತಂದೆಯಾಗಲೀ, ತಾಯಿಯಾಗಲೀ ಯಾರೂ ನನ್ನಲ್ಲಿ ಒಂದು ಮಾತೂ ಕೇಳಲಿಲ್ಲ. ಆಗ ಈಗಿನ ಹಾಗೆ ಹುಡುಗಿಯ ಹತ್ತಿರ ಒಪ್ಪಿಗೆ ಕೇಳುವ ಪದ್ಧತಿ ಇರಲಿಲ್ಲ. ಕೇಳುತ್ತಿದ್ದಿದ್ದರೆ ನಾನು ಏನು ಹೇಳುತ್ತಿದ್ದೇನೋ, ಅದೂ ನನಗೆ ಗೊತ್ತಿಲ್ಲ.

ಮತ್ತೆ ಮೂರು ತಿಂಗಳು ಕಳೆಯುವುದರೊಳಗೆ ನನ್ನ ಮದುವೆ ನಡೆದೇ ಬಿಟ್ಟಿತ್ತು. ಮದುವೆಗೆ ಬಂದಿದ್ದವರು ಒಟ್ಟು ಎರಡು ಕಡೆಯಿಂದ 50-60 ಮಂದಿ ಇರಬಹುದು. ಎಲ್ಲ ಕಣ್ಣು ಮುಚ್ಚಿ ತೆರೆಯುವುದರೊಳಗೆ ಒಂದು ಕನಸಿನಂತೆ ನಡೆದು ಬಿಟ್ಟಿತ್ತು. ಅಷ್ಟು ಹೇಳಿದ ಅಜ್ಜಿ ದೀರ್ಘವಾಗಿ ಉಸಿರೆಳೆದುಕೊಂಡು ಮತ್ತೆ ಮೌನವಾದರು. ನಾನು ಇಷ್ಟೆಲ್ಲ ಹೇಳಿದೆನಲ್ಲ, ಆ ಹುಡುಗ ಯಾರೂಂತ ಕೇಳಿದೆಯಾ ನೀನು?ಘಿಚ್ಟ‘‘...’’ುಮ್ಮನೆ ಗುಮ್ಮೆಯ ಹಾಗೆ ಕುಳಿತುಕೊಂಡಿದ್ದಿಯಲ್ಲ. ಆ ಹುಡುಗ ಯಾರೂಂತ ಯಾಕೆ ಕೇಳುವುದಿಲ್ಲವಾ ನೀನು?’’ ನಾನು ಮೌನವಾಗಿ ಕುಳಿತುಕೊಂಡಿದ್ದು ಕಂಡು ಅಜ್ಜಿಗೆ ನಿಜವಾಗಿಯೂ ಕೋಪ ಬಂದಿತ್ತು. ಾರಜ್ಜಿ ಆ ಹುಡುಗ, ಆ ಕುಂಟನೇ ಅಲ್ಲವಾ?’’ ತಾಹಿರಾಳ ಕುತೂಹಲ ಮತ್ತೆ ಕೆರಳಿತು.ುಂಟಾಂತ ಹೇಳಬೇಡ. ಅವರು ನನ್ನ ಗಂಡ. ಅವರು ಯಾರು ಗೊತ್ತ ನಿನಗೆ, ನಿನ್ನ ಅಜ್ಜನ ತಮ್ಮ...’’ ಅಜ್ಜಿಯ ಮಾತಿನಲ್ಲಿ ಈಗ ಹೆಮ್ಮೆಯಿತ್ತು.ನು ಅಜ್ಜನ ತಮ್ಮನಾ...!’’ ತಾಹಿರಾಳ ಕಣ್ಣುಗಳ ತುಂಬಾ ಪ್ರಶ್ನೆಗಳಿದ್ದವು. ೂಂ, ನಿನ್ನ ಅಜ್ಜನ ತಮ್ಮ. ಖಾಸಾ ತಮ್ಮ. ಒಬ್ಬನೇ ಒಬ್ಬ ತಮ್ಮ. ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ತಮ್ಮ. ಒಂದೇ ಹೊಟ್ಟೆಯನ್ನು ಹಂಚಿಕೊಂಡ ತಮ್ಮ.’’ಈಗ ದೊರೆಸಾನಿಯಂತೆ ಮಾತನಾಡುತ್ತಿದ್ದರು. ನಗೊಂದೂ ಅರ್ಥವಾಗ್ತಾ ಇಲ್ಲ. ನಂಬಲಾಗ್ತಾ ಇಲ್ಲ. ಆಮೇಲೆ ಏನಾಯ್ತು ಅಜ್ಜಿ.’’ಮೇಲೆ... ಆಮೇಲೆ.. ಈ ಮನೆಗೆ ಸೊಸೆಯಾಗಿ ಬಂದ ನನಗೆ ಒಂದು ಹೊಸ ಲೋಕವೇ ತೆರೆದು ಕೊಂಡಿತ್ತು. ಹಟ್ಟಿಯಂತಿದ್ದ ಪುಟ್ಟ ಗುಡಿಸಲಿನಲ್ಲಿ ಹುಟ್ಟಿ ಬೆಳೆದ ನನಗೆ ಈ ಅರಮನೆಯಂತಹ ಮನೆಗೆ ಹೊಂದಿಕೊಳ್ಳುವುದಕ್ಕೆ ತಿಂಗಳುಗಳೇ ಬೇಕಾಯಿತು. ಇಂತಹ ಮನೆಯನ್ನು ನಾನು ಹಿಂದೆಂದೂ ಕಂಡಿರಲಿಲ್ಲ. ಆದರೆ ಈ ಮನೆಗೆ ನಾನು ಯಜಮಾನಿಯಾಗಿ ಬಿಟ್ಟಿದ್ದೆ. ಮೂರು ತಲೆಮಾರು ಕುಳಿತು ತಿಂದರೂ ಮುಗಿಯದಷ್ಟು ಆಸ್ತಿ ಸಂಪತ್ತಿನ ಒಡತಿಯಾಗಿ ಬಿಟ್ಟಿದ್ದೆ. ಪುಟ್ಟ ಹಳ್ಳದಲ್ಲಿದ್ದ ನನ್ನನ್ನು ತೆಗೆದು ಬೀಸಿ ಸಾಗರಕ್ಕೆ ಎಸೆದಂತಾಗಿತ್ತು. ಹಸಿವು, ಬಡತನ ಮಾತ್ರ ಕಂಡಿದ್ದ ನನಗೆ ಈ ಮನೆ ಜಗತ್ತನ್ನು ಪರಿಚಯಿಸಿತು. ಆಗ ಈ ದೊಡ್ಡ ಮನೆಯಲ್ಲಿದ್ದದ್ದು ನಾನು, ನಡೆಯ ಲಾಗದ ನನ್ನ ಗಂಡ, ನಿನ್ನ ಅಜ್ಜ ಮತ್ತು ರೋಗ ಪೀಡಿತರಾಗಿ ಹಾಸಿಗೆಗೆ ಅಂಟಿಕೊಂಡಿದ್ದ ಅಜ್ಜನ ಹೆಂಡತಿ. ನಾಲ್ಕು ಮಂದಿ ಮಾತ್ರ. ತೋಟ, ಗದ್ದೆ, ಮನೆ ಕೆಲಸಗಳಿಗೆಲ್ಲ ಆಳುಗಳನ್ನಿಟ್ಟು ಕೊಂಡಿದ್ದ ನಿನ್ನ ಅಜ್ಜ ತನ್ನ ಪತ್ನಿ ಮತ್ತು ತಮ್ಮನ ಆರೈಕೆ ಮಾಡಲು ಯಾರನ್ನೂ ಬಿಡುತ್ತಿರಲಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)