varthabharthi


magazine

ಆತ್ಮಧರ್ಮ

ವಾರ್ತಾ ಭಾರತಿ : 13 Oct, 2016
ಶ್ರೀ ನಿಜಗುಣಾನಂದ ಸ್ವಾಮೀಜಿ


ಯಾವ ಮಾನವನೂ ಯಾವುದೇ ಧರ್ಮಕ್ಕಾಗಿ ಹುಟ್ಟಿಬಂದವನಲ್ಲ; ಪ್ರತಿಯೊಬ್ಬ ಮಾನವನಿಗೆ ತನ್ನದೆ ಆದ ಧರ್ಮವಿದೆ, ಅದುವೆ ಆತ್ಮಧರ್ಮ.ಅದು ಪ್ರತಿಯೊಬ್ಬನ ಆತ್ಮದಲ್ಲಿದೆ.

ರ್ಮ ಎಂಬ ಪದದ ಅರ್ಥವು ಸಾಮಾನ್ಯ, ಮಧ್ಯಮ ತರವಾಗಿದೆ. ಧರ್ಮದ ಅರ್ಥವನ್ನು ಮೂರು ರೀತಿಯಲ್ಲು ಭಾರತ ದೇಶದಲ್ಲಿ ಹೇಳಲಾಗುತ್ತದೆ. ವಿಶೇಷ ಅರ್ಥ, ಮಧ್ಯಮ ಅರ್ಥ, ಸಾಮಾನ್ಯ ಅರ್ಥ ಎಂದು ಮೂರು ಬಗೆ. ಧರ್ಮ ಎಂದರೆ ಮತ್ತೊಬ್ಬರಿಗೆ ನೆರವಾಗುವುದು ಎಂದರ್ಥ.ಇದು ಧರ್ಮದ ಸಾಮಾನ್ಯ ತರವಾದ ಅರ್ಥ. ಇದು ಸರ್ವ ಸಾಮಾನ್ಯ ಜನರು ಈ ಧರ್ಮದ ಆಚರಣೆಯನ್ನು ಪಾಲಿಸಬಹುದು. ಇದು ಸರ್ವ ಜನಗಳಿಗೆ ಸರಳವೆನಿಸುತ್ತದೆ. ಮತ್ತೊಬ್ಬರಿಗೆ ನೆರವಾಗುವುದು ಸಾಮಾನ್ಯವಲ್ಲ. ಕಷ್ಟದಲ್ಲಿ, ನೋವಿನಲ್ಲಿ ಹಸಿವಿನಲ್ಲಿ, ದುಃಖ ದಲ್ಲಿ ಬಿದ್ದವರಿಗೆ ಕೈ ನೀಡಿ ಮೇಲಕ್ಕೆ ಎತ್ತುವುದು. ದೊಡ್ಡವರಿಂದ ಸಣ್ಣವರೂ ಈ ಸಾಮಾನ್ಯ ಧರ್ಮವನ್ನು ಆಚರಿಸಬಹುದು.ಇನ್ನು ಮಧ್ಯಮ ಧರ್ಮ, ಪ್ರತಿಯೊಬ್ಬರು ತನ್ನಾತ್ಮ ಸ್ವರೂಪವೆಂದು ತನ್ನಂತೆ ಎಂದು ಭಾವಿಸಿ, ಪ್ರೀತಿಸಿ, ಹಾಗೆ ಅನುಸರಿಸುವುದು ಇದುವೇ ಆತ್ಮಧರ್ಮ. ಇದನ್ನೆ ಮಹಾತ್ಮ ಬಸವೇಶ್ವರರು ಸರ್ವಜನಾಂಗಕ್ಕೆ ಭೋದಿಸಿದ ಸರ್ವಶ್ರೇಷ್ಠ ತತ್ವವು. ಈ ಮೂಲಕವಾಗಿಯೇ ಮಾನವ ಕುಲಕೋಟಿಯನ್ನು ಒಂದು ಗೂಡಿಸಲು ಅವರು ಯತ್ನಿಸಿದ್ದು.
ಇವನಾರವ ಇವನಾರವ ಇವನಾರವ ಎಂದೆನಿಸದಿರಯ್ಯ
ಇವನಮ್ಮವ ಇವನಮ್ಮವ ಇವನಮ್ಮವ ಎಂದೆನಿಸಯ್ಯ
ಕೂಡಲಸಂಗಮದೇವಾ ನಿಮ್ಮ ಮನೆಯ ಮಗನೆಂದೆನಿಸಯ್ಯ.
 ಅವನು ಬೇರೆ ಇವನು ಬೇರೆ ನಾನು ಬೇರೆ ಎಂಬ ಭಿನ್ನ ಭೇದಭಾವ ನನ್ನಲ್ಲಿ, ನಮ್ಮಲ್ಲಿ ಮೂಡದಿರಲಿ. ಇಲ್ಲಿ ಪ್ರತಿಯೊಬ್ಬ ಮಾನವಾತ್ಮವು ಒಂದೆ ಮನೆಯಮಕ್ಕಳು ಎಂಬ ಆತ್ಮಭಾವವು ಮೂಡಲಿ. ಮಾನವಾತ್ಮರೆಲ್ಲ ದೇವನ ಮನೆಯ ಮಕ್ಕಳೆಂಬ ಭಾವ ನನಗೆ ಬರಲಿ, ನಮಗೆ ಬರಲಿ ಎಂಬ ಬಸವೇಶ್ವರರು ದೇವನಲ್ಲಿ ಪ್ರಾರ್ಥನೆಗೈದಿದ್ದಾರೆ.
 ದೇವನೊಬ್ಬನೆ ತಂದೆ ಮನುಜರೆಲ್ಲರು ಆತನ ಮಹಾಮನೆಯ ಮಕ್ಕಳೆಂಬ ಆತ್ಮಭಾವವು ಪ್ರತಿಯೊಬ್ಬರಲ್ಲಿ ತಲೆದೋರಲೆಂಬ ಪ್ರಾರ್ಥನೆಯು ಬಸವೇಶ್ವರರದು.ಪ್ರತಿಯೊಬ್ಬರು ಆತನ ಮಕ್ಕಳೆ.ಅವನು ದೊಡ್ಡವನಿರಲಿ, ಸಣ್ಣವನಿರಲಿ, ಜ್ಞಾನಿ-ಅಜ್ಞಾನಿಯೆ ಇರಲಿ, ಮಹಾಜ್ಞಾನ ಸಂಪನ್ನನೆ ಆಗಿರಲಿ ಅವನು ಶಿವನ ಮಹಾಮನೆಯ ಮಗುವೆ. ಶಿವನಲ್ಲಿ ಭೇದವಿಲ್ಲ ನಮ್ಮಲ್ಲಿ ಭೇದವಿದೆ. ಮಾನವನ ಮನದಲ್ಲಿ ಅಂಧಕಾರ ಅಕವಾಗಿರುವುದರಿಂದ ಭೇದವು ಕಂಡು ಬರುತ್ತದೆ.ಅಂಧಕಾರ ಮರೆಯಾದಂತೆಲ್ಲಾ ಏಕತೆಯು ನಮ್ಮಲ್ಲಿ ನೆಲೆ ನಿಲ್ಲುತ್ತದೆ. ಎನ್ನುತ್ತಾರೆ ಜ್ಞಾನಿಗಳು.

ಪ್ರತಿಯೊಬ್ಬರಲ್ಲಿರುವ ಆತ್ಮವು ಒಂದೇ ಎಂದ ಬಳಿಕ, ಧರ್ಮವು ಒಂದೆ ಇರಬೇಕಲ್ಲಾ? ಪ್ರತಿಯೊಬ್ಬರಲ್ಲಿಯು ದೇವರು ಒಬ್ಬನೆ ಎಂದ ಬಳಿಕ ಪ್ರತಿಯೊಬ್ಬನು ದೇವರ ಮಗನೆ ಇರಬೇಕಲ್ಲಾ?ಇರಬೇಕೇನು ..ಇದ್ದೇ ಇರುವವನು ಎನ್ನುತ್ತಾರೆ ಆತ್ಮಜ್ಞಾನಿಗಳು ಆತ್ಮಯೋಗಿಗಳು. ವೀರಸನ್ಯಾಸಿಯೆಂದೆ ವಿಶ್ವದ ತುಂಬೆಲ್ಲಾ ಪರಿಚಿತರಾದ ಸ್ವಾಮಿ ವಿವೇಕಾನಂದರು ಆತ್ಮಧರ್ಮದ ಕುರಿತು ಒಂದಡೆ ಒಂದೆರಡು ಮಾತುಗಳನ್ನಾಡಿದ್ದಾರೆ.
No man is born to any religion
Every man has the own  religion in his soul

   ಬಹಳ ಅರ್ಥವತ್ತಾದ ಅಮೃತ ಬಿಂದುಗಳು ಮೇಲಿನ ಸಾಲುಗಳು. ಮಾನವಾತ್ಮ ಧರ್ಮವನ್ನು ಸ್ಥಾಪಿಸಲು ಬಂದವರು ಸ್ವಾಮಿ ವಿವೇಕಾನಂದರು. ಯಾವ ಮಾನವನೂ ಯಾವುದೇ ಧರ್ಮಕ್ಕಾಗಿ ಹುಟ್ಟಿಬಂದವನಲ್ಲ; ಪ್ರತಿಯೊಬ್ಬ ಮಾನವನಿಗೆ ತನ್ನದೆ ಆದ ಧರ್ಮವಿದೆ, ಅದುವೆ ಆತ್ಮಧರ್ಮ.ಅದು ಪ್ರತಿಯೊಬ್ಬನ ಆತ್ಮದಲ್ಲಿದೆ; ನನ್ನದು ಹಿಂದೂ ಧರ್ಮ,ನನ್ನದು ಬುದ್ದ ಧರ್ಮ ನನ್ನದು ಜೈನ ಧರ್ಮ, ನನ್ನದು ಲಿಂಗಾಯತ ನನ್ನದು ಕ್ರೆಸ್ತ ಧರ್ಮ ಎಂದು ಎಂದು ಎಲ್ಲರೂ ಕೂಗಿಕೊಳ್ಳುತ್ತೇವೆ. ಈ ಭೂಮಿಗೆ ಬಂದವರೆಲ್ಲ ಪ್ರತಿಯೊಬ್ಬರು ಸಹಜವಾಗಿ ಹುಟ್ಟುತ್ತಾರೆ. ಮನುಷ್ಯ ಹುಟ್ಟಿದ ಮೇಲೆಯೆ ಅವನಿಗೆ ವಿಭೂತಿ ಲಿಂಗಧರಿಸಿ ಲಿಂಗಾಯತ ಧರ್ಮ ಎಂದು ಹೆಸರಿಡುತ್ತಾರೆ. ಗಂಧ ಜನಿವಾರ ಹಾಕಿ ಬ್ರಾಹ್ಮಣ ಎಂದು ಹೆಸರಿಟ್ಟು ಕರೆಯುತ್ತಾರೆ. ಕೊರಳಲ್ಲಿ ಯೇಸುವಿನ ಸಿಲುಬೆೆ ಚಿಹ್ನೆ ಹಾಕಿ ಕ್ರೆಸ್ತ ಎಂದು ಕರೆಯುತ್ತಾರೆ. ಬರುವಾಗ ಮಾನವಾತ್ಮ ಬೆತ್ತಲೆಯಾಗಿ ಬಂದಾ, ಬಂದ ಮೇಲೆ ವೇಷ ಭೂಷಣಗಳಿಂದ ಅಲಂಕರಿಸಿ ಇವನು ಈ ಧರ್ಮದವನು ಇವನು ಆ ಧರ್ಮದವನು ಎಂದು, ಅವನು ಆ ಮತದವನೆಂದು ಇವನು ಈ ಮತಪಂಥದವನೆಂದು ಕರೆದು ಮಾನವಾತ್ಮವನ್ನು ಒಂದರಲ್ಲಿ ಬಂಸಲಾಗುತ್ತದೆ. ಯಾವುದೇ ಲಾಂಛನಗಳು ವಸ್ತುಗಳು ಸಾಧನವಸ್ತುಗಳೇ ವಿನಃ ಅವು ನಮ್ಮ ಆತ್ಮಕ್ಕೆ ಜೀವ ನೀಡುವ ವಸ್ತುಗಳಾಗಬಾರದು.


                   
ಕುಡಿಯುವದೊಂದೆ ನೀರು ನಡೆಯುವದೊಂದೆ ಭೂಮಿ ಕುಲಗೋತ್ರ ನಡುವೆ ಎತ್ತಣದು ಸರ್ವಜ್ಞ. ನಡೆಯುವದೊಂದೆ ಭೂಮಿ ಕುಡಿಯುವದೊಂದೆ ನೀರು ಉಸುರುವುದೊಂದೆ ಗಾಳಿ. ನಿಜ ಹೀಗಿರುವಾಗ ನಡುವೆ ಜಾತಿ ಮತ ಪಂಗಡ ಧರ್ಮಗಳ ಭೇದವನ್ನು ಮಾಡುವುದಾದರು ಏಕೆ? ಎಂದು ಕೆಳುತ್ತಾನೆ ಸರ್ವಜ್ಞ. ಅನುಭಾವಿ ಕವಿ ತತ್ವಜ್ಞಾನಿ ಸರ್ವಜ್ಞ ಆಡಿದ ಈ ಮುತ್ತಿನಂತ ಸಾಲುಗಳನ್ನು ನಮ್ಮ ಹೃದಯದ ಭೂಮಿಯೊಳಗೆ ಬಿತ್ತಿ ಬೆಳೆದರೆ ಮಾನವ ಜನ್ಮ ಜೀವನವು ಅತ್ಯಂತ ಸುಖವಾಗುತ್ತದೆ, ಶಾಂತವಾಗುತ್ತದೆ. ಇನ್ನು ಧರ್ಮದ ವಿಶೇಷ ಅರ್ಥದ ಕುರಿತು ಕೆಲವು ಮಾತುಗಳು ‘‘ಆತ್ಮಸಾಕ್ಷಾತ್ಕಾರವೆ ಧರ್ಮದ ಪೊರ್ಣ ಪ್ರಮಾಣದ ಗುರಿ’’ ಎಂದೆನ್ನುತ್ತಾರೆ ಸ್ವಾಮಿ ವಿವೇಕಾನಂದರು. ನೆಲನೊಂದೆ ಹೊಲಗೇರಿ ಶಿವಾಲಯಕ್ಕೆ
ಜಲವೊಂದೆ ಶೌಚಾಚಮನಕ್ಕೆ
ಕುಲವೊಂದೆ ತನ್ನ ತಾನರದವಂಗೆ

ನೆಲವೊಂದೆ ಎಲ್ಲೆಡೆ ನೆಲಬಿಟ್ಟು ಇಲ್ಲಿ ಎನೊಂದಿರದು ಶಿವಾಲಯವು ನೆಲದ ಮೇಲಿದೆ. ಹೊಲೆಯರ ಕೇರಿಯು ನೆಲದ ಮೇಲಿದೆ. ಈ ಎರಡಕ್ಕು ಒಂದೆ ನೆಲ, ಪೂಜೆಗೂ ಒಂದೆ ಜಲ, ಶೌಚಕ್ಕೂ ಒಂದೆ ಜಲ ಎರಡಕ್ಕೂ ನೀರೊಂದೆ. ಹಾಗೆಯೆ ತನ್ನತಾನರಿಯದವನಿಗೆ ಕುಲಭೇದವಿಲ್ಲ. ಜಾತಿ ಮತ ಪಂಥಗಳ ಭೇದ ಕಾಣಿಸದು. ಅರಿಯದವನಿಗೆ ಭೇದವು ಕಾಣಿಸುತ್ತದೆ. ಅರಿತ ಮೇಲೆ ಭೇದವಿಲ್ಲ. ಆತ್ಮ ಯಾವ ಕುಲ? ಎಂದು ಕನಕದಾಸರು ಕೇಳಿದ್ದೇಕೆ. ಮಾನವಾತ್ಮಕ್ಕೆ ಕುಲವುಂಟೆ? ಅರಿತವನಿಗೆ ಕುಲವೊಂದೆ ಮಾನವಾತ್ಮಕುಲ. ಅರಿಯದವನಿಗೆ ಕೊಟ್ಟ ಕುಲ ಆತ್ಮ ಧರ್ಮ ಒಂದೆ ಎಂದು ತಿಳಿದವನೆ ಜ್ಞಾನಿ. ಆತ್ಮವನ್ನು ವಿಶ್ವಾತ್ಮನೊಂದಿಗೆ ಸೇರಿಸಿ ವಿಶ್ವಾತ್ಮ ಸ್ವರೂಪವಾಗಿ ನಿಲ್ಲುವುದೆ ವಿಶೇಷ ಧರ್ಮವಾಗಿದೆ.
ನಮಗಿಂದು ಬೇಕಾಗಿರುವುದು ಸಾಮಾನ್ಯ ಹಾಗೂ ಮಧ್ಯಮ ಧರ್ಮ. ವಿಶೇಷ ಧರ್ಮ ಅದು ವಿಶಿಷ್ಟ ಮತ್ತು ಕಷ್ಟಕರವಾದುದು.ವಿಶೇಷ ಧರ್ಮವನ್ನು ಸಾಸುವವರು, ಸಿದ್ದಿಸಿಕೊಳ್ಳುವವರು ಅತಿ ವಿರಳ.
ಒಬ್ಬರಿಗೊಬ್ಬರು ಅನುವಾಗುವುದು, ಅನುಕೂಲ ವಾಗುವುದು, ನೇರವಾಗುವುದು ಇಂದಿನ ಧರ್ಮ ವಾಗಬೇಕು. ನಾವೆಲ್ಲರು ಮಾನವಾತ್ಮರು. ನಾವೆಲ್ಲರು ಆತ್ಮೀಯರೆಂದು ಭಾವಿಸಿ ಬದುಕುವುದೇ ಇಂದಿನ ದಿನಮಾನಕ್ಕೆ ಸೊಕ್ತ ಧರ್ಮವಾಗಿದೆ. ಯಾವುದೇ ಧರ್ಮಗ್ರಂಥದ ಆಳದಲ್ಲಿ ಇಣುಕಿ ನೋಡುವ ನೋಟವೊಂದು ನಮಗೆ ಬೇಕಾಗಿದೆ. ಈ ಆಳದ ದೃಷ್ಟಿ ಇಲ್ಲದ ಕಾರಣ ನಮಗೆ ಧರ್ಮಗಳು ಬೇರೆಬೇರೆಯಾಗಿ ಕಾಣುತ್ತವೆ. ಧರ್ಮದ ತಿರುಳು ಆತ್ಮ ಸಾಮರಸ್ಯವನ್ನು ಸಾಸುವು ದಾಗಿದೆ ಎಂಬ ನಿಲುವು ಬಲ್ಲವರು ಮಹಾತ್ಮರ ಅನುಭಾವಿಗಳ ಅನಿಸಿಕೆಯಾಗಿದೆ. ನಮಗಿಂದು ಅವರ ಅನಿಸಿಕೆ ಸರಿ ಎಂದೆನಿಸುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)