varthabharthi


ಚಿತ್ರ ವಿಮರ್ಶೆ

ದಂಗಲ್ - ಇದು ಆಮಿರ್ ಖಾನ್ ಚಿತ್ರ ಅಲ್ಲ, ಆದರೆ....

ವಾರ್ತಾ ಭಾರತಿ : 22 Dec, 2016

ಆಮಿರ್ ಖಾನ್ ಅಭಿನಯದ ದಂಗಲ್ ಈ ವರ್ಷದ ಬಹುನಿರೀಕ್ಷಿತ ಚಿತ್ರ. ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರ ಭಾರತದ ಮಾಜಿ ಕುಸ್ತಿಪಟು ಮಹಾವೀರ್ ಫೋಗಟ್ ಅವರ ಜೀವನಾಧರಿತವಾಗಿದೆ. ಮಹಾವೀರ್ ತನ್ನ ಇಬ್ಬರು ಪುತ್ರಿಯರನ್ನು (ಚಿತ್ರದಲ್ಲಿ ಫಾತಿಮಾ ಸನಾ ಶೇಖ್ ಹಾಗೂ ಸಾನ್ಯ ಮಲ್ಹೋತ್ರ) ಕುಸ್ತಿ ಚಾಂಪಿಯನ್ ಗಳಾಗಿಸುವಲ್ಲಿ ಮಾಡಿದ ಪ್ರಯತ್ನ ನಿಜವಾಗಿಯೂ ಸ್ತುತ್ಯಾರ್ಹ. ಆಮಿರ್ ಅವರ ಲೇಟೆಸ್ಟ್ ಚಿತ್ರ ಹೇಗಿದೆಯೆಂಬ ಕುತೂಹಲ ಎಲ್ಲರಿಗಿದೆ. ಇಲ್ಲಿದೆ ಒಂದು ಇಣುಕು ನೋಟ.

ಚಿತ್ರದಲ್ಲಿ ಏನಿದೆ ?
ದಂಗಲ್ ಚಿತ್ರ ಇನ್ನೊಂದು ಸುಲ್ತಾನ್ ಅಲ್ಲ. ದಂಗಲ್ ಸಿನೆಮಾ ಸುಲ್ತಾನ್ ಚಿತ್ರಕ್ಕಿಂತ ಉತ್ತಮವೆಂದೂ ಹೇಳಲಾಗುವುದಿಲ್ಲ. ಏಕೆಂದರೆ ಎರಡೂ ಕುಸ್ತಿ ವಿಚಾರದಲ್ಲೇ ನಿರ್ಮಿತವಾದ ಭಿನ್ನ ಕಥೆ ಹೊಂದಿರುವ ಚಿತ್ರಗಳು. ದಂಗಲ್ ಚಿತ್ರ ಮಹಾವೀರ್ ಫೋಗಟ್ (ಆಮಿರ್ ಖಾನ್) ಮತ್ತಾತನ ಪುತ್ರಿಯರಾದ ಗೀತಾ ಮತ್ತು ಬಬಿತಾ ಅವರ ಬಗ್ಗೆಯಾಗಿದೆ. ದಂಗಲ್ ಚಿತ್ರದಲ್ಲಿ ಶ್ರದ್ಧೆ, ಸಾಹಸ, ದೃಢಚಿತ್ತತೆಯಿದೆ ಮತ್ತು ತಂದೆಯೊಬ್ಬ ತನ್ನ ಪುತ್ರಿಯರಿಗೆ ಅವರ ಪುರುಷ ಸ್ಪರ್ಧಾಳುಗಳಷ್ಟೇ ಉತ್ತಮವಾಗಿ ಕುಸ್ತಿ ನಡೆಸಲು ಪ್ರೇರೇಪಿಸುತ್ತಾನೆ. ದಂಗಲ್ ಚಿತ್ರವು ಮಾನವನ ಮನಸ್ಸಿನ ಬಗ್ಗೆ ಹಾಗೂ ಅಸಾಧ್ಯವೆನ್ನುವಂತಹ ಗುರಿಗಳನ್ನು ಇಚ್ಛಾಶಕ್ತಿಯಿದ್ದರೆ ತಲುಪಲು ಹೇಗೆ ಸಾಧ್ಯ ಎಂಬುದನ್ನು ವಿವರಿಸುತ್ತದೆ.

ವಿಶೇಷವೇನು ?
ಚಿತ್ರದಲ್ಲಿ ಆಮಿರ್ ಅಭಿನಯಿಸಿದ್ದಾರೆ. ಈ ಚಿತ್ರ ಅವರಿಗೆ ಸೇರಿಲ್ಲ. ಅವರೊಬ್ಬ ದಾರಿಹೋಕನಾಗಿ ಚಿತ್ರ ಕತೆಯನ್ನು ವಿವರಿಸುತ್ತಾರೆ ಹಾಗೂ ಈ ಭಾವನಾತ್ಮಕ ಜೀವನ ಪಯಣವನ್ನು ಅತ್ಯಂತ ಪ್ರಾಮಾಣಿಕವಾಗಿ ಪ್ರೇಕ್ಷಕರ ಮುಂದಿಡುತ್ತಾರೆ. ದಂಗಲ್ ಚಿತ್ರದ ನಿಜವಾದ ಹೀರೋ ಅದರ ನಿರ್ದೇಶಕ ನಿತೇಶ್ ತಿವಾರಿಯಾಗಿದ್ದಾರೆ. ಚಿತ್ರದಲ್ಲಿ ಹಲವಾರು ರೋಮಾಂಚನಕಾರಿ ದೃಶ್ಯಗಳಿವೆ. ಆಡಳಿತಾಧಿಕಾರಿ ಕಚೇರಿಯಲ್ಲಿ ಮಹಾವೀರ್ ನಡೆಸುವ ಹೋರಾಟ ಅಥವಾ ಯುವತಿ ಗೀತಾ ಸ್ಪರ್ಧೆಯೊಂದರಲ್ಲಿ ತನ್ನ ಪುರುಷ ಎದುರಾಳಿಯನ್ನ ಮಣಿಸುವ ದೃಶ್ಯ.

ಹಿನ್ನೆಲೆಯಲ್ಲಿ ನಿಂತು ಇಬ್ಬರು ಹುಡುಗಿಯರು ಈ ಚಿತ್ರವನ್ನು ನಿಜವಾಗಿಯೂ ಪ್ರಕಾಶಿಸುವಲ್ಲಿ ಮಾಡಿರುವ ಸಾಧನೆ ಅನನ್ಯ. ಮಕ್ಕಳು ಮೊದಲಾಗಿ ದ್ವೇಷಿಸುವ ನಂತರ ಪ್ರೀತಿಸುವ ತಂದೆಯಾಗಿ ಅವರು ಅಭಿನಯಿಸಿದ್ದಾರೆ. ಮಕ್ಕಳು ತಾವು ನಡೆಸಬೇಕಾದ ಕಾರ್ಯದಲ್ಲಿ ಪರಿಣತರಾಗುವ ತನಕ ಅವರ ತಾಯಿ ತಾನೆಂದು ಮರೆಯುವಂತೆ ಪತ್ನಿ ಬಳಿ ಹೇಳುವ ಪತಿಯಾಗಿ ಆಮಿರ್ ಉತ್ತಮವಾಗಿ ನಟಿಸಿದ್ದಾರೆ.

ಗೀತಾ ಹಾಗೂ ಬಬಿತಾ ಪಾತ್ರಧಾರಿಗಳಂತೂ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಭಾಗವೆಂಬುದನ್ನು ಮರೆತು ಪ್ರೇಕ್ಷಕರು ಎದ್ದು ನಿಂತು ರಾಷ್ಟ್ರಧ್ವಜಕ್ಕೆ ವಂದಿಸುವಂತೆ ಮಾಡುವ ದೃಶ್ಯವೂ ಈ ಚಿತ್ರದಲ್ಲಿದೆ.

ಎಲ್ಲಿ ಎಡವಿದೆ ?
ದಂಗಲ್ ಸಿನೆಮಾ ಕೆಲವು ಕಡೆಗಳಲ್ಲಿ ಎಡವಿದೆ. ಎಲ್ಲಾ ಕುಸ್ತಿ ಪಂದ್ಯಗಳೂ ಮೊದಲ ಪಂದ್ಯದಷ್ಟು ರೋಮಾಂಚನಕಾರಿಯಾಗಿಲ್ಲ. ಕೆಲವೊಮ್ಮೆ ಹೊಡೆದಾಟದ ದೃಶ್ಯಗಳು ತೀರಾ ಉದ್ದವಿರುವಂತೆ ಕಾಣುತ್ತದೆ ಹಾಗೂ ಬೋರ್ ಹೊಡೆಸಬಹುದು. ಒಂದು ಸಣ್ಣ ಟ್ರ್ಯಾಕ್ ಹೊರತುಪಡಿಸಿ ಬೇರೆ ಯಾವ ಹಾಡೂ ನೆನಪಿನಲ್ಲಿಡುವಂತಹುದಲ್ಲ. ಈ ನಿಟ್ಟಿನಲ್ಲಿ ಸುಲ್ತಾನ್ ನಮ್ಮ ಮನಸ್ಸನ್ನು ತಟ್ಟುತ್ತದೆ.

ದಂಗಲ್ ಚಿತ್ರದಲ್ಲಿ ಆಮಿರ್ ಜೀವಮಾನ ಶ್ರೇಷ್ಠ ಅಭಿನಯ ನೀಡಿದ್ದಾರೆ. ನಮ್ಮ ಮನಸ್ಸನ್ನು ಇಷ್ಟೊಂದು ಗೆಲ್ಲುವಂತಹ ಚಿತ್ರ ಈ ವರ್ಷ ಬೇರಾವುದೂ ಬಂದಿಲ್ಲ. ದಂಗಲ್ ನಮ್ಮ ಹೃದಯವನ್ನು ಗೆಲ್ಲುತ್ತದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)