varthabharthi


Social Media

ಕಾರಣವೇನು ?

ಇಸ್ರೋ ಸಾಧನೆಗೆ ಅಭಿನಂದಿಸಿ ಸ್ವತಃ ನಗೆಪಾಟಲಿಗೀಡಾದ ಅಮಿತಾಭ್ !

ವಾರ್ತಾ ಭಾರತಿ : 15 Feb, 2017

ಮುಂಬೈ, ಫೆ. ೧೫ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ( ಇಸ್ರೋ) ಏಳು ದೇಶಗಳ 104  ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದು ದೇಶಾದ್ಯಂತ ಭಾರೀ ಪ್ರಶಂಸೆಗೆ , ಚರ್ಚೆಗೆ ಕಾರಣವಾಗಿತ್ತು. ಈ ಹಿಂದೆ ತಾನೇ 20 ಉಪಗ್ರಹ ಉಡಾವಣೆ ಮಾಡಿದ್ದನ್ನು ಹಾಗು 2014 ರಲ್ಲಿ ರಷ್ಯಾ ಒಂದೇ ಬಾರಿ  37 ಉಪಗ್ರಹಗಳನ್ನು ಕಳಿಸಿದ್ದ ದಾಖಲೆಯನ್ನು ಇಸ್ರೋ ಮುರಿದು ಹೊಸ ದಾಖಲೆ ಸೃಷ್ಟಿಸಿರುವುದು ಸಹಜವಾಗಿಯೇ ಹೆಮ್ಮೆಯ ಸಾಧನೆ. ಇದಕ್ಕ್ಕಾಗಿ ಇಸ್ರೋಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. 

ಸಾಮಾಜಿಕ ಜಾಲತಾಣಗಳಲ್ಲಿ  ಬುಧವಾರ ಇಸ್ರೋಗೆ ಅಭಿನಂದನೆಯೇ ಟ್ರೆಂಡಿಂಗ್ ಆಯಿತು. ಈ ನಡುವೆ ಬಾಲಿವುಡ್ ನ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಇಸ್ರೊವನ್ನು ಅಭಿನಂದಿಸಿ ಟ್ವೀಟ್ ಮಾಡಿದರು. ಆದರೆ ಆ ಟ್ವೀಟ್ ನಿಂದ  ಸ್ವತಃ ಅಮಿತಾಭ್ ನಗೆಪಾಟಲಿಗೀಡಾಗಿದ್ದು ಮಾತ್ರ ವಿಪರ್ಯಾಸ. ಅದಕ್ಕೆ ಅವರೇ ಕಾರಣ. 
“T 2435 – CONGRATULATIONS .. !!! ISRO for the launch of 103 satellites from one PSLV .. a world record ! HOPE ONE DAY WE LAND ON MOON !” ಎಂದು ಅಮಿತಾಭ್ ಟ್ವೀಟ್ ಮಾಡಿದ್ದರು. ಆದರೆ ಆಶ್ಚರ್ಯವೆಂದರೆ , ಆ ಟ್ವೀಟ್ ಜೊತೆ ಅಮಿತಾಭ್ ತಾನು ಪುತ್ರ ಅಭಿಷೇಕ್ ಜೊತೆ ಡ್ಯಾನ್ಸ್ ಮಾಡುವ ಚಿತ್ರವೊಂದನ್ನು ಹಾಕಿದ್ದರು !

ಇತ್ತೀಚಿಗೆ ಅಮಿತಾಭ್ ತಮ್ಮ ಪ್ರತಿಯೊಂದು ಟ್ವೀಟ್ ನಲ್ಲಿ ತನ್ನದೇ ಚಿತ್ರ ಹಾಕಿಕೊಳ್ಳುತ್ತಿರುವುದು ಜನರಲ್ಲಿ ಚರ್ಚೆಗೆ, ಹಾಸ್ಯಕ್ಕೆ ಕಾರಣವಾಗಿದೆ. ಟ್ವೀಟ್ ನಲ್ಲಿರುವ ವಿಷಯಕ್ಕೆ ಯಾವುದೇ ಸಂಬಂಧವಿಲ್ಲದ ತಮ್ಮ ಚಿತ್ರವನ್ನು ಬಿಗ್ ಬಿ ಯಾಕೆ ಹಾಕುತ್ತಿದ್ದಾರೆ, ಅವರಿಗೇಕೆ ಇಂತಹ ಪ್ರಚಾರದ ಅಗತ್ಯ ? ಎಂದು ಚರ್ಚೆಯಾಗುತ್ತಲೇ ಇತ್ತು. ಇವತ್ತು ಮಾತ್ರ ತಮ್ಮ ಜೊತೆ ಪುತ್ರನ ಚಿತ್ರವನ್ನೂ ಹಾಕಿದ ಅಮಿತಾಭ್ ನಗೆಪಾಟಲಿಗೀಡಾದರು. ಸಾಲದ್ದಕ್ಕೆ ಟ್ವೀಟ್ ನಲ್ಲಿ ಅವರು ಉಪಗ್ರಹಗಳ ಸಂಖ್ಯೆಯನ್ನೂ ತಪ್ಪಾಗಿ ಬರೆದಿದ್ದರು. 
ಇಲ್ಲಿ ಕೆಲವನ್ನು ನೋಡಿ : 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)