ಸ್ಟ್ಯಾಪ್ಲ್ ಪಿನ್ನುಗಳಿಂದ ಮದರ್ ಥೆರೆಸಾ ಚಿತ್ರ!
‘ಪೀಸ್ ಬೆಗಿನ್ಸ್ ವಿದ್ ಸ್ಮೈಲ್’ ಎಂಬ ಒಕ್ಕಣೆಯೊಂದಿಗೆ ರಚಿತವಾದ ಈ ಚಿತ್ರವನ್ನು ರಚಿಸಿದವರು ಅಲ್ಬೇನಿಯನ್ನಿನ ಕಲಾವಿದ ಸೈಮೀರ್ ಸ್ಟ್ರಾಟಿ. ಮದರ್ ಥೆರೆಸಾರ ಕರುಣೆ ತುಂಬಿದ ಮುಖದ ಚಿತ್ರವನ್ನು ಈ ಕಲಾವಿದರು ಕೇವಲ ಸ್ಟ್ಯಾಪ್ಲ್ ಪಿನ್ನುಗಳನ್ನು ಒತ್ತೊತ್ತು ಜೋಡಿಸುವುದರ ಮೂಲಕ ರಚಿಸಿದ್ದಾರೆ. ಇದಕ್ಕೆ ಬಳಸಿರುವುದು ಬರೋಬ್ಬರಿ 15 ಲಕ್ಷಕ್ಕೂ ಅಧಿಕ ಬೆಳ್ಳಿ ಹಾಗೂ ತಾಮ್ರದ ಪಿನ್ನುಗಳನ್ನು. ಸುಮಾರು 10 ಚದರ ಅಡಿಯಷ್ಟು ವಿಸ್ತೀರ್ಣದಲ್ಲಿ ಈ ಚಿತ್ರ ರೂಪುಗೊಂಡಿದೆ. ಈ ರೀತಿ ಸ್ಟ್ಯಾಪ್ಲ್ನಿಂದ ರಚಿಸಲಾಗಿರುವ ದೊಡ್ಡ ಚಿತ್ರಕಲೆ ಎಂದು ಇದು ಗಿನ್ನೆಸ್ ದಾಖಲೆಗೂ ಪಾತ್ರವಾಗಿದೆ.
Next Story