varthabharthi


ರಾಷ್ಟ್ರೀಯ

ಗೋಡೆಗೆ ಏರ್ ಇಂಡಿಯಾ ವಿಮಾನ ಢಿಕ್ಕಿ; 136 ಪ್ರಯಾಣಿಕರು ಅಪಾಯದಿಂದ ಪಾರು

ವಾರ್ತಾ ಭಾರತಿ : 12 Oct, 2018

ಚೆನ್ನೈ, ಅ.12: ದುಬೈ ಹೊರಟಿದ್ದ ಏರ್ ಇಂಡಿಯಾ ವಿಮಾನವೊಂದು   ಟೆಕ್​ ಆಫ್​ ಆಗುವಾಗ ವಿಮಾನ ನಿಲ್ದಾಣದ ಗಡಿ ಗೋಡೆಗೆ ಢಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್​   ವಿಮಾನದಲ್ಲಿದ್ದ 136  ಮಂದಿ ಪ್ರಯಾಣಿಕರು ಅಪಾಯದಿಂದ ಪಾರಾಗಿರುವ ಘಟನೆ  ಚೆನ್ನೈನ ತಿರುಚ್ಚಿ ವಿಮಾನ ನಿಲ್ದಾಣದಲ್ಲಿ ನಡೆದಿದೆ.

ಗುರುವಾರ ತಡರಾತ್ರಿ 1:30ರ ಹೊತ್ತಿಗೆ ದುಬೈಗೆ ಹೊರಟಿದ್ದ  ಏರ್ ಇಂಡಿಯಾ ವಿಮಾನ (ಎಕ್ಸ್ ಪ್ರೆಸ್  611) ರನ್ ವೇ ಪಕ್ಕದ ರಕ್ಷಣಾ ಗೋಡೆಗೆ ಢಿಕ್ಕಿ ಹೊಡೆದಿದ್ದು, ವಿಮಾನದ ಚಕ್ರಗಳಿಗೆ ಹಾನಿಯಾಗಿದೆ. ಈ ದುರಂತ ಸಂಭವಿಸಿದ ಸ್ವಲ್ಪ ಹೊತ್ತಿನಲ್ಲಿ ಎಟಿಸಿ ಸಂಪರ್ಕ ಕಡಿದುಕೊಂಡಿತ್ತು. ಆದರೆ ಸ್ವಲ್ಪ ಹೊತ್ತಿನಲ್ಲಿ ಮಂಗಳೂರು ಎಟಿಸಿ ಮೂಲಕ ಸಂಪರ್ಕ ಸಾಧಿಸಿ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂ ಸ್ಪರ್ಶ ಮಾಡಲು ಪೈಲೆಟ್ ಗೆ ಸೂಚಿಸಲಾಗಿತ್ತು.  

ಬೆಳಗ್ಗೆ 5:30ಕ್ಕೆ ವಿಮಾನ ಮುಂಬೈ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದ್ದು , ವಿಮಾನದಲ್ಲಿದ್ದ 136 ಪ್ರಯಾಣಿಕರು  ಮತ್ತು ಸಿಬ್ಬಂದಿಗಳಿಗೆ  ಇನ್ನೊಂದು ವಿಮಾನದಲ್ಲಿ ಪ್ರಯಾಣಿಸಲು ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)