ವಾರ್ತಾಭಾರತಿ 16ನೇ ವಾರ್ಷಿಕ ವಿಶೇಷಾಂಕ
ಶಿಷ್ಯನೊಬ್ಬ ಕೇಳಿದ ಕೆಲವು ಪ್ರಶ್ನೆಗಳಿಗೆ ಮೌಲಾನಾ ಜಲಾಲುದ್ದೀನ್ ರೂಮಿ ಅವರು ನೀಡಿದ ಸುಂದರ, ಸಂಕ್ಷಿಪ್ತ ಉತ್ತರಗಳು
ರೂಮಿಯ ವ್ಯಾಖ್ಯಾನಗಳು
ವಾರ್ತಾ ಭಾರತಿ : 7 Dec, 2018
ಸಂಗ್ರಹ: ಮುಮ್ತಾಝ್ ಪುತ್ತಿಗೆ

► ವಿಷ ಅಂದರೇನು?
ನಮ್ಮ ಬಳಿ ಯಾವುದು ನಮ್ಮ ಅಗತ್ಯಕ್ಕಿಂತ ಹೆಚ್ಚಿದೆಯೋ ಅದು ನಮ್ಮ ಪಾಲಿಗೆ ವಿಷವಾಗಿ ಬಿಡುತ್ತದೆ.
► ಅಸೂಯೆ ಅಂದರೇನು?
ಇನ್ನೊಬ್ಬರಲ್ಲಿರುವ ಒಳಿತನ್ನು ಒಪ್ಪಿಕೊಳ್ಳಲು ನಮಗೆ ಸಾಧ್ಯವಾಗದಿರುವುದು.
► ಭಯ ಅಂದರೇನು?
ಅನಿರೀಕ್ಷಿತ ಸನ್ನಿವೇಶವನ್ನು ಅಂಗೀಕರಿಸಿ ಅದನ್ನು ಎದುರಿಸುವಲ್ಲಿ ನಾವು ಕಾಣುವ ಸೋಲು.
► ಕೋಪ ಅಂದರೇನು?
ನಮ್ಮ ನಿಯಂತ್ರಣದಲ್ಲಿ ಇಲ್ಲದ ವಿಷಯವನ್ನು ಅಂಗೀಕರಿಸಲು ನಮಗೆ ಸಾಧ್ಯವಾಗದಿರುವುದು.
► ದ್ವೇಷ ಅಂದರೇನು?
ಯಾವುದೇ ವ್ಯಕ್ತಿ ಅಥವಾ ವಸ್ತುವನ್ನು ಯಥಾ ರೂಪದಲ್ಲಿ ಅಂಗೀಕರಿಸಲು ನಮಗೆ ಸಾಧ್ಯವಾಗದಿರುವುದು.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)