varthabharthi


ಮಾಹಿತಿ - ಮಾರ್ಗದರ್ಶನ

ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ

ವಾರ್ತಾ ಭಾರತಿ : 16 Mar, 2019

ವಿದ್ಯಾರ್ಥಿವೇತನ
(ಆದಾಯ ಆಧರಿತ):
ಸಿಎಲ್‌ಪಿ ಇಂಡಿಯಾ ಸ್ಕಾಲರ್‌ಶಿಪ್ 2019

ವಿವರ:
10ನೇ ತರಗತಿಯಿಂದ ಸ್ನಾತಕೋತ್ತರ ಪದವಿಯವರೆಗಿನ ವಿದ್ಯಾರ್ಥಿಗಳು (ಡಿಪ್ಲೊಮಾ ಮತ್ತು ವೃತ್ತಿಪರ ತರಬೇತಿ ಪಡೆಯು ವವರೂ) ಸಿಎಲ್‌ಪಿ ಇಂಡಿಯಾ ನೀಡುತ್ತಿರುವ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಹ ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಂದುವರಿಸಲು ಆರ್ಥಿಕ ನೆರವು ನೀಡಲಾಗುವುದು ಮತ್ತು ಹುಡುಗಿಯರಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ.
ಅರ್ಹತೆ:
 ಸಿಎಲ್‌ಪಿ ಸ್ಥಾವರ ಇರುವ ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಕರ್ನಾಟಕ- ಈ ರಾಜ್ಯಗಳ ನಿವಾಸಿಗಳಾಗಿರಬೇಕು ಹಾಗೂ ಈ ಹಿಂದಿನ ವಾರ್ಷಿಕ ಪರೀಕ್ಷೆಯಲ್ಲಿ ಕನಿಷ್ಠ ಶೇ.50ರಷ್ಟು ಅಂಕ ಗಳಿಸಿರುವ 10ರಿಂದ 12, ಪದವಿ, ಡಿಪ್ಲೊಮಾ, ವೃತ್ತಿಪರ ತರಬೇತಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ನೆರವು:
 ಆಯ್ಕೆಯಾದ ಅಭ್ಯರ್ಥಿಗಳಿಗೆ 10ರಿಂದ 12ರವರೆಗಿನ ವಿದ್ಯಾರ್ಥಿಗಳಿಗೆ 6 ಸಾವಿರ ರೂ. ಉನ್ನತ ಅಧ್ಯಯನಕ್ಕೆ 18 ಸಾವಿರ ರೂ. ಹುಡುಗಿಯರಿಗೆ 5 ಸಾವಿರ ರೂ. ವಿಶೇಷ ಪ್ರೋತ್ಸಾಹಧನ ಹಾಗೂ ಹುಡುಗರಿಗೆ 2,500 ರೂ. ಪ್ರೋತ್ಸಾಹ ಧನ. ಒಟ್ಟು 850 ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/CIS10

******************
ವಿದ್ಯಾರ್ಥಿವೇತನ
(ಆದಾಯ ಆಧರಿತ):
ಸಮಸ್ಯೆಯಲ್ಲಿರುವ ವಿದ್ಯಾರ್ಥಿಗಳಿಗೆ ಸರಳಾ ದೇವಿ ಸ್ಕಾಲರ್‌ಶಿಪ್ 2019

ವಿವರ:
ವೈಯಕ್ತಿಕ ಸಮಸ್ಯೆಯಿಂದ ಉನ್ನತ ವಿದ್ಯಾಭ್ಯಾಸ ನಡೆಸಲು ಅನನುಕೂಲತೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಧರ್ಮಪಾಲ್ ಸತ್ಯಪಾಲ್ ಚಾರಿಟೇಬಲ್ ಟ್ರಸ್ಟ್ ನೀಡುವ ಸ್ಕಾಲರ್‌ಶಿಪ್. 9ನೇ ತರಗತಿಯ ಬಳಿಕ ಹೆಚ್ಚಿನ ವಿದ್ಯಾಭ್ಯಾಸ ನಡೆಸಲು ಆರ್ಥಿಕ ನೆರವು ನೀಡಲಾಗುವುದು.
ಅರ್ಹತೆ:
 ಅನಾಥರು, ಅಂಗವಿಕಲತೆ ಹೊಂದಿದವರು, ಕ್ಯಾನ್ಸರ್ ರೋಗಿಗಳು, ಅಥವಾ ತಂದೆ/ತಾಯಿಯರಲ್ಲಿ ಒಬ್ಬರು ಮಾತ್ರ ಬದುಕಿರುವ ವಿದ್ಯಾರ್ಥಿಗಳು, ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ನೆರವು:
ಆಯ್ಕೆಯಾದ 100 ಅಭ್ಯರ್ಥಿಗಳಿಗೆ 10 ಸಾವಿರ ರೂ. ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/SDS6

******************
ವಿದ್ಯಾರ್ಥಿವೇತನ
(ಅರ್ಹತೆ ಮತ್ತು ಆದಾಯ ಆಧರಿತ):
ಸರಳಾ ದೇವಿ ಸ್ಕಾಲರ್‌ಶಿಪ್ 2019

ವಿವರ:
ಪ್ರತಿಭಾನ್ವಿತ, ಬಡ ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸ ನಡೆಸಲು ಧರ್ಮಪಾಲ್ ಸತ್ಯಪಾಲ್ ಚಾರಿಟೇಬಲ್ ಟ್ರಸ್ಟ್ ನೀಡುವ ಸ್ಕಾಲರ್‌ಶಿಪ್. ದೇಶದ ಯಾವುದೇ ಪ್ರದೇಶದ ನಿವಾಸಿಗಳಾಗಿರಬಹುದು, ಆದರೆ ಈಗ ದಿಲ್ಲಿ, ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಶಿಕ್ಷಣ ಪಡೆಯುತ್ತಿರಬೇಕು.
ಅರ್ಹತೆ:
  ಪ್ರಥಮ ವರ್ಷದ ಎಂಬಿಬಿಎಸ್, ಇಂಜಿನಿಯರಿಂಗ್, ನರ್ಸಿಂಗ್, ಎಲ್‌ಎಲ್‌ಬಿ, ಸೈಕಾಲಜಿ, ಅಥವಾ ಸಮೂಹ ಸಂವಹನ ವಿದ್ಯಾರ್ಥಿಗಳು(12ನೇ ತರಗತಿಯಲ್ಲಿ ಕನಿಷ್ಠ ಶೇ.75 ಅಂಕ ಗಳಿಸಿರಬೇಕು). ಸಿಎ, ಸಿಎಸ್ ಶಿಕ್ಷಣ ಪಡೆಯಬಯಸುವ, 12ನೇ ತರಗತಿಯಲ್ಲಿ ಕನಿಷ್ಠ ಶೇ.80 ಗಳಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅಲ್ಲದೆ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿಗಳು ಈಗ ವೃತ್ತಿಪರ ತರಬೇತಿ ಪಡೆಯಬಯಸುವವರು ಅರ್ಜಿ ಸಲ್ಲಿಸಬಹುದು. ವಾರ್ಷಿಕ ಆದಾಯ 4.5 ಲಕ್ಷ ರೂ.ಗಿಂತ ಹೆಚ್ಚು ಇರಬಾರದು
ನೆರವು:
 ಆಯ್ಕೆಯಾದವರಲ್ಲಿ ಇಂಜಿನಿಯರಿಂಗ್ ಮತ್ತು ಸೈಯನ್ಸ್ ವಿದ್ಯಾರ್ಥಿಗಳಿಗೆ 75 ಸಾವಿರ ರೂ., ಕಲಾ ವಿಭಾಗದ ವಿದ್ಯಾರ್ಥಿಗಳಿಗೆ 20 ಸಾವಿರ ರೂ., ವಾಣಿಜ್ಯ, ಸಿಎ, ಸಿಎಸ್ ವಿದ್ಯಾರ್ಥಿಗಳಿಗೆ 25 ಸಾವಿರ ರೂ., ವೃತ್ತಿಪರ ತರಬೇತಿ ವಿದ್ಯಾರ್ಥಿಗಳಿಗೆ 15 ಸಾವಿರ ರೂ. ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/SDS5

*******************************
ವಿದ್ಯಾರ್ಥಿವೇತನ
(ಸಂಶೋಧನೆ ಆಧರಿತ):
 ಆರ್ತರೊ ಫಲಾಶಿ ಪೋಸ್ಟ್‌ಡಾಕ್ಟೋರಲ್ ಫೆಲೊಶಿಪ್, ಐಸಿಜಿಬಿ 2019

ವಿವರ:
ಜೀವವಿಜ್ಞಾನ ವಿಷಯದಲ್ಲಿ ಪೋಸ್ಟ್‌ಡಾಕ್ಟೋರಲ್ ಸಂಶೋಧನಾ ಕಾರ್ಯ ನಡೆಸಲು ಆಸಕ್ತಿ ಹೊಂದಿರುವ ಭಾರತೀಯ ವಿಜ್ಞಾನಿಗಳಿಗೆ ಇಂಟರ್‌ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ಇಂಜಿನಿಯರಿಂಗ್ ಆ್ಯಂಡ್ ಬಯೊಟೆಕ್ನಾಲಜಿ (ಐಸಿಜಿಬಿ) ನೀಡುವ ಫೆಲೊಶಿಪ್.
ಅರ್ಹತೆ:
ಜೀವವಿಜ್ಞಾನದಲ್ಲಿ ಪಿಎಚ್‌ಡಿ ಪದವೀಧರರು ಅಥವಾ ಕನಿಷ್ಠ 3 ವರ್ಷದ ಅನುಭವ ಇರುವ, 35 ವರ್ಷದೊಳಗಿನ ಭಾರತೀಯ ನಾಗರಿಕರು, ಇಟಲಿ, ಹೊಸದಿಲ್ಲಿ ಅಥವಾ ಕೇಪ್‌ಟೌನ್‌ನಲ್ಲಿರುವ ಐಸಿಜಿಬಿ ಕೇಂದ್ರಗಳಲ್ಲಿ ಸಂಶೋಧನೆ ನಡೆಸಲು ಅರ್ಜಿ ಸಲ್ಲಿಸಬಹುದು.
ನೆರವು:
ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತೀ ತಿಂಗಳು 1,590 ಅಮೆರಿಕನ್ ಡಾಲರ್ (ಸುಮಾರು 1 ಲಕ್ಷ ರೂ.)ಸ್ಟೈಪೆಂಡ್, ಫೆಲೊಶಿಪ್ ಅವಧಿಯವರೆಗೆ ಪ್ರಯಾಣ ಭತ್ತೆ, ಮೆಡಿಕಲ್ ಇನ್ಷೂರೆನ್ಸ್ ಸೌಲಭ್ಯ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮಾರ್ಚ್ 31, 2019
ಅರ್ಜಿ: ಅರ್ಜಿಗಳನ್ನು ಆನ್‌ಲೈನ್ ಮೂಲಕ ಹಾಕಬೇಕು.
ಜಾಲತಾಣ: http://www.b4s.in/bharati/AFP1

******************
ವಿದ್ಯಾರ್ಥಿವೇತನ
(ಅಂತರ್‌ರಾಷ್ಟ್ರೀಯ ಮಟ್ಟ):
 ಎಂಪವರ್ ಗ್ಲೋಬಲ್ ಸಿಟಿಝನ್ ಸ್ಕಾಲರ್‌ಶಿಪ್ 2019

ವಿವರ:
ಎಂಪವರ್ ಫೈನಾನ್ಸಿಂಗ್ ಸಂಸ್ಥೆಯು ಅಮೆರಿಕ ಮತ್ತು ಕೆನಡಾದಲ್ಲಿರುವ 200ಕ್ಕೂ ಹೆಚ್ಚಿನ ಪಾಲುದಾರ ವಿವಿಗಳಲ್ಲಿ ವಿದ್ಯಾಭ್ಯಾಸ ನಡೆಸಲು ಸ್ಕಾಲರ್‌ಶಿಪ್ ನೀಡುತ್ತದೆ.
ಅರ್ಹತೆ:
ಕನಿಷ್ಠ 18 ವರ್ಷದ, ಪಾಲುದಾರ ವಿವಿಗಳಲ್ಲಿ ನೋಂದಾಯಿಸಲ್ಪಟ್ಟಿರುವ ಅಥವಾ ಅವರ ಅರ್ಜಿ ಸ್ವೀಕೃತವಾಗಿರುವ ಮತ್ತು ಕೆನಡಿಯನ್, ಅಮೆರಿಕ ವೀಸಾ ಹೊಂದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
ನೆರವು:
ಆಯ್ಕೆಯಾದ ಅಭ್ಯರ್ಥಿಗಳಿಗೆ 5,000 ಅಮೆರಿಕನ್ ಡಾಲರ್ ನೀಡಲಾಗುವುದು.
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಎಪ್ರಿಲ್ 15, 2019
ಅರ್ಜಿ:  ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಜಾಲತಾಣ: http://www.b4s.in/bharati/MGC1

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)