varthabharthi


ಓ ಮೆಣಸೇ

ಓ ಮೆಣಸೇ…

ವಾರ್ತಾ ಭಾರತಿ : 10 Jun, 2019
ಪಿ.ಎ.ರೈ

ಮೋದಿ ಸಂಪುಟದಲ್ಲಿ ಕೆಲಸ ಮಾಡುವುದೇ ಒಂದು ದೊಡ್ಡ ಸಾಧನೆ -ಸುರೇಶ್ ಅಂಗಡಿ, ಕೇಂದ್ರ ಸಚಿವ   
ಅಲ್ಲಿ ಕೆಲಸ ಮಾಡುವವರನ್ನು ಉಳಿಸಿಕೊಳ್ಳುವ ಪದ್ಧತಿಯಿಲ್ಲ. ಭೋಪರಾಕ್ ಹೇಳುತ್ತಾ ಒಟ್ಟಿಗಿದ್ದರೆ ಸಾಕು.

---------------------

ಸಿಂಹ ಹುಲಿಗಳಿಗಿಂತಲೂ ಗೋವಿನ ಸಂತತಿ ಕಡಿಮೆಯಾಗಿದೆ - ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಸಿಂಹ, ಹುಲಿಗಳ ಸಂತತಿ ಕಡಿಮೆಯಾಗಿರುವುದು ಮುಸ್ಲಿಮರು ಅದನ್ನು ಭಕ್ಷಿಸಿದ ಕಾರಣಕ್ಕೆ ಎಂದು ಇನ್ನೂ ಆರೋಪಿಸಿಲ್ಲವೇ?

---------------------
ರಾಜ್ಯದಲ್ಲಿ 35 ಲಕ್ಷಕ್ಕೂ ಅಧಿಕ ಬಿಲ್ಲವರಿದ್ದರೂ ಸೂಕ್ತ ಸ್ಥಾನಮಾನ ಸಿಗುತ್ತಿಲ್ಲ - ಕೋಟ ಶ್ರೀನಿವಾಸ ಪೂಜಾರಿ, ವಿ.ಪ.ಪ್ರತಿಪಕ್ಷನಾಯಕ
ಬಿಜೆಪಿಯೂ ಬೇಕು, ಸ್ಥಾನಮಾನವೂ ಬೇಕು ಎಂದರೆ ಆಗುತ್ತದೆಯೇ? ಮೋದಿ ಪ್ರಧಾನಿಯಾದರೆ ಸಾಕಾಗುವುದಿಲ್ಲವೇ?

---------------------

ನಾನು ಬೆಟ್ ಕಟ್ಟುತ್ತೇನೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ - ರೇಣುಕಾಚಾರ್ಯ, ಶಾಸಕ
ಬೆಟ್ಟಿಂಗ್ ಮಾಫಿಯಾದ ರಾಜ ಎನ್ನುವುದನ್ನು ಅಧಿಕೃತವಾಗಿ ಘೋಷಿಸಿದಂತಾಗಿದೆ.

---------------------

ಒಳ್ಳೆಯ ನೆನಪುಗಳು ನಮ್ಮಲ್ಲಿರುವ ಉತ್ಸಾಹವನ್ನು ಮತ್ತಷ್ಟ್ಟು ಹೆಚ್ಚಿಸುವ ಟಾನಿಕ್ ಇದ್ದ ಹಾಗೆ - ಸಂಜಯ್‌ದತ್, ನಟ
ಕೆಲವು ಟಾನಿಕ್‌ಗಳು ಕೆಟ್ಟ ನೆನಪುಗಳನ್ನಷ್ಟೇ ಕೆದಕುತ್ತವೆ.

---------------------

ಮಹಾದಾಯಿ ಸಮಸ್ಯೆಗೆ ಒಗ್ಗಟ್ಟೇ ಮದ್ದು - ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವ
ಈ ಕುರಿತಂತೆ ಮೊದಲು ಬಿಜೆಪಿ ಸಂಸದರು ಒಗ್ಗಟ್ಟಾಗಬೇಕಾಗಿದೆ.

---------------------

ಬಿಜೆಪಿ ರಾಜಕೀಯದೊಂದಿಗೆ ಧರ್ಮ ಬೆರೆಸುತ್ತಿದೆ - ಮಮತಾ ಬ್ಯಾನರ್ಜಿ, ಪ.ಬಂಗಾಳ ಮುಖ್ಯಮಂತ್ರಿ
ಎಡಪಂಥೀಯರು ಚಿಯರ್ಸ್‌ ಎಂದು ಅದನ್ನು ಕುಡಿಯ ಹೊರಟಿದ್ದಾರೆ.

---------------------

ಸಂಸದನಾಗಿ ಜಿಲ್ಲೆಯ ಜನರಿಗೆ ಗೌರವ ತರುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ - ನಳಿನ್‌ಕುಮಾರ್ ಕಟೀಲು, ಸಂಸದ
ಈವರೆಗೆ ಅಗೌರವ ತರುವ ನಿಟ್ಟಿನಲ್ಲಿ ಕೆಲಸ ಮಾಡಿರುವುದನ್ನು ಒಪ್ಪಿಕೊಂಡಂತಾಯಿತು.

---------------------

ದಿ ಹೇರಿಕೆಗೆ ಅಡ್ಡಿ ಮಾಡುವವರು ಮೊದಲು ರಾಜ್ಯದಲ್ಲಿ ಕನ್ನಡ ಕಡ್ಡಾಯ ಮಾಡಲಿ - ಶೋಭಾ ಕರಂದ್ಲಾಜೆ, ಸಂಸದೆ
 ಕನ್ನಡ ಕಡ್ಡಾಯ ಕಲಿಯುವುದಕ್ಕೆ ಹಿಂದಿ ಹೇರಿಕೆ ಅಡ್ಡಿಯಾಗಿದೆ ತಾಯಿ.

---------------------

ನಾನೆಂದೂ ಹಿಂಬಾಗಿಲಿನ ರಾಜಕಾರಣ ಮಾಡಿಲ್ಲ - ಬಸವರಾಜ ಹೊರಟ್ಟಿ, ವಿ.ಪ.ಸದಸ್ಯ

ಬಹುಶಃ ಗೋಡೆಗೆ ಕನ್ನ ಕೊರೆದಿರಬೇಕು.

---------------------
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರಲ್ಲಿ ಇವಿಎಂ ಬಗ್ಗೆ ಅನುಮಾನ ಪಡುವಷ್ಟು ದಡ್ಡತನ ಇದೆ ಎಂದು ನನಗೆ ಈ ತನಕ ಗೊತ್ತಿರಲಿಲ್ಲ - ಸಿ.ಟಿ.ರವಿ, ಶಾಸಕ
ಅಂದರೆ ಅನುಮಾನದ ಅಗತ್ಯವಿಲ್ಲ, ನೇರವಾಗಿ ಆರೋಪ ಮಾಡಬೇಕಿತ್ತು ಎನ್ನುವ ಸಲಹೆಯೇ?

---------------------

ನಾನು ಕಾಂಗ್ರೆಸ್‌ನ ನಿಷ್ಠಾವಂತ ಸಿಪಾಯಿ - ರೋಷನ್‌ ಬೇಗ್, ಮಾಜಿ ಸಚಿವ
ಆದರೆ ಶತ್ರುಗಳಿಗೆಂದು ಬಿಟ್ಟ ಬಾಣ ಇರಿದದ್ದು ಕಾಂಗ್ರೆಸನ್ನು.

---------------------

ಪುರಾವೆ ಇಲ್ಲದೆ ಇವಿಎಂ ದೂಷಿಸುವುದು ಸರಿಯಲ್ಲ - ಶಶಿತರೂರು, ಸಂಸದ
  ಪುರಾವೆಗಳ ನಾಶವನ್ನಾದರೂ ಪ್ರಶ್ನಿಸಬೇಕಲ್ಲ?

---------------------

ಸಿನೆಮಾದಲ್ಲಿ ಡ್ಯೂಪ್‌ಗಿಂತ ರಿಯಲ್ ಸ್ಟಂಟ್ ಮಾಡುವುದು ನನಗೆ ಇಷ್ಟ - ಅಕ್ಷಯ್‌ಕುಮಾರ್, ನಟ
ಮೋದಿ ಸಂದರ್ಶನದಲ್ಲಿ ಡ್ಯೂಪ್ ಬಳಸದೆ ನಟಿಸಿರುವುದು ಅದ್ಭುತವಾಗಿತ್ತು.

---------------------

ಯಡಿಯೂರಪ್ಪ ಕಾಂಗ್ರೆಸ್‌ಗೆ ಬಂದರೆ ಮುಖ್ಯಮಂತ್ರಿಯಾಗಲು ಸಹಾಯ ಮಾಡುತ್ತೇನೆ - ಎಂ.ಬಿ.ಪಾಟೀಲ್, ಸಚಿವ
ಈಗಾಗಲೇ ಇರುವ ಮುಖ್ಯಮಂತ್ರಿ ಅಭ್ಯರ್ಥಿಗಳೇ ಬಿಜೆಪಿಯ ಬಾಗಿಲು ತಟ್ಟುತ್ತಿದ್ದಾರೆ.

---------------------

ನರೇಂದ್ರ ಮೋದಿ ಜೀವಂತ ಇರುವವರೆಗೆ ಪ್ರಧಾನಿಯಾಗಿರುತ್ತಾರೆ - ಕೆ.ಎಸ್.ಈಶ್ವರಪ್ಪ, ಶಾಸಕ
ಅಲ್ಲಿಯವರೆಗೆ ಬಿಜೆಪಿ ಜೀವಂತವಿರುವುದು ಮಾತ್ರ ಅನುಮಾನ.

---------------------

ಪರಿಸರ ಮಾಲಿನ್ಯಕ್ಕೆ ದುರಾಸೆ ಮತ್ತು ಸಂವೇದನಾರಹಿತ ಮನೋಭಾವವೇ ಮೂಲ ಕಾರಣ - ರವಿಶಂಕರ್ ಗುರೂಜಿ, ಆರ್ಟ್ಸ್ ಆಫ್ ಲಿವಿಂಗ್ ಸಂಸ್ಥಾಪಕ
ಯಮುನಾ ನದಿ ದಂಡೆಯಲ್ಲಿ ತಾವು ಮಾಡಿದ ಪರಿಸರ ಮಾಲಿನ್ಯಕ್ಕೆ ಪಶ್ಚಾತ್ತಾಪವೇ?

---------------------

ಮಹಾಘಟಬಂಧನ್ ಒಂದು ಪ್ರಯೋಗವಾಗಿತ್ತು - ಅಖಿಲೇಶ್‌ಯಾದವ್, ಎಸ್ಪಿ ನಾಯಕ
ಅಪರೇಷನ್ ಯಶಸ್ವಿಯಾಗಿದೆ. ರೋಗಿ ಸತ್ತಿದ್ದಾನೆ.

---------------------

ಕಾಂಗ್ರೆಸ್‌ಗೆ ತಾಕತ್ತಿದ್ದರೆ ದಲಿತರನ್ನು ಮುಖ್ಯಮಂತ್ರಿ ಮಾಡಿ - ಯಡಿಯೂರಪ್ಪ, ಬಿಜೆಪಿ ಅಧ್ಯಕ್ಷ
ನೀವೇಕೆ ದಲಿತ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬಾರದು?

---------------------

ಮೈತ್ರಿ ಇರದಿದ್ದರೆ ಕಾಂಗ್ರೆಸ್ 10 ಸೀಟು ಗೆಲ್ಲುತ್ತಿತ್ತು - ಸುಮಲತಾ ಅಂಬರೀಷ್, ಸಂಸದೆ
ಆದರೆ ಇವಿಎಂ ಮೈತ್ರಿ ಅದಕ್ಕೆ ಅವಕಾಶ ಮಾಡಿಕೊಡುತ್ತಿರಲಿಲ್ಲ ಎಂಬ ಆರೋಪಗಳಿವೆ.

---------------------

ಅಮೆರಿಕದಲ್ಲಿ ಶುದ್ಧ ನೀರು, ಗಾಳಿ ಸಿಗುತ್ತದೆ, ಭಾರತದಲ್ಲಿ ಸಿಗುವುದಿಲ್ಲ - ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ
ಹೌದು, ನಿಮ್ಮ ಹಿತಾಸಕ್ತಿಗಾಗಿ ಅವುಗಳೆಲ್ಲ ನಾಶವಾಗುತ್ತಿವೆ.

---------------------

ಬಡವರು, ದಲಿತರ ಪರ ಧ್ವನಿ ಎತ್ತಿದ್ದಕ್ಕಾಗಿ ನನ್ನನ್ನೂ ಟಾರ್ಗೆಟ್ ಮಾಡಲಾಗುತ್ತಿದೆ - ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ
ಇತಿಹಾಸದುದ್ದಕ್ಕೂ ಹಲವು ನಾಯಕರು ಅದಕ್ಕಾಗಿ ಟಾರ್ಗೆಟ್ ಆಗಿದ್ದಾರೆ 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)

ಇನ್ನಷ್ಟು ಓ ಮೆಣಸೇ ಸುದ್ದಿಗಳು