varthabharthi


ರಾಷ್ಟ್ರೀಯ

ಕೋರ್ಟ್ ಆವರಣದಲ್ಲೇ ಉ.ಪ್ರದೇಶ ಬಾರ್ ಕೌನ್ಸಿಲ್ ಅಧ್ಯಕ್ಷೆಯ ಗುಂಡಿಕ್ಕಿ ಹತ್ಯೆ

ವಾರ್ತಾ ಭಾರತಿ : 12 Jun, 2019

ಆಗ್ರಾ, ಜೂ.12: ಉತ್ತರ ಪ್ರದೇಶ ಬಾರ್ ಕೌನ್ಸಿಲ್ ಅಧ್ಯಕ್ಷೆಯನ್ನು ಕೋರ್ಟ್ ಆವರಣದಲ್ಲೇ ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದಿದೆ. ಮೃತಪಟ್ಟವರನ್ನು ದರ್ವೇಶ್ ಯಾದವ್ ಎಂದು ಗುರುತಿಸಲಾಗಿದೆ.

ಇವರು ಇತ್ತೀಚೆಗಷ್ಟೇ ಬಾರ್ ಕೌನ್ಸಿಲ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದು, ನ್ಯಾಯಾಲಯದ ಆವರಣದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದರು. ಗುಂಡಿಕ್ಕಿದ ಆರೋಪಿ ಕೂಡ ಅಡ್ವಕೇಟ್ ಆಗಿದ್ದು, ನಂತರ ಆತನೂ ತನಗೆ ತಾನೇ ಗುಂಡಿಕ್ಕಿದ್ದಾನೆ.

ಇಬ್ಬರನ್ನೂ ನಗರದ ಪುಷ್ಪಾಂಜಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಯಾದವ್ ಮೃತಪಟ್ಟರು. ದಾಳಿಕೋರ ಮನೀಷ್ ಶರ್ಮಾನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)