varthabharthi


ಕರಾವಳಿ

ಎಜೆ ಬ್ಲಡ್ ಬ್ಯಾಂಕ್ : ಆಧುನಿಕ ತಂತ್ರಜ್ಞಾನದ ಸ್ವಯಂಚಾಲಿತ ರಕ್ತಕಣಗಳ ವರ್ಗೀಕರಣ ಯಂತ್ರಕ್ಕೆ ಚಾಲನೆ

ವಾರ್ತಾ ಭಾರತಿ : 12 Jun, 2019

ಮಂಗಳೂರು: ರಕ್ತನಿಧಿ ಹಾಗೂ ಟ್ರಾನ್ಸ್ ಪ್ಯೂಷನ್ ಮೆಡಿಸಿನ್  ವಿಭಾಗದಲ್ಲಿ ಎಜೆ ಬ್ಲಡ್ ಬ್ಯಾಂಕ್  ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಹೊಸ ಹಾಗೂ ಆಧುನಿಕ ತಂತ್ರಜ್ಞಾನದ ಸಂಪೂರ್ಣ ಸ್ವಯಂಚಾಲಿತ ರಕ್ತಕಣಗಳ ವರ್ಗೀಕರಣ ಯಂತ್ರವನ್ನು ( cell separator ) ಉದ್ಘಾಸಿದೆ. 

ಈ ಸಾಧನದ ಸಹಾಯದಿಂದ ರೋಗಿ ಅಥವಾ ರಕ್ತದಾನಿಯಿಂದ ರಕ್ತ ಪಡೆದು ಎಫಾರಸಿಸ್ ( Apheresis ) ತಂತ್ರಜ್ಞಾನವನ್ನು ಬಳಸಿ ನಮಗೆ ಬೇಕಾದ ರಕ್ತಕಣಗಳನ್ನು, ಪ್ಲೇಟ್ ಲೆಟ್ ಗಳನ್ನು ಬೇರ್ಪಡಿಸಿ ಉಳಿದ ರಕ್ತಕಣವನ್ನು ದಾನಿಗೆ ನಿರಂತರವಾಗಿ    ಹಿಂತಿರುಗಿಸುವ ವಿನೂತನ ವ್ಯವಸ್ತೆಯಾಗಿದೆ.

ಈ ಪ್ರಕ್ರಿಯೆ ಸರಳವಾಗಿದ್ದು ರಕ್ತದಾನ ಹಾಗೂ ಉಳಿದ ರಕ್ತಕಣಗಳನ್ನು ದಾನಿಗೆ ಹಿಂತಿರುಗಿಸುವ ಪ್ರಕ್ರಿಯೆ ಒಂದೇ ಚುಚ್ಚುವಿಕೆಯಲ್ಲಿ ( Prick ) ನಡೆಯುತ್ತದೆ. ಹಳೆಯ ಪದ್ಧತಿಯಲ್ಲಿ ಒಂದು ರಕ್ತದಾನದಿಂದ ಇನ್ನೊಂದು ರಕ್ತದಾನಕ್ಕೆ 3 ತಿಂಗಳ ಅಂತರವಿದ್ದು, ಈ ಹೊಸ ತಂತ್ರಜ್ಞಾನದಲ್ಲಿ ಕೇವಲ ಒಂದೇ ವಾರದಲ್ಲಿ ದಾನಿಯು ಸ್ವಯಂ ಪ್ರೇರಿತ ರಕ್ತದಾನ ಮಾಡಬಹುದು.

ಕಾರ್ಯಕ್ರಮದಲ್ಲಿ ಸಂಪೂರ್ಣ ಸ್ವಯಂ ಚಾಲಿತ ರಕ್ತಕಣಗಳ ವರ್ಗೀಕರಣ ಯಂತ್ರವನ್ನು ( cell separator ) ಡಾ. ಪ್ರಶಾಂತ್ ಮಾರ್ಲ, ಡಾ. ಅಮಿತ ಮಾರ್ಲ, ನೀರ್ದೆಶಕರು, ಎ.ಜೆ. ಆಸ್ಪತ್ರೆ, ಡಾ. ಅಶೋಕ್ ಹೆಗ್ಡೆ, ಡೀನ್, ಎ.ಜೆ. ಮೆಡಿಕಲ್ ಕೊಲೆಜ್ ಹಾಗೂ ಡಾ. ಮುಕ್ತ ಪೈ, ಹೆಚ್.ಒ.ಡಿ, ಪೆಥೋಲೊಜಿ  ಉದ್ಘಾಟಿಸಿದರು ಹಾಗೂ ಬೆಂಗಳೂರಿನ ರೋಟರಿ ಟಿಟಿಕೆ ಬ್ಲಡ್ ಬ್ಯಾಂಕ್ ನ ಟ್ರಾನ್ಸ್ ಪ್ಯೂಷನ್ ಮೆಡಿಸಿನ್ ನ ತಜ್ಞರಾಗಿರುವ ಡಾ. ಅಂಕಿತ್ ಮಾಥುರ್ ರಿಂದ ಎಫಾರಸಿಸ್ ತಂತ್ರಜ್ಞಾನದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಪದ್ಮ ಮತ್ತು ವಿನೋದ ಪ್ರಾರ್ಥನೆ ನಡೆಸಿದರು. ಡಾ. ಅರವಿಂದ್ ಸ್ವಾಗತಿಸಿದರು. ಗೋಪಾಲಕೃಷ್ಣ  ವಂದಿಸಿ, ಡಾ. ವರ್ಶ ಕಾರ್ಯಕ್ರಮ  ನಿರೂಪಿಸಿದರು. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)