ಝಲಕ್
ಶಾಶ್ವತ-ನಶ್ವರ
ವಾರ್ತಾ ಭಾರತಿ : 23 Jul, 2019
-ಮಗು

‘‘ಮಹಾ ಕಾವ್ಯ ಬರೆಯುತ್ತಿದ್ದವರು ಏಕಾಏಕಿ ಮಕ್ಕಳ ಕವಿತೆ ಬರೆಯ ತೊಡಗಿದ್ದೀರಲ್ಲ....’’
ಕವಿಯನ್ನು ಯಾರೋ ಕೇಳಿದರು.
‘‘ಮಹಾ ಕಾವ್ಯ ಮರದಲ್ಲಿ ಕೆತ್ತಿದ ಬಾಳೆ ಹಣ್ಣಿನಂತೆ ಸುಂದರ, ಶಾಶ್ವತ. ಆದರೆ ಮಕ್ಕಳ ಕಾವ್ಯ ಬಾಳೆಗಿಡದಲ್ಲಿ ತೂಗುತ್ತಿರುವ ಹಣ್ಣಿನಂತೆ ನಶ್ವರ. ಈ ಜಗತ್ತಿನಲ್ಲಿ ಪರಿಮಳ, ರುಚಿಯಿಲ್ಲದ ಬಾಳೆ ಹಣ್ಣಾಗಿ ಶಾಶ್ವತವಾಗಿರುವುದು ವ್ಯರ್ಥ ಎನ್ನುವುದು ಇತ್ತೀಚೆಗೆ ಅರಿವಾಯಿತು...’’
‘‘ಇತ್ತೀಚೆಗೆ ಅಂದರೆ...’’
‘‘ಮದುವೆಯಾದ ಎಷ್ಟೋ ವರ್ಷಗಳ ಬಳಿಕ ಇತ್ತೀಚೆಗೆ ನನಗೊಂದು ಮಗುವಾಯಿತು...’’
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)