varthabharthi


ನಿಮ್ಮ ಅಂಕಣ

ಕಾಯ್ದೆಯ ಹಲ್ಲು ಕೀಳಲು ಹೊರಟವರು!

ವಾರ್ತಾ ಭಾರತಿ : 26 Jul, 2019
ಲಕ್ಷ್ಮೀಕಾಂತರಾಜು ಎಂ.ಜಿ. ಮಠಗ್ರಾಮ, ಗುಬ್ಬಿ

ಮಾನ್ಯರೇ,

ಭ್ರಷ್ಟಾಚಾರ, ಅಕ್ರಮ ಪತ್ತೆ ಮಾಡಲು ಒಂದು ರೀತಿಯ ಪ್ರಬಲ ಮಾಧ್ಯಮವಾಗಿರುವ ಮಾಹಿತಿ ಹಕ್ಕು ಕಾಯ್ದೆಯ ತಿದ್ದುಪಡಿ ವಿಧೇಯಕವು ರಾಜ್ಯಸಭೆಯಲ್ಲೂ ಅನುಮೋದನೆಯಾಗಿ ಅಂಗೀಕಾರವಾಗಿದ್ದು, ಕಾಯ್ದೆಯ ಮೂಲ ಉದ್ದೇಶಕ್ಕೆ ಧಕ್ಕೆ ತರುವ ಮೂಲಕ ಕೇಂದ್ರ ಸರಕಾರ ಕಾಯ್ದೆಯನ್ನು ಬಲಹೀನವಾಗಿ ಮಾಡ ಹೊರಟಿದೆ.
ಕೇಂದ್ರ ಎನ್‌ಡಿಎ ಸರಕಾರವು ಕಾಯ್ದೆಯನ್ನು ಹಲ್ಲು ಕಿತ್ತ ಹಾವಾಗಿ ಮಾಡ ಹೊರಟಿರುವ ಕ್ರಮ ಸರಿಯಲ್ಲ. ಮಾಹಿತಿ ಹಕ್ಕು ತಿದ್ದುಪಡಿ 2019ರ ತಿದ್ದುಪಡಿಯ ಅನ್ವಯ ಮಾಹಿತಿ ಆಯುಕ್ತರ ವೇತನ, ಅವಧಿ ಸೇರಿದಂತೆ ಕಾಯ್ದೆಯ ಮತ್ತಿತರ ಪ್ರಮುಖ ಅಂಶಗಳು ಸರಕಾರದ ವ್ಯಾಪ್ತಿಗೆ ಬರಲಿವೆ. ಇದರಿಂದ ಈ ಕಾಯ್ದೆಯಲ್ಲಿ ಸರಕಾರ ಹಸ್ತಕ್ಷೇಪ ಮಾಡಲಿದೆ. ಮಾಹಿತಿ ಆಯೋಗಗಳು ಒಂದು ಸ್ವಾಯುತ್ತ ಸಂಸ್ಥೆಯಾಗಿರುವ ಕಾರಣ ಅದರಿಂದ ಹಕ್ಕು ಕಸಿಯುವ ಕೆಲಸವನ್ನು ಕೇಂದ್ರ ಮಾಡುತ್ತಿದೆ. ಆಡಳಿತದಲ್ಲಿ ಪಾರದರ್ಶಕ ಕಾಯ್ದುಕೊಳ್ಳಲು ನೆರವಾಗಿರುವ ಈ ಕಾಯ್ದೆಯನ್ನು ಕೇಂದ್ರ ಸರಕಾರ ಹಂತ ಹಂತವಾಗಿ ದುರ್ಬಲ ಮಾಡುವ ಪ್ರಯತ್ನ ನಡೆಯುತ್ತಿದೆ.
ಭ್ರಷ್ಟಾಚಾರ ಮುಕ್ತ ಆಡಳಿತ ನೀಡುತ್ತೇವೆಂದು ಘೋಷಿಸಿಕೊಂಡಿರುವ ಬಿಜೆಪಿಯು ಭ್ರಷ್ಟಾಚಾರ ಬಯಲುಗೊಳಿಸಲು ನೆರವಾಗುವ ಮಾಹಿತಿ ಹಕ್ಕು ಕಾಯ್ದೆಯನ್ನು ಕಸಿಯಲು ಹೊರಟಿರುವ ಕ್ರಮ ಅವರ ಮೂಲ ಉದ್ದೇಶಗಳನ್ನು ಬಿಂಬಿಸುತ್ತಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)