ನಿಮ್ಮ ಅಂಕಣ
ತೆರೆದ ಬಾಗಿಲ ಬಸ್!
ವಾರ್ತಾ ಭಾರತಿ : 26 Jul, 2019
-ಅಫ್ರೀದಾ ಫಾತಿಮಾ, ಸೇರಾಜೆ
ಮಾನ್ಯರೇ,
ರಾಜ್ಯದ ಇತರ ಕಡೆಗಳಿಗೆ ಹೋಲಿಸಿದರೆ ಅತೀ ಹೆಚ್ಚು ಖಾಸಗಿ ಬಸ್ಸುಗಳಿರುವ ಜಿಲ್ಲೆಗಳು ದಕ್ಷಿಣ ಕನ್ನಡ-ಉಡುಪಿ. ಮಂಗಳೂರು ನಗರದಲ್ಲಿ ಖಾಸಗಿ ಸಿಟಿ ಬಸ್ಗಳದ್ದೇ ಕಾರುಬಾರು. ಹಾಗಾಗಿ ಈ ಬಸ್ಗಳವರು ಜಿಲ್ಲಾಡಳಿತದ ಆದೇಶವನ್ನೂ ಲೆಕ್ಕಿಸದೆ ತಾವು ಮಾಡಿದ್ದೇ ಕಾನೂನೆಂಬಂತೆ ವರ್ತಿಸುತ್ತಿದ್ದಾರೆ.
ನಗರದಲ್ಲಿ ಸಂಚರಿಸುವ ಶೇ. 100 ಖಾಸಗಿ ಸಿಟಿ ಬಸ್ಗಳಿಗೂ ಮುಚ್ಚಬಹುದಾದ ಬಾಗಿಲುಗಳಿಲ್ಲ. ಬೆಳಗ್ಗೆ ಮತ್ತು ಸಂಜೆ ವೇಳೆ ಈ ಬಸ್ಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬುತ್ತಾರೆ. ಆದರೆ ತೆರೆದ ಬಾಗಿಲಿರುವ ಈ ಬಸ್ಗಳಲ್ಲಿ ಸುರಕ್ಷತೆ ನಿರೀಕ್ಷಿಸುವಂತಿಲ್ಲ. ಅಪಾಯ ಕಟ್ಟಿಟ್ಟ ಬುತ್ತಿ!
ನೆರೆಯ ಕೇರಳದಲ್ಲಂತೂ ಕಡ್ಡಾಯವಾಗಿ ಎಲ್ಲ ಬಸ್ಗಳಿಗೂ ಮುಚ್ಚಲ್ಪಡುವ ಬಾಗಿಲುಗಳನ್ನು ಅಳವಡಿಸಲಾಗಿದೆ.
ಇನ್ನಾದರೂ ಸಂಬಂಧಪಟ್ಟವರು ಈ ಬಗ್ಗೆ ಗಮನ ನೀಡಿಯಾರೇ?
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
Comments (Click here to Expand)