varthabharthi


ಸಿನಿಮಾ

100 ಕೋಟಿ ರೂ. ಕ್ಲಬ್ ಸೇರಿದ ‘ಸೂಪರ್ 30’

ವಾರ್ತಾ ಭಾರತಿ : 28 Jul, 2019

ಇತ್ತೀಚೆಗೆ ಬಿಡುಗಡೆಯಾದ ಹೃತಿಕ್ ರೋಶನ್ ಹಾಗೂ ಮೃಣಾಲ್ ಠಾಕೂರ್ ನಟನೆಯ ‘ಸೂಪರ್ 30’ ಸಿನೆಮಾ ಪ್ರೇಮಿಗ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ದೇಶದ ಅತಿ ಕಷ್ಟಕರ ಪರೀಕ್ಷೆಯಲ್ಲಿ ಉತ್ತೀರ್ಣರಾದ 30 ವಿದ್ಯಾರ್ಥಿಗಳಿಗೆ ಬೋಧಿಸಿದ ಹಾಗೂ ಮಾರ್ಗದರ್ಶನ ನೀಡಿದ ಗಣಿತಶಾಸ್ತ್ರಜ್ಞ ಆನಂದ್ ಕುಮಾರ್ ಅವರ ಬದುಕು ಆಧರಿತ ಚಿತ್ರ ಇದು. ‘ಸೂಪರ್ 30’ ಬಾಕ್ಸ್ ಆಫೀಸಿನಲ್ಲಿ ಇದುವರೆಗೆ ಉತ್ತಮ ಸಾಧನೆ ಮಾಡಿದೆ. ಅಲ್ಲದೆ 100 ಕೋಟಿ ರೂ.ಯ ಕ್ಲಬ್‌ಗೆ ಸೇರಿದೆ. ಚಿತ್ರ ಮೊದಲ ವಾದಲ್ಲಿ 75.85 ಕೋಟಿ ರೂ.ಗಳಿಸಿತ್ತು.

ಈ ಚಿತ್ರದ ಒಟ್ಟು ಗಳಿಕೆ 100.58 ಕೋಟಿ ರೂಪಾಯಿ. ಹೃತಿಕ್ ರೋಶನ್ ಅವರ ಅದ್ಭುತ ಅಭಿನಯ ಪ್ರೇಕ್ಷಕರನ್ನು ರಂಜಿಸಿದೆ. ಗ್ಲಾಮರ್ ರಹಿತ ಹೃತಿಕ್ ರೋಶನ್ ಅವರ ಅವತಾರ ಚಿತ್ರಪ್ರೇಮಿಗಳ ಹೃದಯ ಗೆದ್ದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)