ನಿಮ್ಮ ಅಂಕಣ
ಇವರ ಸಾವಿಗೆ ಹೊಣೆ ಯಾರು?
ಮಾನ್ಯರೇ,
ವಿದ್ಯುತ್ ಇಲಾಖೆಯವರ ನಿರ್ಲಕ್ಷದಿಂದಲೇ ಪದೇ-ಪದೇ ವಿದ್ಯುತ್ ಇಲಾಖೆಯ ಸಿಬ್ಬಂದಿಯಾದ ಲೈನ್ಮನ್ಗಳು ಕರ್ತವ್ಯ ನಿರ್ವಹಿಸುತ್ತಿರುವ ವೇಳೆಯೇ ಸಾವಿಗಿಡಾಗುತ್ತಿರುವುದು ವಿಷಾದನೀಯ. ಗ್ರಾಮೀಣ ಪ್ರದೇಶದ ಜಮೀನುಗಳಲ್ಲಷ್ಟೇ ಅಲ್ಲ, ಸಣ್ಣ ಪಟ್ಟಣದಿಂದ ಹಿಡಿದು ಬೃಹತ್ ಮಹಾನಗರಗಳ ಬಡಾವಣೆಯ ತನಕ ವಿದ್ಯುತ್ ಪರಿಕರ ದುರಸ್ತಿಗೊಳಿಸುತ್ತಿರುವ ಸಂದರ್ಭದಲ್ಲಿಯೇ ಕಚೆೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಯ ಬೇಜವಾಬ್ದಾರಿತನದಿಂದ ನಮ್ಮ ರಾಜ್ಯದಲ್ಲಿ ಹಲವಾರು ಲೈನ್ಮನ್ಗಳು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಯಾರದೋ ಬೇಜವಾಬ್ದಾರಿಯಿಂದಾಗಿ ಬೆಳಕು ಕೊಡುತ್ತಿರುವ ಲೈನ್ ಮನ್ಗಳು ಪ್ರಾಣ ಕಳೆದುಕೊಂಡು ಅವರ ಕುಟುಂಬ ಕತ್ತಲೆಗೆ ಜಾರುತ್ತಿರುವ ಇಂತಹ ಹಲವು ಪ್ರಕರಣಗಳು ನಮ್ಮ ಮುಂದೆ ನಡೆದಿವೆ. ಲೈನ್ಮನ್ಗಳ ಸಾವಿಗೆ ಮೇಲಧಿಕಾರಿಗಳ ಬಳಿ ಕಾರಣ ಕೇಳಿದರೆ ಲೈನ್ಮನ್ಗಳನ್ನೇ ಹೊಣೆಯಾಗಿಸುತ್ತಾರೆ. ಮುಂದೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂಬ ಹುಸಿ ಕಾರಣಗಳನ್ನು ಕೊಟ್ಟು ಪಾರಾಗುತ್ತಿದ್ದಾರೆ.
ಆದ್ದರಿಂದ ಸರಕಾರ ತಕ್ಷಣವೇ ಬೆಸ್ಕಾಂ, ಹೆಸ್ಕಾಂ, ಮೆಸ್ಕಾಂ, ಚೆಸ್ಕಾಂ, ಜೆಸ್ಕಾಂಗಳಲ್ಲಿ ಕರ್ತವ್ಯದಲ್ಲಿದ್ದು ಅನ್ಯಾಯವಾಗಿ ಸಾವಿಗೀಡಾದ ಲೈನ್ಮನ್ಗಳ ಪ್ರಕರಣಗಳನ್ನು ಗಂಭೀರವಾಗಿ ತೆಗೆದುಕೊಂಡು, ನಿರ್ಲಕ್ಷ ವಹಿಸುವ ಸಿಬ್ಬಂದಿಯ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವ ಮೂಲಕ ಈ ಅನ್ಯಾಯದ ಸಾವುಗಳನ್ನು ನಿಲ್ಲಿಸುವುದಲ್ಲದೆ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಲು ತುರ್ತು ಗಮನ ನೀಡಬೇಕಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ