varthabharthi


ಕ್ರೀಡೆ

ಹೈದರಾಬಾದ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ

ಸೌರಭ್ ವರ್ಮಾ ಸೆಮಿಫೈನಲ್ಗೆ

ವಾರ್ತಾ ಭಾರತಿ : 9 Aug, 2019

ಹೈದರಾಬಾದ್, ಆ.9: ಸೌರಭ್ ವರ್ಮಾ ಅವರು ಹೈದರಾಬಾದ್ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನ ಪುರುಷರ ಸಿಂಗಲ್ಸ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಸೌರಭ್ ವರ್ಮಾ ಅವರು ಅಜಯ್ ಜಯರಾಮ್ ವಿರುದ್ಧ 21-18, 21-9 ಅಂತರದಲ್ಲಿ ಜಯ ಗಳಿಸಿ ಸೆಮಿಫೈನಲ್ ತಲುಪಿದರು.

    ಸೌರಭ್ ವರ್ಮಾ ಟೂರ್ನಮೆಂಟ್‌ನ ಸಿಂಗಲ್ಸ್‌ನಲ್ಲಿ ಉಳಿದಿರುವ ಭಾರತದ ಏಕೈಕ ಆಟಗಾರ. ಪುರುಷರ ಸಿಂಗಲ್ಸ್‌ನ ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಸಿಂಗಾಪುರದ ಲೊಹ್ ಕೆಯನ್ ಯೆವ್ ಅವರು 5ನೇ ಶ್ರೇಯಾಂಕದ ಶುಭಾಂಕರ್ ದೇವ್ ವಿರುದ್ಧ 21-11, 21-16 ಅಂತರದಲ್ಲಿ ಜಯ ಗಳಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ಅಶ್ವಿನಿ ಪೊನ್ನಪ್ಪ ಮತ್ತು ಎನ್.ಸಿಕ್ಕಿ ರೆಡ್ಡಿ ಅವರು ಭಾರತದ ಜೆ ಮೇಘನಾ ಮತ್ತು ಪೂರ್ವೆಶಾ ಎಸ್. ರಾಮ್ ವಿರುದ್ದ 21-16, 21-15 ಅಂತರದಲ್ಲಿ ಜಯ ಗಳಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)