varthabharthi


ಕ್ರೀಡೆ

ಡಬ್ಲ್ಯುಟಿಎ ಟೊರಾಂಟೊ ಓಪನ್

ರೋಜರ್ಸ್ ಕಪ್: ರೋಹನ್-ಡೆನಿಸ್‌ಗೆ ಸೋಲು

ವಾರ್ತಾ ಭಾರತಿ : 11 Aug, 2019

ಮಾಂಟ್ರಿಯಲ್, ಆ.11: ಭಾರತದ ರೋಹನ್ ಬೋಪಣ್ಣ ಹಾಗೂ ಅವರ ಜೊತೆಗಾರ ಡೆನಿಸ್ ಶಪೊವಾಲೊವ್ ಎಟಿಪಿ ಮಾಂಟ್ರಿಯಲ್ ಮಾಸ್ಟರ್ಸ್ ಟೂರ್ನಿಯಿಂದ ಹೊರಗುಳಿದಿದ್ದಾರೆ.

ಶ್ರೇಯಾಂಕರಹಿತ ಬೋಪಣ್ಣ ಹಾಗೂ ಶಪೊವಾಲೊವ್ ಡಚ್‌ನ ರಾಬಿನ್ ಹಾಸೆ ಹಾಗೂ ವೆಸ್ಲೆ ಕೂಲ್‌ಹಾಫ್ ವಿರುದ್ಧ ಪುರುಷರ ಡಬಲ್ಸ್‌ನ ಸೆಮಿ ಫೈನಲ್‌ನಲ್ಲಿ ಕಠಿಣ ಹೋರಾಟ ನೀಡಿದ ಹೊರತಾಗಿಯೂ 6-7(3/7), 6-7 ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಹಾಸೆ ಹಾಗೂ ಕೂಲ್‌ಹಾಫ್ ಪ್ರಶಸ್ತಿ ಸುತ್ತಿನಲ್ಲಿ ಸ್ಪೇನ್-ಅರ್ಜೆಂಟೀನ ಜೋಡಿ ಮಾರ್ಸೆಲ್ ಗ್ರಾನೊಲ್ಲರ್ಸ್ ಹಾಗೂ ಹೊರಾಸಿಯೊ ಝೆಬಲ್ಲೊಸ್‌ರನ್ನು ಎದುರಿಸಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)