varthabharthi


ಕ್ರೀಡೆ

ಪ್ರೊ ಕಬಡ್ಡಿ ಲೀಗ್‌

ಬೆಂಗಳೂರಿಗೆ ಸೋಲಿನ ರುಚಿ ಉಣಿಸಿದ ಹರ್ಯಾಣ

ವಾರ್ತಾ ಭಾರತಿ : 12 Aug, 2019

ಅಹ್ಮದಾಬಾದ್, ಆ.11: ಹರ್ಯಾಣ ಸ್ಟೀಲರ್ಸ್ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ರವಿವಾರ ನಡೆದ 36ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡಕ್ಕೆ ಸೋಲಿನ ರುಚಿ ಉಣಿಸಿದೆ.

ವಿಕಾಸ್ ಖಂಡೋಲ(12) ಹಾಗೂ ವಿಕಾಸ್ ಕಾಳೆ(6) ಹರ್ಯಾಣ ತಂಡ ಬೆಂಗಳೂರು ವಿರುದ್ಧ 33-30 ಅಂತರದಿಂದ ರೋಚಕ ಜಯ ಸಾಧಿಸಲು ನೆರವಾದರು. ಬೆಂಗಳೂರು ತಂಡದ ಪರ ಕುಮಾರ್‌ದ್ವಯರಾದ ರೋಹಿತ್(12) ಹಾಗೂ ಪವನ್(7)ಒಟ್ಟು 19 ಅಂಕ ಗಳಿಸಿದರು.

ಬೆಂಗಳೂರು ಟೂರ್ನಿಯಲ್ಲಿ ಆಡಿದ ತನ್ನ 7ನೇ ಪಂದ್ಯದಲ್ಲಿ 2ನೇ ಸೋಲು ಕಂಡಿದೆ. ಒಟ್ಟು 21 ಅಂಕ ಗಳಿಸಿರುವ ಬೆಂಗಳೂರು ಅಂಕಪಟ್ಟಿಯಲ್ಲಿ 2ನೇ ಸ್ಥಾನ ಕಾಯ್ದುಕೊಂಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)