varthabharthi


ರಾಷ್ಟ್ರೀಯ

ತಬ್ರೇಝ್ ಅನ್ಸಾರಿ ಗುಂಪು ಹತ್ಯೆ: 11 ಆರೋಪಿಗಳ ವಿರುದ್ಧ ಮರುಪ್ರಕರಣ ದಾಖಲು

ವಾರ್ತಾ ಭಾರತಿ : 18 Sep, 2019

ರಾಂಚಿ,ಸೆ.18: ತಬ್ರೇಝ್ ಅನ್ಸಾರಿಯ ಗುಂಪಿನಿಂದ ಥಳಿಸಿ ಹತ್ಯೆಯ 11 ಆರೋಪಿಗಳ ವಿರುದ್ಧ ಜಾರ್ಖಂಡ್ ಪೊಲೀಸರು ಬುಧವಾರ ಮರುಪ್ರಕರಣ ದಾಖಲಿಸಿದ್ದಾರೆ. ಅನ್ಸಾರಿ ಹತ್ಯೆಯ ಕುರಿತ ಹೊಸ ವೈದ್ಯಕೀಯ ವರದಿ ಕೈಸೇರಿರುವ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮರಣೋತ್ತರ ಪರೀಕ್ಷೆಯ ವರದಿಯನ್ನು ಆಧರಿಸಿ ಪೊಲೀಸರು ಸೆಪ್ಟಂಬರ್ 10ರಂದು ಪ್ರಕರಣದ 11 ಆರೋಪಿಗಳ ಮೇಲೆ ದಾಖಲಿಸಲಾಗಿದ್ದ ಹತ್ಯೆ ಪ್ರಕರಣವನ್ನು ರದ್ದುಗೊಳಿಸಿ ಉದ್ದೇಶಪೂರ್ವಕವಲ್ಲದ ಕೊಲೆ ಪ್ರಕರಣವಾಗಿ ಬದಲಾಯಿಸಿದ್ದರು. ಈ ಪರೀಕ್ಷೆಯಲ್ಲಿ ಅನ್ಸಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿತ್ತು.

ತಬ್ರೇಝ್ ಅನ್ಸಾರಿಯನ್ನು ಗುಂಪೊಂದು ಥಳಿಸುವ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆದರೆ ಅದರಲ್ಲಿ ಹಲ್ಲೆಕೋರರ ಮುಖ ಸ್ಪಷ್ಟವಾಗಿ ಕಾಣಿಸುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದರು. ಘಟನೆಗೆ ಸಂಬಂಧಪಟ್ಟಂತೆ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)