varthabharthi


ಬೆಂಗಳೂರು

ಸೆ.29ರಂದು ಬೆಂಗಳೂರಿನಲ್ಲಿ ‘ಆಟಮ್ ಮ್ಯೂಸ್’ ಕಾರ್ಯಕ್ರಮ

ವಾರ್ತಾ ಭಾರತಿ : 19 Sep, 2019

ಬೆಂಗಳೂರು, ಸೆ.19: ದಕ್ಷಿಣ ಭಾರತದ ಅತ್ಯಂತ ಹಳೆಯ, ಪ್ರತಿಷ್ಠಿತ ರಾಷ್ಟ್ರಮಟ್ಟದ ಸಾಂಸ್ಕೃತಿಕ ಮತ್ತು ಕ್ರೀಡಾಕೂಟ ‘ಆಟಮ್ ಮ್ಯೂಸ್’ ಕಾರ್ಯಕ್ರಮ ಸೆ.28ರಂದು ಬೆಂಗಳೂರಿನ ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದ ಆದಾಯವನ್ನು ಲ್ಯುಕೇಮಿಯಾ ರೋಗಿಗಳ ಚಿಕಿತ್ಸೆ, ಸುಟ್ಟ ಗಾಯಗಳು ಮತ್ತು ಆ್ಯಸಿಡ್ ದಾಳಿಯ ಸಂತ್ರರು ಮತ್ತು ಮಕ್ಕಳ ಮೂತ್ರಪಿಂಡ ಕಸಿ ಚಿಕಿತ್ಸೆಗೆ ನೀಡಲಾಗುತ್ತದೆ.

ಸೆ.29ರಂದು ಸಂಜೆ 6ಕ್ಕೆ ನಡೆಯುವ ‘ಆಟಮ್ ಮ್ಯೂಸ್’ ಕಾರ್ಯಕ್ರಮದಲ್ಲಿ ಟ್ರೆಂಡಿಂಗ್ ಬಾಲಿವುಡ್ ಗಾಯಕ ದರ್ಶನ್ ರಾವ್ ಪ್ರದರ್ಶನ ನೀಡಲಿದ್ದಾರೆ. ರಾಕ್ ಬ್ಯಾಂಡ್ ಅನಾನಸ್ ಎಕ್ಸ್‌ಪ್ರೆಸ್ ಮತ್ತು ಡಿಜೆ ವ್ಯಾನ್ ಮೂನ್ ಸಾಥ್ ನೀಡಲಿದ್ದಾರೆ. ಹೆಸರಾಂತ ಹಾಸ್ಯನಟ ಸೊರಬ್ ಪಂತ್ ಅವರ ಪ್ರದರ್ಶನ ಕೂಡಾ ಇರಲಿದೆ.

ಕಾರ್ಯಕ್ರಮದ ಟಿಕೆಟನ್ನು ‘ಬುಕ್ ಮೈ ಶೋ’ನಲ್ಲಿ ಕಾಯ್ದಿರಿಸಬಹುದು ಅಥವಾ ಮೊ.ಸಂ. 9035468600 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)