varthabharthi


ಅಂತಾರಾಷ್ಟ್ರೀಯ

ಕಾನ್ಸಾಸ್: ಶೂಟೌಟ್‌ಗೆ ಕನಿಷ್ಠ 4 ಬಲಿ

ವಾರ್ತಾ ಭಾರತಿ : 6 Oct, 2019

ಕಾನ್ಸಾಸ್ ಸಿಟಿ, ಅ.6: ಅಮೆರಿಕದ ಕಾನ್ಸಾಸ್ ಸಿಟಿಯ ಬಾರ್ ಒಂದರಲ್ಲಿ ರವಿವಾರ ನಸುಕಿನಲ್ಲಿ ನಡೆದ ಶೂಟೌಟ್‌ನಲ್ಲಿ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, ಇತರ 5ಮಂದಿ ಗಾಯಗೊಂಡಿದ್ದಾರೆ.

ತೆಕಿಲಾ ಕೆಸಿ ಬಾರ್ ಎಂಬ ಹೆಸರಿನ ಬಾರ್‌ಗೆ ರವಿವಾರ ಮುಂಜಾನೆ 1:30ರ ವೇಳೆಗೆ ಬಂದೂಕುಧಾರಿಯೊಬ್ಬ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ್ದಾನೆಂದು ಕೆಎಸ್‌ಎಚ್‌ಬಿ- ಟಿವಿ ವರದಿ ಮಾಡಿದೆ.

ಶೂಟೌಟ್‌ನಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಇತರ 5 ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆಯೆಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ. ಇಬ್ಬರು ಶೂಟರ್‌ಗಳು ಬಾರ್ ಪ್ರವೇಶಿಸಿದ್ದಾರೆಂದು ತಾವು ಭಾವಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಆದರೆ ಇದೊಂದು ಜನಾಂಗೀಯ ದ್ವೇಷದ ಕೃತ್ಯವಾಗಿರುವ ಸಾಧ್ಯತೆಯನ್ನು ಪೊಲೀಸರು ತಳ್ಳಿಹಾಕಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)