varthabharthi


ರಾಷ್ಟ್ರೀಯ

ಶಸ್ತ್ರಪೂಜೆಯ ನೆಪದಲ್ಲಿ ಗುಂಡು ಹಾರಿಸಿದ 150 ಸಂಘಪರಿವಾರ ಕಾರ್ಯಕರ್ತರ ವಿರುದ್ಧ ಎಫ್‍ಐಆರ್

ವಾರ್ತಾ ಭಾರತಿ : 10 Oct, 2019

ಗ್ವಾಲಿಯರ್, ಅ.10:  ಮಂಗಳವಾರ ದಸರಾ ಆಚರಣೆಯ ಸಂದರ್ಭ ಶಸ್ತ್ರ ಪೂಜೆಯ ನೆಪದಲ್ಲಿ ಇಲ್ಲಿನ ಶಾಲೆಯೊಂದರತ್ತ ಗುಂಡು ಹಾರಿಸಿದ್ದಾರೆನ್ನಲಾದ ವಿಶ್ವ ಹಿಂದು ಪರಿಷದ್ ಹಾಗೂ ಬಜರಂಗದಳದ ಸುಮಾರು 150 ಕಾರ್ಯಕರ್ತರ ವಿರುದ್ಧ ಪೊಲೀಸರು  ಎಫ್‍ಐಆರ್ ದಾಖಲಿಸಿದ್ದಾರೆ.

ಆ ದಿನ ಶಸ್ತ್ರ ಪೂಜೆಯ ಅಂಗವಾಗಿ ಮೆರವಣಿಗೆ ನಡೆಸಿದ ಕಾರ್ಯಕರ್ತರು ಮೆರವಣಿಗೆ ಶಾಲೆಯಲ್ಲಿ ಕೊನೆಗೊಳ್ಳುತ್ತಿದ್ದಂತೆಯೇ ಪೊಲೀಸರ ಎಚ್ಚರಿಕೆಯ ಹೊರತಾಗಿಯೂ ತಮ್ಮಲ್ಲಿದ್ದ ಬಂದೂಕಿನಿಂದ ಗುಂಡು ಹಾರಿಸಲು  ಆರಂಭಿಸಿದ್ದರು.  ಅವರು ಸುಮಾರು ಏಳು ಸುತ್ತು ಗುಂಡು ಹಾರಿಸಿದ್ದು ಈ ಕುರಿತಾದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)