varthabharthi


ವಿಶೇಷ-ವರದಿಗಳು

ಈ ಅತ್ಯುನ್ನತ ಪುರಸ್ಕಾರಕ್ಕೆ ಪಾತ್ರರಾದ ಇತರ ಪತಿ - ಪತ್ನಿ ಜೋಡಿಗಳ ವಿವರ ಇಲ್ಲಿದೆ

ಅಭಿಜಿತ್ ಬ್ಯಾನರ್ಜಿ - ಎಸ್ತರ್ ದಂಪತಿಗೆ ಅರ್ಥಶಾಸ್ತ್ರ ನೊಬೆಲ್

ವಾರ್ತಾ ಭಾರತಿ : 14 Oct, 2019

Photo: BBC

ಈ ಬಾರಿಯ ಅರ್ಥಶಾಸ್ತ್ರ ನೊಬೆಲ್ ಪುರಸ್ಕಾರವನ್ನು ಹಂಚಿಕೊಂಡಿರುವ ಮೂವರಲ್ಲಿ ಭಾರತೀಯ ಮೂಲದ ಅಮೇರಿಕನ್ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಹಾಗು ಅವರ ಸಹ ಸಂಶೋಧಕಿ ಎಸ್ತರ್ ಡಫ್ಲೊ ಅವರು ಪತಿ ಪತ್ನಿ ಎಂಬುದು ವಿಶೇಷ. ಇವರೊಂದಿಗೆ ನೊಬೆಲ್ ಹಂಚಿಕೊಂಡ ಇವರ ಇನ್ನೋರ್ವ ಸಹಸಂಶೋಧಕ ಮೈಕಲ್ ಕ್ರೆಮರ್.  

ಅಭಿಜಿತ್ ಬ್ಯಾನರ್ಜಿ ಅವರು ಅಮೇರಿಕಾದ ಪ್ರತಿಷ್ಠಿತ ಮ್ಯಾಸಚುಸೆಟ್ಸ್ ಇನ್ಸ್ ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಅರ್ಥಶಾಸ್ತ್ರದ ಅಂತರ್ ರಾಷ್ಟ್ರೀಯ ಪ್ರಾಧ್ಯಾಪಕ ಹುದ್ದೆಯಲ್ಲಿದ್ದಾರೆ. ಅಲ್ಲಿದ್ದಾಗ ಕೊಲ್ಕತ್ತದವರೇ ಆದ ಎಂ ಐ ಟಿ ಯಲ್ಲಿ ಸಾಹಿತ್ಯದ ಅಧ್ಯಾಪಕಿಯಾಗಿದ್ದ ಡಾ. ಅರುಂಧತಿ ಟುಲಿ ಬ್ಯಾನರ್ಜಿ ಅವರನ್ನು ವಿವಾಹವಾಗಿದ್ದರು. ಆದರೆ ಬಳಿಕ ಅವರಿಬ್ಬರು ವಿಚ್ಛೇದನ ಪಡೆದುಕೊಂಡರು. 

ಆ ಬಳಿಕ ಅಭಿಜಿತ್ ಅವರು ಎಂ ಐ ಟಿ ಯಲ್ಲೇ ಪ್ರಾಧ್ಯಾಪಕಿಯಾಗಿದ್ದ, ತನ್ನ ಸಹಸಂಶೋಧಕಿ ಎಸ್ತರ್ ಡಫ್ಲೊ ಅವರನ್ನು ವಿವಾಹವಾದರು. ಅದಕ್ಕೂ ಮೊದಲು ಇವರಿಬ್ಬರು ಒಟ್ಟಿಗೆ ಬಾಳುತ್ತಿದ್ದು ಇವರಿಬ್ಬರಿಗೆ ಒಂದು ಮಗುವಿದೆ. ಎಸ್ತರ್ ಅವರ ಪಿ ಎಚ್ ಡಿ ಪ್ರಬಂಧಕ್ಕೆ ಅಭಿಜಿತ್ ಅವರು ಸಹ ಸೂಪರವೈಸರ್ ಆಗಿಯೂ ಮಾರ್ಗದರ್ಶನ ನೀಡಿದ್ದರು. ಬಳಿಕ ಎಂ ಐ ಟಿಯಲ್ಲಿ ಅಭಿಜಿತ್ ಬ್ಯಾನರ್ಜಿ ಅವರು ಸ್ಥಾಪಿಸಿದ ಅಬ್ದುಲ್ ಲತೀಫ್ ಜಮೀಲ್ ಬಡತನ ನಿರ್ಮೂಲನ ಸಂಶೋಧನಾ ಕೇಂದ್ರದಲ್ಲಿ ಇಬ್ಬರು ಜೊತೆಯಾಗಿ ಸಂಶೋಧನೆಯಲ್ಲಿ ತೊಡಗಿದ್ದರು. 

ಈಗ ಇಬ್ಬರೂ ನೊಬೆಲ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. 

ಈ ಹಿಂದೆ ನೊಬೆಲ್ ಗೆ ಪಾತ್ರರಾದ ದಂಪತಿಗಳ ಪಟ್ಟಿ ಇಲ್ಲಿದೆ : 

1947 ರಲ್ಲಿ ವೈದ್ಯಕೀಯ ನೊಬೆಲ್ - ಗರ್ಟಿ ಕೋರಿ ಹಾಗು ಕಾರ್ಲ್ ಕೋರಿ ದಂಪತಿ 

Photo: U.S National Library of Medicine

1903 ರಲ್ಲಿ ಭೌತಶಾಸ್ತ್ರ ನೊಬೆಲ್ - ಪಿಯರಿ ಕ್ಯೂರಿ ಹಾಗು ಮೇರಿ ಕ್ಯೂರಿ ದಂಪತಿ ಹಾಗು ಹೆನ್ರಿ ಬಕೆರೆಲ್. ಈ ಪೈಕಿ ಮೇರಿ ಕ್ಯೂರಿ ಅವರಿಗೆ 1911 ರಲ್ಲಿ ರಾಸಾಯನಶಾಸ್ತ್ರದಲ್ಲೂ ನೊಬೆಲ್ ಗೌರವ ಸಂದಿದೆ. 

Photo: Wikimedia Commons

1935 ರಲ್ಲಿ ರಸಾಯನಶಾಸ್ತ್ರ ನೊಬೆಲ್ - ಫ್ರೆಡ್ರಿಕ್ ಜೂಲಿಯೆಟ್ ಹಾಗು ಐರಿನ್ ಜೂಲಿಯೆಟ್ ಕ್ಯೂರಿ ದಂಪತಿ . ಇದರಲ್ಲಿ ಐರಿನ್ ಎರಡು ಬಾರಿ ನೊಬೆಲ್ ಗೆ ಪಾತ್ರರಾದ ಮೇರಿ ಕ್ಯೂರಿಯ ಪುತ್ರಿ .

Copyright © Association Curie Joliot-Curie

1982 ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ - ಮಿರ್ಡಾಲ್ ಆಳ್ವ , 1974 ರಲ್ಲಿ ಅರ್ಥಶಾಸ್ತ್ರ ನೊಬೆಲ್ - ಅವರ ಪತಿ ಗುನ್ನಾರ್ ಮಿರ್ಡಾಲ್ ಅವರಿಗೆ. 

Photo: KW Gullers / Nordiska museet

2014 ರಲ್ಲಿ ವೈದ್ಯಕೀಯ ನೊಬೆಲ್ - ಮೇ ಬ್ರಿಟ್ ಹಾಗು ಎಡ್ವರ್ಡ್ ಮೋಸರ್ ದಂಪತಿ .  

Photo: Geir Mogen/NTNU

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)