varthabharthi


ನಿಮ್ಮ ಅಂಕಣ

ಧರ್ಮದ ಹೆಸರಿನಲ್ಲಿ...

ವಾರ್ತಾ ಭಾರತಿ : 15 Oct, 2019
-ರಿಯಾಝ್ ಅಹ್ಮದ್, ರೋಣ

ಮಾನ್ಯರೇ,

ಕೆಲವು ರಾಜಕಾರಣಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲಿಕ್ಕಾಗಿ ಧರ್ಮಗಳ ಸಹಾಯವನ್ನು ಪಡೆದುಕೊಳ್ಳುತ್ತಿರುವುದು ಮತ್ತು ಅದಕ್ಕೆ ಜನಸಾಮಾನ್ಯರು ಬಲಿಯಾಗುತ್ತಿರುವುದು ನೋಡಿದರೆ ಭವಿಷ್ಯದಲ್ಲಿ ಎಂತಹ ದೇಶವನ್ನು ನಾವು ನಿರ್ಮಿಸಲು ಹೊರಟಿದ್ದೇವೆ ಎಂಬ ಕುರಿತು ಆತಂಕ ಹುಟ್ಟಿಕೊಳ್ಳವುದು ಸಹಜ. ನಿಜವಾಗಿ ಹೇಳಬೇಕಾದರೆ ಇಲ್ಲಿ ಧರ್ಮಗಳು ಅಲ್ಲ ಜನಸಾಮಾನ್ಯರಾದ ನಾವು ಅಪಾಯದಲ್ಲಿದ್ದೇವೆ. ಕುಸಿಯುತ್ತಿರುವ ಆರ್ಥಿಕತೆ, ರಾಜಕಾರಣಿಗಳ ಆಸ್ತಿಯಲ್ಲಿ ವಿಪರೀತ ಏರಿಕೆ, ಬೆಳೆಯುತ್ತಿರುವ ನಿರುದ್ಯೋಗದ ಸಮಸ್ಯೆ, ಕೈಗಾರಿಕಾ ಅವನತಿ, ಕೃಷಿ ನಾಶದಿಂದಾಗಿ ನಿತ್ಯ ರೈತರ ಆತ್ಮಹತ್ಯೆ, ಸ್ತ್ರೀ ದೌರ್ಜನ್ಯ, ಹೆಣ್ಣು ಭ್ರೂಣ ಹತ್ಯೆ ಇತ್ಯಾದಿ ಹಲವಾರು ಸಮಸ್ಯೆಗಳು ಇಲ್ಲಿ ತಾಂಡವವಾಡುತ್ತಿದೆ. ಈ ಸಮಸ್ಯೆಗಳನ್ನೆಲ್ಲ ಮರೆಮಾಚಲಿಕ್ಕಾಗಿ ನಮ್ಮನ್ನಾಳುವವರು ಇಂದು ‘‘ಧರ್ಮ ಅಪಾಯದಲ್ಲಿದೆ’’ ಎಂಬ ಭಾವನಾತ್ಮಕ ರಾಜಕಾರಣ ಮಾಡುತ್ತ ಜನರನ್ನು ಮರುಳಾಗಿಸುತ್ತಿದ್ದಾರೆೆ. ದೇಶದ ಪ್ರಜೆಗಳಿಗೆ ತಮ್ಮ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ನಮ್ಮನ್ನಾಳುವವರು ಹೆಣೆದ ತಂತ್ರವಿದು. ನಾವು ಇದಕ್ಕೆ ಬಲಿಯಾಗದಿರೋಣ.

-ರಿಯಾಝ್ ಅಹ್ಮದ್, ರೋಣ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)