varthabharthi


ಸಿನಿಮಾ

ನಟಿಯ ಬಾಕಿ ಶುಲ್ಕವನ್ನು 40 ವರ್ಷಗಳ ಬಳಿಕ ಪಾವತಿಸಿದ ನಿರ್ಮಾಪಕ !

ವಾರ್ತಾ ಭಾರತಿ : 17 Oct, 2019

Photo: english.manoramaonline.com

ಕೊಚ್ಚಿ, ಅ.17: ಮಲಯಾಳಂ ಚಿತ್ರರಂಗದ ಹಿರಿಯ ನಿರ್ಮಾಪಕ ವಿವಿ ಆಂಟನಿ ಎರ್ನಾಕುಳಂ ಟೌನ್ ಹಾಲ್ ನಲ್ಲಿ ಹಿರಿಯ ನಟಿ ಶಾರದಾ ಅವರಿಗಾಗಿ ಕಾಯುತ್ತಾ ಕುಳಿತಿದ್ದರು. ಈ ಭೇಟಿಗಾಗಿ ಆ್ಯಂಟನಿ ಸುಮಾರು 40 ವರ್ಷಗಳಿಂದ ಕಾಯುತ್ತಿದ್ದರು.

1979ರಲ್ಲಿ ಬಿಡುಗಡೆಯಾದ ಆ್ಯಂಟನಿ ನಿರ್ಮಾಪಕರಾಗಿದ್ದ 'ಪುಷ್ಯರಾಗಂ' ಚಿತ್ರದಲ್ಲಿ ಶಾರದಾ ನಟಿಸಿದ್ದರು. ಕೆಲ ಹಣಕಾಸಿನ ಸಮಸ್ಯೆಗಳಿಂದಾಗಿ ಅವರು ಆ ಕಾಲದಲ್ಲಿ ನಟಿಗೆ ಸಂಪೂರ್ಣ ಹಣ ಪಾವತಿಸಲು ಸಾಧ್ಯವಾಗಿರಲಿಲ್ಲ. ಆಲುವಾ ನಿವಾಸಿಯಾಗಿರುವ ಆ್ಯಂಟನಿ ಇನ್ನೂ 2 ಚಿತ್ರಗಳಲ್ಲಿ ತನ್ನ ಅದೃಷ್ಟ ಪರೀಕ್ಷಿಸಿದರಾದರೂ ಅವರ ಪ್ರಯತ್ನಗಳು ಕೈಗೂಡಲಿಲ್ಲ. ಎರಡೂ ಸಿನೆಮಾಗಳು ಹಿಟ್ ಆಗಲಿಲ್ಲ.

ಇದೀಗ ಆ್ಯಂಟನಿಯವರ ಮಕ್ಕಳು ಉತ್ತಮ ಸ್ಥಿತಿಯಲ್ಲಿದ್ದು, ಅವರು ಎಲ್ಲಾ ಸಾಲಗಳನ್ನು ಪಾವತಿ ಮಾಡಿದ್ದಾರೆ. ಆದರೆ ಶಾರದಾರಿಗೆ ಬಾಕಿಯಿರಿಸಿದ್ದ ಮೊತ್ತವನ್ನು ಆ್ಯಂಟನಿ ಇನ್ನೂ ಮರೆತಿರಲಿಲ್ಲ. ನಗರದ ಟೌನ್ ಹಾಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾರದಾ ಭಾಗವಹಿಸುತ್ತಾರೆ ಎನ್ನುವುದು ಆ್ಯಂಟನಿಯವರಿಗೆ ಹೇಗೋ ತಿಳಿಯಿತು. ಹಣವಿದ್ದ ಕವರ್ ಹಿಡಿದುಕೊಂಡು ಟೌನ್ ಹಾಲ್ ನೊಳಕ್ಕೆ ಆ್ಯಂಟನಿ ಪ್ರವೇಶಿಸಿದರು. ನಿಜವಾಗಿಯೂ ಅವರು ನಟಿಗೆ ಎಷ್ಟು ಹಣ ನೀಡಬೇಕಿತ್ತೋ ಅದಕ್ಕಿಂತಲೂ ಹೆಚ್ಚು ಹಣವನ್ನು ನೀಡಿದ್ದರು.

ತಾನು ಅವರ ಬಳಿ ಹೋದಾಗ ಹಣ ಸ್ವೀಕರಿಸಲು ಹಿಂಜರಿದರು. ಆದರೆ ನಂತರ ಅವರು ತನ್ನನ್ನು ಗುರುತಿಸಿದರು ಮತ್ತು ಪ್ರೀತಿಯಿಂದ ಮಾತನಾಡಿದರು ಎಂದು ಆ್ಯಂಟನಿ ಹೇಳಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)