varthabharthi


ಗಲ್ಫ್ ಸುದ್ದಿ

ಕೆಸಿಎಫ್ ದುಬೈ ನಾರ್ತ್ ಝೋನ್ : ಸ್ನೇಹ ಸಮ್ಮಿಲನ, ಮೀಲಾದ್ ಪ್ರಚಾರ ಸಂಗಮ

ವಾರ್ತಾ ಭಾರತಿ : 20 Oct, 2019

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ದುಬೈ ನೋರ್ತ್ ಝೋನ್ ವತಿಯಿಂದ ತನ್ನ 25 ಶಾಖೆಗಳ ರಚನೆ ಪೂರ್ಣಗೊಂಡ ಪ್ರಯುಕ್ತ ಅತ್ತಬ್'ಶೀರ್ ಸ್ನೇಹ ಸಮ್ಮಿಲನ ಮತ್ತು ಮೀಲಾದ್ ಪ್ರಚಾರ ಸಂಗಮ ದುಬೈಯ ಅಬ್ರದಲ್ಲಿರುವ ಬೋಟ್ ಹೌಸ್ ನಲ್ಲಿ  ಝೋನ್ ಅಧ್ಯಕ್ಷ ಇಸ್ಮಾಯಿಲ್ ಮದನಿ ನಗರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.

ಕೆ.ಸಿ.ಎಫ್ ಅಂತರಾಷ್ಟ್ರೀಯ ಸಮಿತಿಯ ಫೈನಾನ್ಸಿಯಲ್ ಕಂಟ್ರೋಲರ್ ಅಬ್ದುಲ್ ಹಮೀದ್ ಸಅದಿ ಈಶ್ವರ ಮಂಗಳ ಕಾರ್ಯಕ್ರಮ ಉದ್ಘಾಟಿಸಿದರು, ಫಝಲ್ ತಂಙಳ್ ದುವಾ ಮತ್ತು ಆರ್ಶಿವಚನ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್ಎಸ್ಎಫ್ ಕರ್ನಾಟಕ  ರಾಜ್ಯ ಉಪಾಧ್ಯಕ್ಷ ಹಾಗೂ ಅಲ್ ಖಾದಿಸ್ ಎಜುಕೇಶನಲ್ ಆಕಾಡೆಮಿ ಇದರ ಪ್ರಾಂಶುಪಾಲ ಹಾಫಿಝ್ ಸುಫಿಯಾನ್ ಸಖಾಫಿ ಮಾತನಾಡಿದರು.

ಅತಿಥಿಗಳಾಗಿ ಭಾಗವಹಿಸಿದ್ದ ಕೆಸಿಎಫ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಅಬ್ದುಲ್ ಜಲೀಲ್ ನಿಝಾಮಿ, ಪ್ರಧಾನ ಕಾರ್ಯದರ್ಶಿ ಮೂಸಾ ಹಾಜಿ ಬಸರ, ಕೋಶಾಧಿಕಾರಿ ಇಬ್ರಾಹಿಂ ಹಾಜಿ ಬ್ರೈಟ್, ಸಂಘಟನಾ ಅಧ್ಯಕ್ಷ ಕಾಜೂರ್ ಇಕ್ಬಾಲ್, ರಾಜ್ಯ ಎಸ್ಸೆಸ್ಸೆಫ್ ಕಾರ್ಯದರ್ಶಿ ಮುಸ್ತಫಾ ನಈಮಿ ಮೊಂಟುಗೊಳಿ, ಅಶ್ರಫ್ ಹಾಜಿ ಅಡ್ಯಾರ್, ಅಬ್ದುಲ್ಲಾ ಉಸ್ತಾದ್ ಶುಭ ಹಾರೈಸಿ ಮಾತನಾಡಿ, 25 ಶಾಖೆಗಳು ಇನ್ನಷ್ಟು ಕ್ರಿಯಾಶೀಲವಾಗಿ ಬೆಳೆದು ಸಮಾಜಕ್ಕೆ ಮಹತ್ವದ ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.

ಮೀಲಾದ್ ಸ್ವಾಗತ ಸಮಿತಿ ಚೇರ್ಮನ್ ಇಬ್ರಾಹಿಂ ಮದನಿ ಸಾಮಣಿಗೆ ನೇತ್ರತ್ವದಲ್ಲಿ ಮೀಲಾದ್ ಸಮಾವೇಶದ ಪೋಸ್ಟರ್ ಬಿಡುಗಡೆ ಈ ಸಂದರ್ಭ ನಡೆಯಿತು.  ಕೆಸಿಎಫ್ ದುಬೈ ನಾರ್ತ್ ಝೋನ್ ಅಧೀನದ ನಾಲ್ಕು ಸೆಕ್ಟರ್ ಗಳ ವ್ಯಾಪ್ತಿಯಲ್ಲಿ ಬರುವ 25 ಶಾಖೆಗಳ ಪದಾಧಿಕಾರಿಗಳು ಮತ್ತು ಇತರ ಪ್ರಮುಖ ನಾಯಕರುಗಳು ಭಾಗವಹಿಸಿದ್ದರು.

ರಿಯಾಝ್ ಕೊಂಡಂಗೇರಿ ಸ್ವಾಗತಿಸಿ, ಅಬ್ದುಲ್ ಅಝೀಝ್ ಲತೀಫಿ ವಂದಿಸಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)