ನಿಮ್ಮ ಅಂಕಣ
ನೇತಾಜಿಯವರ ಸೋಲಿಗೆ ಕಾರಣರಾರು?
ಮಾನ್ಯರೇ,
ನೇತಾಜಿ ಸುಭಾಶ್ಚಂದ್ರ ಭೋಸ್ ಭಾರತದ ಸ್ವಾತಂತ್ರ್ಯಕ್ಕಾಗಿ ಹಗಲು ರಾತ್ರಿ ಹೋರಾಟ ನಡೆಸಿ ನಿಗೂಢವಾಗಿ ಸಾವನ್ನಪ್ಪಿದರು ಎಂದು ನಮಗೆ ತಿಳಿಸಲಾದ ಇತಿಹಾಸ. ಆದರೆ ಅವರ ಸಾವಿನ ಹಿಂದೆ ಮತ್ತು ಅವರು ಕಟ್ಟಿ ಬೆಳೆಸಿದ ಆಝಾದ್ ಹಿಂದ್ ಫೌಝ್ನ ನಿರ್ನಾಮದ ಹಿಂದೆ ಸಾವರ್ಕರ್ರ ವಿದ್ರೋಹ ಅಡಗಿರುವುದು ಗೌಪ್ಯವಾಗಿಡಲಾದ ನೈಜ ಇತಿಹಾಸ.
ಸಾವರ್ಕರ್, ಆಂಗ್ಲರಿಗೆ ಬರೆದು ಕೊಟ್ಟ ಕ್ಷಮಾಪಣ ಪತ್ರ ಇದು ಕೇವಲ ಕ್ಷಮೆ ಕೋರಿ ಅಲ್ಲ. ಬದಲಾಗಿ ಸ್ವಾತಂತ್ರ ಹೋರಾಟಗಾರರ ಪ್ರತಿಯೊಂದು ಚಲನ ವಲನಗಳ ಮಾಹಿತಿಗಳನ್ನು ಆಂಗ್ಲರಿಗೆ ತಂದೊಪ್ಪಿಸಲು, ಸ್ವಾತಂತ್ರ್ಯ ಸಂಗ್ರಾಮದ ವಿರುದ್ಧ ಆಂಗ್ಲರಿಗೆ ಬೇಷರತ್ತಾಗಿ ಎಲ್ಲಾ ರೀತಿಯಲ್ಲೂ ಸಹಾಯ ಮಾಡಲು ಮಾಡಿಕೊಂಡಿರುವ ಕರಾರಾಗಿರುತ್ತದೆ. ಗಾಂಧೀಜಿಯವರನ್ನು ಕೊಂದಂತಹ ಸನ್ನಿವೇಶದಲ್ಲಿ ಸಾವಿನ ಹಿಂದಿನ ರಹಸ್ಯಕ್ಕಾಗಿ ಸಾವರ್ಕರ್ರನ್ನು ಕಠಿಣ ತನಿಖೆಗೊಳಪಡಿಸಿದ್ದಲ್ಲಿ ಸತ್ಯ ಹೊರ ಬೀಳಬಹುದಿತ್ತು. ಆದರೆ ಆರೆಸ್ಸೆಸ್ನ ಕುತಂತ್ರಗಳಿಂದ ಗಾಂಧಿ ಹತ್ಯೆಯಲ್ಲಿನ ಮುಖ್ಯ ಆರೋಪ ಸ್ಥಾನದಿಂದಲೂ ಸಾವರ್ಕರ್ ಬಿಡುಗಡೆಗೊಂಡರು.
ನೇತಾಜಿಯವರ ಆಝಾದ್ ಹಿಂದ್ ಫೌಝ್ ಹೋರಾಟ ನಡೆಸುತ್ತಿದ್ದ ಉತ್ತುಂಗದ ಸೂಕ್ಷ್ಮ ಕಾಲ ಘಟ್ಟದಲ್ಲೇ, ಇದೇ ಸಾವರ್ಕರ್ ದೇಶಾದ್ಯಂತ ಬಹಿರಂಗ ಸಭೆಗಳನ್ನು ನಡೆಸಿ ಆರೆಸ್ಸೆಸ್ ಸದಸ್ಯರನ್ನು ಆಂಗ್ಲರ ಸೈನ್ಯಕ್ಕೆ ಸೇರಿಸುವಂತಹ ಬೃಹತ್ ಆಂದೋಲನ ಹಮ್ಮಿಕೊಂಡು ಈ ಮೂಲಕ ನೇತಾಜಿಯವರನ್ನೂ, ಅವರ ಫೌಝ್ನ್ನೂ ನಿರ್ನಾಮಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು.
(ಮಾಹಿತಿ: ಶಂಶುಲ್ ಇಸ್ಲಾಮ್ರ ‘ಸಾವರ್ಕರ್: ಸತ್ಯವೆಷ್ಟು ಮಿಥ್ಯವೆಷ್ಟು?’)
-ದಿದಾತ್, ಮಲ್ಪೆ
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ