ಚೀನಾ ಓಪನ್ : ಸಿಂಧು ಆರಂಭಿಕ ಸುತ್ತಿನಲ್ಲೇ ನಿರ್ಗಮನ
ಪುಝವ್ , ನ.5: ಚೀನಾ ಓಪನ್ ನ ಮಹಿಳೆಯರ ಸಿಂಗಲ್ಸ್ ನ ಆರಂಭಿಕ ಸುತ್ತಿನಲ್ಲಿ ಮಂಗಳವಾರ ವಿಶ್ವ ಚಾಂಪಿಯನ್ ಪಿ.ವಿ ಸಿಂಧು ಅವರು ತೈವಾನ್ನ ಪೈ ಯು ಪೊ ವಿರುದ್ಧ ಆಘಾತಕಾರಿ ಸೋಲು ಅನುಭವಿಸಿದರು.
ಚೀನಾ, ಕೊರಿಯಾ ಮತ್ತು ಡೆನ್ಮಾರ್ಕ್ ಓಪನ್ ನಲ್ಲಿ ಆರಂಭಿಕ ಸುತ್ತಿನಲ್ಲೇ ನಿರ್ಗಮಿಸಿದ್ದ ವಿಶ್ವದ 6 ನೇ ಕ್ರಮಾಂಕದ ಸಿಂಧು ಅವರು ತೈವಾನ್ನ ಪೈ ಯು ಪೊ ವಿರುದ್ಧ 13-21 21-18 19-21 ಅಂತರದಲ್ಲಿ ಸೋಲು ಅನುಭವಿಸಿದರು
ವಿಶ್ವದ 42ನೇ ಶ್ರೇಯಾಂಕದ ಪೈ ವಿರುದ್ಧ ಕೇವಲ 74 ನಿಮಿಷಗಳಲ್ಲಿ ಸಿಂಧು ಸೋತು ತನ್ನ ಅಭಿಯಾನವನ್ನು ಕೊನೆಗೊಳಿಸಿದರು.
30 ನೇ ಸ್ಥಾನದಲ್ಲಿರುವ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಅಶ್ವಿನಿ ಪೊನ್ನಪ್ಪ ಅವರು ಕೆನಡಾದ ಜೋಶುವಾ ಹರ್ಲ್ಬರ್ಟ್-ಯು ಮತ್ತು ಜೋಸೆಫೀನ್ ವು ಅವರನ್ನು 21-19 21-19ರಿಂದ ಸೋಲಿಸಿ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಸಕಾರಾತ್ಮಕ ಆರಂಭವನ್ನು ಗಳಿಸಿದರು.
ಪುರುಷರ ಸಿಂಗಲ್ಸ್ನಲ್ಲಿ ಎಚ್ಎಸ್ ಪ್ರಣಯ್ ಆರಂಭಿಕ ಸುತ್ತಿನಲ್ಲಿ ಡೆನ್ಮಾರ್ಕ್ನ ರಾಸ್ಮಸ್ ಜೆಮ್ಕೆ ವಿರುದ್ಧ 17-21 18-21 ಅಂತರದಲ್ಲಿ ಸೋತರು.