varthabharthi


ಅಂತಾರಾಷ್ಟ್ರೀಯ

ಚೀನಾ: 3ನೇ ಮಗು ಪಡೆದ ಹಿರಿಯ ದಂಪತಿಗೆ ದಂಡ

ವಾರ್ತಾ ಭಾರತಿ : 5 Nov, 2019

 ಬೀಜಿಂಗ್, ನ. 5: ಚೀನಾದ 67 ವರ್ಷದ ಮಾಜಿ ವೈದ್ಯೆ ಮತ್ತು ಅವರ 68 ವರ್ಷದ ವಕೀಲ ಗಂಡ ದಂಪತಿಗೆ ಕಳೆದ ವಾರ ಹೆಣ್ಣು ಮಗುವೊಂದು ಆಗಿದ್ದು ವಿಶ್ವದಾದ್ಯಂತ ಭಾರೀ ಸುದ್ದಿಯಾಗಿತ್ತು. ಸಹಜ ವಿಧಾನದಿಂದ ಮಗು ಪಡೆದ ವಿಶ್ವದ ಅತಿ ಹಿರಿಯ ದಂಪತಿ ಎಂಬ ಹೆಗ್ಗಳಿಕೆಯನ್ನು ಅವರು ಪಡೆದಿದ್ದಾರೆ.

ಅವರು ಮಗುವಿಗೆ ಟಿಯಾನ್ಸಿ (ಸ್ವರ್ಗದ ಉಡುಗೊರೆ) ಎಂದು ಹೆಸರಿಟ್ಟಿದ್ದಾರೆ. ಆದರೆ, ಈಗ ಈ ಸ್ವರ್ಗದ ಉಡುಗೊರೆಗೆ ಅವರು ದಂಡ ಕಟ್ಟಬೇಕಾಗಿದೆ.

ಇದು ದಂಪತಿಯ ಮೂರನೇ ಮಗುವಾಗಿದ್ದು, ಚೀನಾದ ಎರಡು ಮಕ್ಕಳ ನೀತಿಯನ್ನು ಉಲ್ಲಂಘಿಸಿರುವುದಕ್ಕಾಗಿ ದಂಪತಿ ಎಷ್ಟು ದಂಡ ವಿಧಿಸಬೇಕು ಎನ್ನುವುದನ್ನು ಪೂರ್ವ ಚೀನಾದ ಶಾನ್‌ಡಾಂಗ್ ಪ್ರಾಂತದ ಸ್ಥಳೀಯ ಸರಕಾರ ಲೆಕ್ಕ ಹಾಕುತ್ತಿದೆ.

ದಂಪತಿಗೆ ಈಗಾಗಲೇ 40 ವರ್ಷಕ್ಕಿಂತ ಮೇಲ್ಪಟ್ಟ ಇಬ್ಬರು ಮಕ್ಕಳಿದ್ದಾರೆ.

ಅಂತರ್‌ರಾಷ್ಟ್ರೀಯ ಮಟ್ಟದ ಪ್ರಚಾರವೂ ದಂಪತಿಗೆ ದಂಡ ವಿಧಿಸಲು ಒಂದು ಕಾರಣ ಎನ್ನಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)