varthabharthi


ಕ್ರೀಡೆ

ಏಶ್ಯನ್ ಶೂಟಿಂಗ್ ಚಾಂಪಿಯನ್‌ಶಿಪ್

ದೀಪಕ್ ಕುಮಾರ್‌ಗೆ ಕಂಚು

ವಾರ್ತಾ ಭಾರತಿ : 6 Nov, 2019

►2020 ಟೋಕಿಯೊ ಒಲಿಂಪಿಕ್‌ಗೆ ಟಿಕೆಟ್

ದೋಹಾ, ನ.5: ಇಲ್ಲಿ ನಡೆದ 14ನೇ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ 10 ಮೀಟರ್ ಏರ್ ರೈಫಲ್‌ನಲ್ಲಿ ಕಂಚು ಗೆಲ್ಲುವ ಮೂಲಕ ದೀಪಕ್ ಕುಮಾರ್ ಭಾರತದ 10ನೇ ಟೋಕಿಯೊ ಒಲಿಂಪಿಕ್ ಕೋಟಾವನ್ನು ಭರ್ತಿ ಮಾಡಿದ್ದಾರೆ. ಪಂದ್ಯಾವಳಿಯ ಮೊದಲ ದಿನದಂದು ನಡೆದ ಈವೆಂಟ್‌ನ ಫೈನಲ್‌ನಲ್ಲಿ ದೀಪಕ್ 145 ಪಾಯಿಂಟ್ ದಾಖಲಿಸಿ ಮೂರನೇ ಸ್ಥಾನದೊಂದಿಗೆ ಕಂಚು ಪಡೆದರು. ಕಳೆದ ವರ್ಷ ಗ್ವಾಡಲಾಜರಾದಲ್ಲಿ ನಡೆದ 2018ರ ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಕಂಚಿನ ಪದಕ ಗೆದ್ದ ದೀಪಕ್ ಒಟ್ಟು 626.8 ಪಾಯಿಂಟ್ ದಾಖಲಿಸಿ ಮೂರನೇ ಸ್ಥಾನ ಗಳಿಸಿ ಫೈನಲ್ ಪ್ರವೇಶಿಸಿದ್ದರು. ಒಟ್ಟು ಎಂಟು ಮಂದಿಯ ಫೈನಲ್‌ಗೆ ಅರ್ಹತೆ ಪಡೆದಿದ್ದರು. ಭಾರತವು ಈಗಾಗಲೇ ಟೋಕಿಯೊ ಒಲಿಂಪಿಕ್ ಶೂಟಿಂಗ್‌ನ ಒಂಬತ್ತು ಕೋಟಾಗಳನ್ನು ರೈಫಲ್ ಮತ್ತು ಪಿಸ್ತೂಲ್‌ನಲ್ಲಿ ಪಡೆದುಕೊಂಡಿದೆ . ಏಶ್ಯದಲ್ಲಿ ಚೀನಾ 25 ಕೋಟಾಗಳು 12 ಆತಿಥೇಯ ರಾಷ್ಟ್ರ ಜಪಾನ್ 12 ಕೋಟಾ ಪಡೆದಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ ಮೂವರು ಭಾರತೀಯ ಶೂಟರ್‌ಗಳಲ್ಲಿ ಅತ್ಯಂತ ಅನುಭವಿ ದೀಪಕ್ ಒಲಿಂಪಿಕ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಎಪ್ರಿಲ್‌ನಲ್ಲಿ ದಿವ್ಯಾನ್ಶ್ ಸಿಂಗ್ ಪನ್ವಾರ್ ನಂತರ ಒಲಿಂಪಿಕ್ ಕೋಟಾ ಗಳಿಸಿದ ಎರಡನೇ ಭಾರತೀಯ ಶೂಟರ್ ದೀಪಕ್ ಕುಮಾರ್.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)