varthabharthi


ಕ್ರೀಡೆ

ಚೀನಾ ಓಪನ್: ಮೊದಲ ಸುತ್ತಿನಲ್ಲೇ ಸೈನಾ ಹೊರಕ್ಕೆ, ಕಶ್ಯಪ್ ಎರಡನೇ ಸುತ್ತಿಗೆ

ವಾರ್ತಾ ಭಾರತಿ : 6 Nov, 2019

ಫುಝೊ, ನ.6: ಭಾರತದ  ಹಿರಿಯ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಸ್ಥಳೀಯ ಆಟಗಾರ್ತಿ  ಕೈ ಯಾನ್ ಯಾನ್  ವಿರುದ್ಧ ಚೀನಾ ಓಪನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ನ ಮೊದಲ ಸುತ್ತಿನ ಪಂದ್ಯದಲ್ಲಿ  ಸೋತು ಹೊರ ನಡೆದಿದ್ದಾರೆ.  

 ಬುಧವಾರ ನಡೆದ  ಕೇವಲ 24 ನಿಮಿಷಗಳ ಕಾಲ ನಡೆದ ಮಹಿಳಾ ಸಿಂಗಲ್ಸ್ ನ ಮೊದಲ ಸುತ್ತಿನ ಹಣಾಹಣಿಯಲ್ಲಿ ವಿಶ್ವದ ನಂ.9 ಆಟಗಾರ್ತಿ ಸೈನಾ 9-21 12-21 ಅಂತರದಿಂದ  ಸೋತರು.

ಆದಾಗ್ಯೂ, ಪುರುಷರ ಸಿಂಗಲ್ಸ್‌ನಲ್ಲಿ ಸೈನಾ ಅವರ ಪತಿ ಮತ್ತು ಕೋಚ್  ಪಾರುಪಲ್ಲಿ ಕಶ್ಯಪ್ ಅವರು  ಥಾಯ್ಲೆಂಡ್ ನ ಸಿತಿಕೋಮ್  ಥಾಮಸಿನ್  ವಿರುದ್ಧ ನೇರ ಪಂದ್ಯದ ಗೆಲುವು ದಾಖಲಿಸಿದ್ದಾರೆ.

ಕಶ್ಯಪ್ ತನ್ನ  ಎದುರಾಳಿಯನ್ನು 43 ನಿಮಿಷಗಳಲ್ಲಿ 21-14 21-3 ಅಂತರರಿಂದ ಮಣಿಸಿದರು. ಅವರು ಎರಡನೇ ಸುತ್ತಿನಲ್ಲಿ ಡೆನ್ಮಾರ್ಕ್‌ನ ಏಳನೇ ಶ್ರೇಯಾಂಕದ ವಿಕ್ಟರ್ ಆಕ್ಸೆಲ್ಸನ್‌ರನ್ನು ಎದುರಿಸಲಿದ್ದಾರೆ.

ಮಿಶ್ರ ಡಬಲ್ಸ್ ಜೋಡಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಸಿಕ್ಕಿ ರೆಡ್ಡಿ  ಅವರು  ಸುತ್ತಿನ ನಿರ್ಗಮಿಸಿದರು. ಇವರಿಬ್ಬರು 14-21 14-21 ಅಂತರದಲ್ಲಿ ಚೀನಾ  ತೈಪೆಯ ವಾಂಗ್ ಚಿ-ಲಿನ್ ಮತ್ತು ಚೆಂಗ್ ಚಿ ಯಾ  ಅವರಿಗೆ ಶರಣಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)