varthabharthi


ಅಂತಾರಾಷ್ಟ್ರೀಯ

ಟ್ರಂಪ್ ಗೆ ಮಧ್ಯದ ಬೆರಳು ತೋರಿಸಿ ಕೆಲಸ ಕಳೆದುಕೊಂಡಿದ್ದ ಸೈಕಲ್ ಸವಾರೆ ಚುನಾವಣೆಯಲ್ಲಿ ವಿಜಯಿ

ವಾರ್ತಾ ಭಾರತಿ : 6 Nov, 2019

Photo: www.stuff.co.nz

ವಾಷಿಂಗ್ಟನ್, ನ.6: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಾಹನ ಹಾಗೂ ಬೆಂಗಾವಲು ಪಡೆ ಸಾಗುತ್ತಿದ್ದಾಗ ಮಧ್ಯದ ಬೆರಳು ತೋರಿಸಿ ತನ್ನ ಉದ್ಯೋಗ ಕಳೆದುಕೊಂಡಿದ್ದ ಸೈಕಲ್ ಸವಾರೆ ಜೂಲಿ ಬ್ರಿಸ್ಕ್ಮ್ಯಾನ್ ಸ್ಥಳೀಯಾಡಳಿತ ಸಂಸ್ಥೆ ಚುನಾವಣೆಯಲ್ಲಿ ಗೆದ್ದು ವಿಜಯದ ನಗೆ ಬೀರಿದ್ದಾರೆ.

ಆಕೆಯ ಒಂದು ಬೆರಳಿನ ಸೆಲ್ಯೂಟ್ ದೃಶ್ಯವನ್ನು ಎಎಫ್‌ಪಿ ಛಾಯಾಗ್ರಾಹಕ 2017ರಲ್ಲಿ ಕ್ಲಿಕ್ಕಿಸಿದ ನಂತರ ಅದು ವೈರಲ್ ಆಗಿತ್ತು. ಎರಡು ಹದಿಹರೆಯದ ಮಕ್ಕಳ ತಾಯಿಯಾಗಿರುವ ಈಕೆ ತನ್ನ ಮಾರ್ಕೆಟಿಂಗ್ ಅನಾಲಿಸ್ಟ್ ಹುದ್ದೆ ಕಳೆದುಕೊಂಡಿದ್ದರಲ್ಲದೆ ಸಾಕಷ್ಟು ಅವಮಾನ ಹಾಗೂ ಬೆದರಿಕೆಗಳನ್ನೂ ಎದುರಿಸಿದ್ದರು.

ಆದರೆ ಆಕೆ ಇತ್ತೀಚೆಗೆ ನಡೆದ ರಾಜ್ಯ ಚುನಾವಣೆಗಳಲ್ಲಿ ಲೌಡನ್ ಕೌಂಟಿ ಬೋರ್ಡ್ ಆಫ್ ಸುಪರ್‌ವೈರ್ಸ್ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಯನ್ನು ಸೋಲಿಸಿ ವಿಜಯಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಸರಣಿ ಸೋಲನ್ನಪ್ಪಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)