varthabharthi


ಕ್ರೀಡೆ

ಚೀನಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ

ಮೊದಲ ಸುತ್ತಿನಲ್ಲೇ ಸೆನಾ ಹೊರಕ್ಕೆ, ಕಶ್ಯಪ್ 2 ನೇ ಸುತ್ತಿಗೆ

ವಾರ್ತಾ ಭಾರತಿ : 7 Nov, 2019

ಫುರೊ, ನ.6: ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರು ಸ್ಥಳೀಯ ಆಟಗಾರ್ತಿ ಕೈ ಯಾನ್ ಯಾನ್ ವಿರುದ್ಧ ಚೀನಾ ಓಪನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸೋತು ಹೊರ ನಡೆದಿದ್ದಾರೆ. ಬುಧವಾರ ಕೇವಲ 24 ನಿಮಿಷಗಳ ಕಾಲ ನಡೆದ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನ ಹಣಾಹಣಿಯಲ್ಲಿ ವಿಶ್ವದ ನಂ.9 ಆಟಗಾರ್ತಿ ಸೈನಾ 9-21 12-21 ಅಂತರದಿಂದ ಸೋತರು. ಆದಾಗ್ಯೂ, ಪುರುಷರ ಸಿಂಗಲ್ಸ್ ನಲ್ಲಿ ಸೈನಾ ಅವರ ಪತಿ ಮತ್ತು ಕೋಚ್ ಪಿ.ಕಶ್ಯಪ್ ಅವರು ಥಾಯ್ಲೆಂಡ್‌ನ ಸಿತಿಕೋಮ್ ಥಾಮಸಿನ್ ವಿರುದ್ಧ ನೇರ ಗೇಮ್‌ಗಳಿಂದ ಗೆಲುವು ದಾಖಲಿಸಿದ್ದಾರೆ.

 ಕಶ್ಯಪ್ ತನ್ನ ಎದುರಾಳಿಯನ್ನು 43 ನಿಮಿಷಗಳಲ್ಲಿ 21-14 21-3 ಅಂತರರಿಂದ ಮಣಿಸಿದರು. ಅವರು ಎರಡನೇ ಸುತ್ತಿನಲ್ಲಿ ಡೆನ್ಮಾರ್ಕ್‌ನ ಏಳನೇ ಶ್ರೇಯಾಂಕದ ವಿಕ್ಟರ್ ಆಕ್ಸೆಲ್ಸನ್‌ರನ್ನು ಎದುರಿಸಲಿದ್ದಾರೆ.

ಮಿಶ್ರ ಡಬಲ್ಸ್ ಜೋಡಿ ಪ್ರಣವ್ ಜೆರ್ರಿ ಚೋಪ್ರಾ ಮತ್ತು ಸಿಕ್ಕಿ ರೆಡ್ಡಿ ಅವರು ಮೊದಲ ಸುತ್ತಿನಲ್ಲಿ ನಿರ್ಗಮಿಸಿದರು. ಇವರಿಬ್ಬರು 14-21 14-21 ಅಂತರದಲ್ಲಿ ಚೀನಾ ತೈಪೆಯ ವಾಂಗ್ ಚಿ-ಲಿನ್ ಮತ್ತು ಚೆಂಗ್ ಚಿ ಯಾ ಅವರಿಗೆ ಶರಣಾದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)