varthabharthi


ಕರ್ನಾಟಕ

ಹನೂರು: ಕಾಡಾನೆ ದಾಳಿ; ಓರ್ವ ಮೃತ್ಯು

ವಾರ್ತಾ ಭಾರತಿ : 7 Nov, 2019

ಹನೂರು: ಕಾಡಾನೆ ದಾಳಿಗೆ ತುತ್ತಾಗಿ ವ್ಯಕ್ತಿಯೊಬ್ಬರು ಸಾವನಪ್ಪಿರುವ ಘಟನೆ ತಾಲ್ಲೂಕಿನ ಮಲೆ ಮಹದೇಶ್ವರಬೆಟ್ಟದ ಅರಣ್ಯ ವಾಪ್ತಿಯ ಕೀರನಹೊಲ ಗ್ರಾಮದ ಬಳಿ ನೆಡೆದಿದೆ. ಕಿರನಹೂಲ ಗ್ರಾಮದ ಮಹಾದೇವ(45) ಮೃತಪಟ್ಟವರು.

ಮಹಾದೇವ ಇಬ್ಬರು  ಸ್ನೇಹಿತರೊಂದಿಗೆ ಶನೇಶ್ವರ ದೇವಾಲಯಕ್ಕೆ ತೆರಳುತ್ತಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡಿದ್ದ ಮಹಾದೇವ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಈ ಸಂಬಂಧ ಅರಣ್ಯ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)